HOME » NEWS » National-international » BJPS SUVENDU ADHIKARI HIRING CRIMINALS IN NANDIGRAM TRINAMOOL COMPLAINS MAK

Mamata Banerjee: ಸುವೇಂದು ಅಧಿಕಾರಿ ನಂದಿಗ್ರಾಮದ ಗೆಲುವಿಗಾಗಿ ಕ್ರಿಮಿನಲ್​ಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ; ಮಮತಾ ಕಿಡಿ

ಸುಧೀರ್ಘ ಎಂಟು ಹಂತಗಳಲ್ಲಿ ನಡೆಯಲಿರುವ ಬಂಗಾಳ ಚುನಾವಣೆಯಲ್ಲಿ ಹೆಚ್ಚು ಹೈ-ವೋಲ್ಟೇಜ್ ಕ್ಷೇತ್ರ ಎಂದು ನಂದಿಗ್ರಾಮವನ್ನು ಪರಿಗಣಿಸಲಾಗಿದೆ. ಇಲ್ಲಿ ಆಢಳಿತರೂಡ ಟಿಎಂಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ಬಿಟ್ಟು ಬಿಜೆಪಿ ಸೇರಿದ ಸುವೇಂದು ಅಧಿಕಾರಿ ನಡುವೆ ನೇರ ಸ್ಪರ್ಧೆ ನಡೆಯಲಿದೆ.

news18-kannada
Updated:March 23, 2021, 3:12 PM IST
Mamata Banerjee: ಸುವೇಂದು ಅಧಿಕಾರಿ ನಂದಿಗ್ರಾಮದ ಗೆಲುವಿಗಾಗಿ ಕ್ರಿಮಿನಲ್​ಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ; ಮಮತಾ ಕಿಡಿ
ಸುವೆಂಧು ಅಧಿಕಾರಿ.
  • Share this:
ಕೋಲ್ಕತ್ತಾ (ಮಾರ್ಚ್​ 23); ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಸಲು ತೆರಳಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲೆ ಇತ್ತೀಚೆಗೆ ದಾಳಿಯಾಗಿತ್ತು. ಈ ದಾಲಿಯಲ್ಲಿ ತೀವ್ರವಾಗಿ ಗಾಯಗೊಂಡ ಮಮತಾ ಬ್ಯಾನರ್ಜಿ ಇದೀಗ ವೀಲ್​ಚೇರ್​ನಲ್ಲೇ ಕುಳಿತು ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಈ ಘಟನೆಯ ಬೆನ್ನಿಗೆ ಬಂಗಾಳದಲ್ಲಿ ಚುನಾವಣೆ ಕಾವು ಸಹ ದಿನಿದಿಂದ ದಿನಕ್ಕೆ ಏರುತ್ತಲೇ ಇದೆ. ಈ ನಡುವೆ ಇಂದು ನಂದಿಗ್ರಾಮದ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ವಿರುದ್ಧ ಮತ್ತೊಂದು ಆರೋಪವನ್ನು ಮುಂದಿಟ್ಟಿರುವ ಸಿಎಂ ಮಮತಾ ಬ್ಯಾನರ್ಜಿ, "ನಂದಿಗ್ರಾಮದಲ್ಲಿ ಗೆಲ್ಲಲೇಬೇಕು ಎಂದು ಪಣ ತೊಟ್ಟಿರುವ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಅಪರಾಧಿಗಳು, ಗೂಂಡಾಗಳನ್ನು ತಮ್ಮ ಪ್ರಚಾರಕ್ಕಾಗಿ ನೇಮಿಸಿಕೊಳ್ಳುತ್ತಿದ್ದಾರೆ" ಎಂದು ಕಟು ಆರೋಪವನ್ನು ಮುಂದಿಟ್ಟಿದ್ದಾರೆ.

ಈ ಬಗ್ಗೆ ತೃಣಮೂಲ ಕಾಂಗ್ರೆಸ್​ ಪಕ್ಷದ ಹಿರಿಯ ಮುಖಂಡ ಡೆರೆಕ್ ಒಬ್ರಿಯೆನ್ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಆ ಪತ್ರದಲ್ಲಿ, "ಸುವೇಂದು ಅಧಿಕಾರಿ ನಂದಿಗ್ರಾಮದಲ್ಲಿ “ಅಪರಾಧಿಗಳು ಮತ್ತು ಸಮಾಜ ಘಾತುಕರನ್ನು ಚುನಾವಣಾ ಪ್ರಚಾರಕ್ಕೆ ನೇಮಿಸಿಕೊಳ್ಳುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ. ಅಲ್ಲದೆ, ನಂದಿಗ್ರಾಮದಲ್ಲಿ ತೊಂದರೆಯುಂಟು ಮಾಡಲು ಆಶ್ರಯ ಪಡೆದಿರುವ ಶಂಕಿತ ಆರೋಪಿಗಳ ವಿಳಾಸಗಳನ್ನು ಪಟ್ಟಿ ಮಾಡಿದ್ದಾರೆ. ಇವರನ್ನು ತಕ್ಷಣವೇ ಹಿಡಿದು ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಅವರು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.

"30-40 ಹುಡುಗರು" ಕಳೆದ ಡಿಸೆಂಬರ್‌ನಿಂದ ಕಾಲಿಪಾಡ ಶೀ ಅವರ ಮನೆಯಲ್ಲಿ ಉಳಿದು ಕೊಂಡು ಮೋಟಾರ್‌ಸೈಕಲ್‌ಗಳಲ್ಲಿ ಗ್ರಾಮದಲ್ಲಿ ಸಂಚರಿಸುತ್ತಿದ್ದಾರೆ. ಸುವೇಂದು ಅಧಿಕಾರಿ ಆ ಮನೆಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದರು" ಎಂದು ತೃಣಮೂಲ ನಾಯಕ ಆರೋಪಿಸಿದ್ದಾರೆ.

ಇದನ್ನೂ ಓದಿ: Mars: ಮಂಗಳ ಗ್ರಹದಲ್ಲಿ ಭೂಕಂಪ; ಕೋರ್ ಪ್ರಮಾಣ ದಾಖಲಿಸಿದ ಇನ್​ಸೈಟ್ ಲ್ಯಾಂಡರ್

ಸುಮಾರು 50 ಜನರು ಒಬ್ಬ ಮೇಘನಾಥ್ ಪಾಲ್ ಅವರ ಮನೆಯಲ್ಲಿ ತಂಗಿದ್ದಾರೆ. ಅವರಲ್ಲಿ ಸುವೇಂದು ಅಧಿಕಾರಿಯ ಚುನಾವಣಾ ಏಜೆಂಟ್ ಕೂಡ ಇದ್ದಾರೆ ಎಂದು ಪತ್ರದಲ್ಲಿ ಬರೆಯಲಾಗಿದೆ. ತಲಾ 20-30 ಜನರಿಗೆ ಆಶ್ರಯ ನೀಡುವ ಇನ್ನೂ ಎರಡು ಮನೆಗಳನ್ನು ಅವರು ಪಟ್ಟಿ ಮಾಡಿದ್ದಾರೆ. ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದರೂ ಕೂಡ ಅವರು ಕ್ರಮ ಕೈಗೊಳ್ಳಲು ನಿರಾಕರಿಸಿದ್ದಾರೆ ಎಂದು ತೃಣಮೂಲ ರಾಜ್ಯಸಭಾ ಸದಸ್ಯ ತಿಳಿಸಿದ್ದಾರೆ.

ಸುಧೀರ್ಘ ಎಂಟು ಹಂತಗಳಲ್ಲಿ ನಡೆಯಲಿರುವ ಬಂಗಾಳ ಚುನಾವಣೆಯಲ್ಲಿ ಹೆಚ್ಚು ಹೈ-ವೋಲ್ಟೇಜ್ ಕ್ಷೇತ್ರ ಎಂದು ನಂದಿಗ್ರಾಮವನ್ನು ಪರಿಗಣಿಸಲಾಗಿದೆ. ಇಲ್ಲಿ ಆಢಳಿತರೂಡ ಟಿಎಂಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ಬಿಟ್ಟು ಬಿಜೆಪಿ ಸೇರಿದ ಸುವೇಂದು ಅಧಿಕಾರಿ ನಡುವೆ ನೇರ ಸ್ಪರ್ಧೆ ನಡೆಯಲಿದೆ.
Published by: MAshok Kumar
First published: March 23, 2021, 3:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories