ಬುಲಂದ್​ಶಹರ್ ಪ್ರಕರಣ; ಪೊಲೀಸ್​ ಅಧಿಕಾರಿ ಹತ್ಯೆ ಆರೋಪಿ ಪೊಲೀಸರ ವಶಕ್ಕೆ

ಬಿಜೆಪಿ ಯುವ ಮೋರ್ಚಾ ನಾಯಕ ಶಿಖರ್​ ಅಗರ್​​ವಾಲ್ ಬಂಧಿತ ಆರೋಪಿ. ಉತ್ತರ ಪ್ರದೇಶದ ಹಪುರ್​ ಜಿಲ್ಲೆಯಲ್ಲಿ ಬಂಧಿಸಲಾಗಿದೆ.

Latha CG | news18india
Updated:January 10, 2019, 11:55 AM IST
ಬುಲಂದ್​ಶಹರ್ ಪ್ರಕರಣ; ಪೊಲೀಸ್​ ಅಧಿಕಾರಿ ಹತ್ಯೆ ಆರೋಪಿ ಪೊಲೀಸರ ವಶಕ್ಕೆ
ಆರೋಪಿ ಶಿಖರ್​ ಅಗರ್​ವಾಲ್​​
Latha CG | news18india
Updated: January 10, 2019, 11:55 AM IST
ಲಕ್ನೋ,(ಜ.10): ಬುಲಂದ್​ಶಹರ್​ ಹಿಂಸಾಚಾರ ಘಟನೆಯಲ್ಲಿ ಪೊಲೀಸ್​ ಅಧಿಕಾರಿ ಸುಬೋಧ್​ ಕುಮಾರ್​ ಸಿಂಗ್​ ಅವರ ಹತ್ಯೆಯ ಮುಖ್ಯ ಆರೋಪಿಗಳಲ್ಲಿ ಒಬ್ಬಾತನನ್ನು ಬುಧವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ.

ಬಿಜೆಪಿ ಯುವ ಮೋರ್ಚಾ ನಾಯಕ ಶಿಖರ್​ ಅಗರ್​​ವಾಲ್ ಬಂಧಿತ ಆರೋಪಿ. ಉತ್ತರ ಪ್ರದೇಶದ ಹಪುರ್​ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಈತ ಕಳೆದ ತಿಂಗಳು ವಿಡಿಯೋ ಒಂದನ್ನು ಬಿಡುಗಡೆ ಮಾಡಿ, ಅದರಲ್ಲಿ ಪೊಲೀಸ್​ ಅಧಿಕಾರಿ ಸುಬೋಧ್​ ಕುಮಾರ್​ ಸಿಂಗ್​ ಅವರನ್ನು ನಿಂದಿಸಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಬುಲಂದ್​ಶಹರ್ ಹಿಂಸಾಚಾರ ಪ್ರಕರಣ; ಪ್ರಮುಖ ಆರೋಪಿಯ ಬಂಧನ

ಗೋಹತ್ಯೆಗೆ ಸಂಬಂಧಿಸಿ ಬುಲಂದ್‌ಶಹರ್‌ನಲ್ಲಿ ಕಳೆದ ವರ್ಷ ಡಿ.3ರಂದು ಭುಗಿಲೆದ್ದಿದ್ದ ಹಿಂಸೆಯಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಸುಬೋಧ್‌ ಕುಮಾರ್​​ ಸಿಂಗ್‌ ಮತ್ತು ಸುಮಿತ್‌ ಕುಮಾರ್‌ ಎಂಬ ತರುಣನನ್ನು ಜನಸಮೂಹ ಚಚ್ಚಿ ಕೊಂದಿತ್ತು. ಇದಕ್ಕೆ ಶಿಖರ್‌ ಅಗರ್‌ವಾಲ್‌ ಕುಮ್ಮಕ್ಕು ನೀಡಿದ್ದ ಎನ್ನಲಾಗಿದೆ.

ಕಳೆದ ವಾರ ಪ್ರಕರಣದ ಪ್ರಮುಖ ಆರೋಪಿ ಯೋಗೇಶ್​ ರಾಜ್ ಎಂಬಾತನನ್ನು ಬಂಧಿಸಲಾಗಿತ್ತು. ಈತ ಭಜರಂಗದಳದ ನಾಯಕನಾಗಿದ್ದ. ಡಿ 28 ರಂದು ಕೊಲೆ ಪ್ರಕರಣದ ಮತ್ತೊಬ್ಬ ಆರೋಪಿ ಪ್ರಶಾಂತ್ ನಾತ್​ ಎಂಬಾತನನ್ನು ಪೊಲೀಸರು ಬಂಧಿಸಿದ್ದು. ಈತ ನವದೆಹಲಿಯಲ್ಲಿ ಕ್ಯಾಬ್​ ಚಾಲಕನಾಗಿ ಕೆಲಸ ಮಾಡುತ್ತಿದ್ದ. ವಿಚಾರಣೆ ವೇಳೆ ಪೊಲೀಸ್​ ಅಧಿಕಾರಿಗೆ ಗುಂಡು ಹಾರಿಸಿದ್ದು ತಾನೇ ಎಂದು ಒಪ್ಪಿಕೊಂಡಿದ್ದ.

First published:January 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ