ನನ್ನ ಕ್ಷೇತ್ರ ರಾಮರಾಜ್ಯ.. ಇಲ್ಲಿ ಮಾಂಸ ತಿನ್ನಂಗಿಲ್ಲ, ಇದನ್ನೇ ತಿನ್ನಬೇಕು: BJP MLA ವಿವಾದಾತ್ಮಕ ಹೇಳಿಕೆ

ಲೋನಿಯಲ್ಲಿ ಒಂದೇ ಒಂದು ಮಾಂಸದ ಅಂಗಡಿ ಕಂಡು ಬಂದರೂ ನಾನು ಅಧಿಕಾರಿಗಳಿಗೆ ಹೇಳಲು ಬಯಸುತ್ತೇನೆ.... ಲೋನಿಯಲ್ಲಿ ರಾಮರಾಜ್ಯವಿದೆ. ರಾಮರಾಜ್ಯದಲ್ಲಿ ಮಾಂಸದ ಅಂಗಡಿಗಳಿಗೆ ಅನುಮತಿ ನೀಡಬೇಕೇ?

ಬಿಜೆಪಿ ಶಾಸಕ ನಂದ ಕಿಶೋರ್​​

ಬಿಜೆಪಿ ಶಾಸಕ ನಂದ ಕಿಶೋರ್​​

  • Share this:
ಗಾಜಿಯಬಾದ್​​: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ (Uttara Pradesh Election Result 2022) ಬಿಜೆಪಿ (BJP) ಭರ್ಜರಿ ಗೆಲವು ಸಾಧಿಸಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಈ ಬಾರಿಯೂ ಅಧಿಕಾರಕ್ಕೆ ಬಂದಿದೆ. ಸಿಎಂ ಯೋಗಿ ಆದಿತ್ಯನಾಥ್ (CM Yogi Adityanath) ಸತತ 2ನೇ ಬಾರಿಗೆ ಅಧಿಕಾರದ ಗದ್ದುಗೆ ಏರಲಿದ್ದಾರೆ. ಈ ಹಿಂದೆ ಸಂಸದರಾಗಿ ಆಯ್ಕೆಯಾಗಿದ್ದ ಯೋಗಿ, ಈ ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಉತ್ತರ ಪ್ರದೇಶದ 403 ಸ್ಥಾನಗಳಿದ್ದು ಸರ್ಕಾರ ರಚನೆಗೆ 202 ಸ್ಥಾನಗಳು ಅಗತ್ಯವಿತ್ತು. ಆದರೆ ಬಿಜೆಪಿ 274 ಸ್ಥಾನಗಳಲ್ಲಿ ಭರ್ಜರಿ ಜಯ ಸಾಧಿಸಿದೆ. ಇನ್ನು ಎಸ್‌ಪಿ 124 ಸ್ಥಾನಗಳನ್ನು ಪಡೆದಿದ್ದರೆ, 2 ಸ್ಥಾನಗಳಲ್ಲಷ್ಟೇ ಕಾಂಗ್ರೆಸ್ ಜಯ ಸಾಧಿಸಿದೆ. ಇನ್ನುಳಿದಂತೆ ಬಿಎಸ್‌ಪಿ 1 ಸ್ಥಾನ ಗಳಿಸಿದ್ರೆ, 2 ಸ್ಥಾನಗಳಲ್ಲಿ ಇತರರು ಜಯ ಸಾಧಿಸಿದ್ದಾರೆ. ಗೆಲುವಿನ ಸಂತೋಷದಲ್ಲಿರುವ ಬಿಜೆಪಿ ಶಾಸಕರಲ್ಲಿ ಒಬ್ಬರು ಎಲ್ಲರ ಹುಬ್ಬೇರುವಂತ ಹೇಳಿಕೆ ನೀಡಿದ್ದಾರೆ. ಲೋನಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ನಂದ ಕಿಶೋರ್ (MLA Nand Kishor) ಅವರು ಮಾಂಸದ ಅಂಗಡಿಗಳ ಮೇಲೆ ನಿಷೇಧ ಹೇರುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ.

ಇದನ್ನೂ ಓದಿ: Election Result: ಫಲಿಸಿದ ಬಿಜೆಪಿ 'ಪಂಚ'ತಂತ್ರ, ಪಂಜಾಬ್‌ನಲ್ಲಿ 'ಆಮ್‌ ಆದ್ಮಿ' ಗೆಲುವು, ಎಲ್ಲೂ 'ಕೈ'ಗಿಲ್ಲ ಅಧಿಕಾರ!

ರಾಮರಾಜ್ಯದಲ್ಲಿ ಮಾಂಸದ ಅಂಗಡಿಗಳಿಗೆ ಅನುಮತಿ ಇಲ್ಲ

ತಮ್ಮ ಕ್ಷೇತ್ರದಲ್ಲಿ ಮಾಂಸದ ಅಂಗಡಿಗಳು ವ್ಯಾಪಾರ ನಡೆಸಿದರೆ ಅಧಿಕಾರಿಗಳೇ ಹೊಣೆಯಾಗುತ್ತಾರೆ ಎಂದು ಎಚ್ಚರಿಸಿದರು.  ಲೋನಿಯಲ್ಲಿ ಒಂದೇ ಒಂದು ಮಾಂಸದ ಅಂಗಡಿ ಕಂಡು ಬಂದರೂ ನಾನು ಅಧಿಕಾರಿಗಳಿಗೆ ಹೇಳಲು ಬಯಸುತ್ತೇನೆ.... ಲೋನಿಯಲ್ಲಿ ರಾಮರಾಜ್ಯವಿದೆ. ರಾಮರಾಜ್ಯದಲ್ಲಿ ಮಾಂಸದ ಅಂಗಡಿಗಳಿಗೆ ಅನುಮತಿ ನೀಡಬೇಕೇ? ಎಂದು ಅವರು ಕಾರ್ಯಕ್ರಮವೊಂದರಲ್ಲಿ ನೆರೆದಿದ್ದವರಿಗೆ ಕೇಳಿದರು. ಜನರು ಹಾಲು ಮತ್ತು ತುಪ್ಪವನ್ನು ಸೇವಿಸಬೇಕು ಎಂದೂ ಇದೇ ಸಂದರ್ಭದಲ್ಲಿ ಅವರು ಹೇಳಿದ್ದಾರೆ.

ವಿವಾದದ ಬಳಿಕ, ಯೂ ಟರ್ನ್​​

ಚುನಾವಣೆಗು ಮುನ್ನ ಲೋನಿಯಲ್ಲಿ ಅಕ್ರಮವಾಗಿ ಪ್ರಾಣಿಗಳನ್ನು ವಧೆ ಮಾಡಿದ ಹಲವಾರು ನಿದರ್ಶನಗಳು ವರದಿಯಾಗಿದ್ದವು. ಮಾಂಸದ ಅಂಗಡಿಗಳಿಗೆ ಅನುಮತಿ ಇಲ್ಲ ಎಂಬ ತಮ್ಮ ಹೇಳಿಕೆ ವಿವಾದಕ್ಕೆ ಗುರಿಗಾಗುತ್ತಿದಂತೆ, ಶಾಸಕ ನಂದ ಕಿಶೋರ್​ ಅವರು ತಮ್ಮ ಹೇಳಿಕೆಯಿಂದ ಯೂ ಟರ್ನ್​​ ಹೊಡೆದಿದ್ದಾರೆ. ಸಂಪೂರ್ಣ ನಿಷೇಧದ ಅರ್ಥದಲ್ಲಿ ನಾನು ಹೇಳಿಲ್ಲ, ಬದಲಿಗೆ ಯಾವುದೇ ಅಕ್ರಮ ಅಥವಾ ಪರವಾನಗಿ ರಹಿತ ಅಂಗಡಿಗಳಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದೇನೆ ಅಂತ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: Rape Case: ತಂದೆಯಿಂದಲೇ ಅತ್ಯಾಚಾರ, 10 ವರ್ಷದ ಬಾಲಕಿ ಗರ್ಭಿಣಿ, ಕೋರ್ಟ್ ಹೇಳಿದ್ದೇನು?

" ಮಾಂಸ ತಿನ್ನುವುದನ್ನು ನಿಷೇಧಿಸುವುದಿಲ್ಲ. ಪರವಾನಗಿ ಇಲ್ಲದೆ ಯಾವುದೇ ಅಂಗಡಿಯನ್ನು ಅನುಮತಿಸಲಾಗುವುದಿಲ್ಲ. ಮಾಂಸವನ್ನು ತಿನ್ನಲು ಬಯಸುವವರು ದೆಹಲಿಗೆ ಹೋಗಬಹುದು" ಎಂದು ಅವರು ಇಂಡಿಯಾ ಟಿವಿಗೆ ತಿಳಿಸಿದರು.  ನಂದ್ ಕಿಶೋರ್ ಅವರು ರಾಷ್ಟ್ರೀಯ ಲೋಕದಳದ ಮದನ್ ಭಯ್ಯಾ ಅವರನ್ನು ಸೋಲಿಸಿ 8,676 ಮತಗಳ ಅಂತರದಿಂದ ಲೋನಿ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ನಂದ ಕಿಶೋರ್​ಗೆ 2ನೇ ಸಲ ಗೆಲುವು

ಲೋನಿಯ ಹಾಲಿ ಶಾಸಕರಾಗಿರುವ ನಂದ್ ಕಿಶೋರ್  ಅವರನ್ನು ಎರಡನೇ ಬಾರಿಗೆ ಬಿಜೆಪಿ ಕಣಕ್ಕಿಳಿಸಿತ್ತು. 2017 ರ ಚುನಾವಣೆಯಲ್ಲಿ ಅವರು ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಜಾಕಿರ್ ಅಲಿ ಮತ್ತು ರಾಷ್ಟ್ರೀಯ ಲೋಕದಳ ಅಭ್ಯರ್ಥಿ ಮದನ್ ಭಯ್ಯಾ ಅವರನ್ನು ಸೋಲಿಸಿದರು. ನಾಲ್ಕು ಬಾರಿ ಶಾಸಕರಾಗಿದ್ದ ಮದನ್ ಭಯ್ಯಾ ಅವರನ್ನು ಆರ್‌ಎಲ್‌ಡಿ-ಎಸ್‌ಪಿ ಮೈತ್ರಿಕೂಟ ಕಣಕ್ಕಿಳಿಸಿತ್ತು. ಅಭಿವೃದ್ಧಿ ಮತ್ತು ಭ್ರಾತೃತ್ವದತ್ತ ಗಮನ ಹರಿಸುವುದಾಗಿ ಮದನ್ ಭಯ್ಯಾ ಹೇಳಿದ್ದರು. 2012ರಲ್ಲಿ ಲೋನಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಭಯ್ಯಾ ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಎದುರು ಸೋತಿದ್ದರು. 2017 ರ ಚುನಾವಣೆಯಲ್ಲಿ ಅವರು ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ನಂದ್ ಕಿಶೋರ್ ಗುರ್ಜರ್ ವಿರುದ್ಧ ಸೋತಿದ್ದಾರೆ.
Published by:Kavya V
First published: