news18-kannada Updated:October 31, 2020, 3:57 PM IST
ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದ ಕೇಂದ್ರ ಸಚಿವೆ
ನವದೆಹಲಿ (ಅ.31): ಬಿಹಾರ ಚುನಾವಣಾ ಪ್ರಚಾರದ ವೇಳೆ ರಾಜ್ಯದ ಜನರಿಗೆ ಉಚಿತ ಕೋವಿಡ್-19 ಲಸಿಕೆ ನೀಡುತ್ತೇನೆಂದು ಭರವಸೆ ನೀಡಿರುವ ಬಿಜೆಪಿಯ ಪ್ರಣಾಳಿಕೆ ನೀತಿ ಸಂಹಿತೆ ಉಲ್ಲಂಘನೆಯಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದ ಬಿಜೆಪಿ ರಾಜ್ಯದ ಪ್ರತಿಯೊಬ್ಬರಿಗೂ ಉಚಿತ ಕೊರೋನಾ ಲಸಿಕೆಯನ್ನು ನೀಡುವುದಾಗಿ ಘೋಷಣೆ ಮಾಡಿತ್ತು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಆರ್ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ಚುನಾಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಚುನಾವಣೆ ಸಮಯದಲ್ಲಿ ಈ ರೀಥಿ ಭರವಸೆ ನೀಡಿರುವ ಬಿಜೆಪಿ ಸರ್ಕಾರ ಅಧಿಕಾರವನ್ನು ಸಂಪೂರ್ಣವಾಗಿ ಉಲ್ಲಂಘಿಸಿದೆ ಮತ್ತು ಇದೊಂದು ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಎಂದು ಆರೋಪಿಸಿದ್ದರು. ಈ ಕುರಿತು ಆಯೋಗಕ್ಕೆ ಲಿಖಿತ ದೂರು ಸಲ್ಲಿಸಿದ್ದರು.
ಅಕ್ಟೋಬರ್ 22ರಂದು ಬಿಜೆಪಿ ಕೇಂದ್ರ ಸಚವೆ ನಿರ್ಮಾಲ ಸೀತಾರಾಮನ್ ಪಾಟ್ನಾದಲ್ಲಿ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದರು. 11 ಅಂಶಗಳನ್ನೊಳಗೊಂಡ ಈ ಸಂಕಲ್ಪ ಪತ್ರ, ರಾಜ್ಯದಲ್ಲಿ ಎನ್ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದರೆ, ಬಿಹಾರಿಗಳಿಗೆ ಉಚಿತ ಕೊರೋನಾ ಸೋಂಕಿನ ಲಸಿಕೆ ನೀಡುವ ಭರವಸೆ ನೀಡಿತು.
ಈ ಕುರಿತು ಟೀಕಿಸಿದ ವಿಪಕ್ಷಗಳು ಲಸಿಕೆ ಪಡೆಯುವುದು ಪ್ರತಿ ಭಾರತೀಯರ ಹಕ್ಕು ಎಂದು ಪ್ರತಿಪಾದಿಸಿದ್ದವು. ಈ ರೀತಿ ಭರವಸೆ ನೀಡುವ ನೀಡುವ ಮೂಲಕ ಬಿಜೆಪಿಯ ಹತಾಶೆ ಮನಸ್ಥಿತಿ ತೋರುತ್ತಿದೆ ಎಂದು ವ್ಯಂಗ್ಯವಾಡಿದ್ದವು. ಶಿವಸೇನಾ ನಾಯಕ ಉದ್ಧವ್ ಠಾಕ್ರೆ ಕೂಡ ಇದನ್ನು ಖಂಡಿಸಿ ಹೇಳಿಕೆ ನೀಡಿದ್ದ ಅವರು, ಬಿಹಾರ ಹೊರತು ಪಡಿಸಿ ಉಳಿದ ರಾಜ್ಯದವು ಬಾಂಗ್ಲಾದೇಶಿಗರೇ ಎಂದು ಪ್ರಶ್ನಿಸಿದ್ದರು.
ಇದನ್ನು ಓದಿ: ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಕಾಂಗ್ರೆಸ್ ನಾಯಕ ಕಮಲ್ನಾಥ್ರನ್ನು ಕಿತ್ತೊಗೆದ ಚುನಾವಣಾ ಆಯೋಗ
ಇನ್ನು ಈ ಕುರಿತು ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದ ರಾಹುಲ್ ಗಾಂಧಿ, ಭಾರತ ಸರ್ಕಾರ ಕೋವಿಡ್ ತಂತ್ರ ಬಳಕೆಗೆ ಮುಂದಾಗಿದೆ. ದಯವಿಟ್ಟು ರಾಜ್ಯವಾರು ಚುನಾವಣಾ ವೇಳಪಟ್ಟಿಯನ್ನು ಘೋಷಿಸಿ ಈ ಮೂಲಕ ಲಸಿಕೆ ಯಾವಾಗ ಸಿಗಲಿದೆ ಎಂಬುದು ನಿಮ್ಮ ಸುಳ್ಳು ಭರವಸೆ ಮೂಲಕ ತಿಳಿಯಲಿದೆ ಎಂದಿದ್ದರು.
ಗೋಖಲೆ ಸಲ್ಲಿಸಿದ ದೂರಿಗೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗ, ಇದು ಸಂವಿಧಾನವನ್ನು ಕೆಟ್ಟದಾಗಿ ಬಿಂಬಿಸುವುದು, ಚುನಾವಣಾ ಭರವಸೆಯ ನಿಜಾಂಶವನ್ನು ಖಂಡಿಸುವುದು ಅಥವಾ ಅನಗತ್ಯ ಪ್ರಭಾವ ಬೀರು ಯಾವುದೇ ಅಂಶವನ್ನು ಇದು ಒಳಗೊಂಡಿಲ್ಲ ಎಂದು ತಿಳಿಸಿದೆ. ಅಲ್ಲದೇ ಮೂರು ಎಂಸಿಸಿ ನಿಬಂಧನೆ ಉಲ್ಲೇಖಿಸಲಾಗಿದ್ದು, ಈ ಭರವಸೆ ನೀತಿ ಸಂಹಿತೆ ಉಲ್ಲಂಘನೆಯಲ್ಲ ಎಂದು ತಿಳಿಸಿದೆ.
Published by:
Seema R
First published:
October 31, 2020, 3:57 PM IST