News18 India World Cup 2019

ಲೋಕಸಭಾ ಜಿದ್ದಾಜಿದ್ದಿ: ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ; ದೆಹಲಿಗೆ ರಾಜ್ಯ ನಾಯಕರು ದೌಡು!

ನ್ನ ಭದ್ರಕೋಟೆಯಾಗಿದ್ದ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಡದಲ್ಲಿ ಬಿಜೆಪಿ ಸೋತು ಕಾಂಗ್ರೆಸ್​​ ಅಧಿಕ್ಕಾರಕ್ಕೇರಿದೆ. ಇಲ್ಲಿ ಎದುರಾಳಿ ಕಾಂಗ್ರೆಸ್​ ಮುಂದೆ ಸೋತ ಬಿಜೆಪಿ ಈ ಬಾರಿ ಎಚ್ಚೆತ್ತುಕೊಂಡಿದೆ. ಹೇಗಾದರೂ ಮತ್ತೆ ಮತದಾರರನ್ನು ತಲುಪು ಯೋಜನೆಗಳನ್ನು ಹಾಕಿಕೊಂಡಿದೆ. ಕಳೆದ 2014ರ ಚುನಾವಣೆಯಲ್ಲಿ ಗೆದ್ದ ಸೀಟುಗಳಿಗಿಂತ ಹೆಚ್ಚು ಸ್ಥಾನಗಳು ಗೆಲ್ಲಬೇಕು. ಸ್ಪರ್ಧಿಸಿ ಸೋತ 123 ಸ್ಥಾನಗಳಲ್ಲಿಯೂ ನಮ್ಮ ಛಾಪು ಮೂಡಿಸಬೇಕೆಂದು ಬಿಜೆಪಿ ಹೊರಟಿದೆ.

Ganesh Nachikethu | news18
Updated:January 11, 2019, 4:34 PM IST
ಲೋಕಸಭಾ ಜಿದ್ದಾಜಿದ್ದಿ: ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ; ದೆಹಲಿಗೆ ರಾಜ್ಯ ನಾಯಕರು ದೌಡು!
ಅಮಿತ್​ ಶಾ-ಬಿಎಸ್​ವೈ
Ganesh Nachikethu | news18
Updated: January 11, 2019, 4:34 PM IST
ನವದೆಹಲಿ(ಜ.11): ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಮಾತ್ರ ಬಾಕಿಯಿವೆ. ಒಂದೆಡೆ ಕಾಂಗ್ರೆಸ್​-ಜೆಡಿಎಸ್​ ನಾಯಕರು​ ಸಮ್ಮಿಶ್ರ ಸರ್ಕಾರದ ತಿಕ್ಕಾಟದ ನಡುವೆಯೇ ಹೆಣಗಾಡುತ್ತಿದ್ದರೇ, ಇತ್ತ ಬಿಜೆಪಿ ಮಾತ್ರ ಲೋಕಸಭೆ ರಣರಂಗಕ್ಕೆ ಭರ್ಜರಿ ತಯಾರಿ ನಡೆಸಿಕೊಳ್ಳುತ್ತಿದೆ. ಹೀಗಾಗಿಯೇ ಚುನಾವಣೆಯ ಕಾರ್ಯತಂತ್ರಗಳು ಹೇಗಿರಬೇಕು? ಎಂಬುದರ ಕುರಿತಂತೆ ಹೈಕಮಾಂಡ್​ ಜೊತೆ ಚರ್ಚಿಸಲು ರಾಜ್ಯ ಬಿಜೆಪಿ ನಾಯಕರು ದೆಹಲಿಗೆ ದೌಡಾಯಿಸಿದ್ದಾರೆ ಎನ್ನಲಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ರಾಜ್ಯ ನಾಯಕರೊಂದಿಗೆ ಸಮಾಲೋಚನೆ ಸಭೆ ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ರಾಜ್ಯದ ಶಾಸಕರು, ಪರಿಷತ್ ಸದಸ್ಯರು, ಸಂಸದರು, ವಿವಿಧ ಮೋರ್ಚಾ ಅಧ್ಯಕ್ಷರು, ಪದಾಧಿಕಾರಿಗಳು ದೆಹಲಿಗೆ ದೌಡಾಯಿಸಿದ್ದಾರೆ. ಇಲ್ಲಿ ಮುಂದಿನ ಲೋಕಸಭಾ ಚುನಾವಣೆಗೆ ವಿವಿಧ ಸಮುದಾಯದವರ ಮತ ಹೇಗೆ? ಸೆಳೆಯಬೇಕೆಂದು ಕಾರ್ಯತಂತ್ರ ರೂಪಿಸಲಿದ್ದಾರೆ. ಈ ನಿಟ್ಟಿನಲ್ಲಿ ಇಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದೆ ಎನ್ನುತ್ತಿವೆ ಮೂಲಗಳು.

ಮಹಾಸಮರಕ್ಕೆ ಸಜ್ಜು:

ರಾಜ್ಯದಲ್ಲಿ ಕಾಂಗ್ರೆಸ್​-ಜೆಡಿಎಸ್​​ ಮೈತ್ರಿಯನ್ನು ಹೇಗೆ ಎದುರಿಸಬೇಕು; ಚುನಾವಣೆ ಮಹಾಸಮರಕ್ಕೆ ನಡೆಸಿಕೊಳ್ಳಬೇಕಾದ ಪೂರ್ವ ಸಿದ್ಧತೆ; ವಿರೋಧ ಪಕ್ಷಗಳನ್ನು ಸೆದೆ ಬಡಿಯುವುದು ಹೇಗೆ?; ಗೆಲ್ಲಲು ರಣತಂತ್ರ, ಪ್ರಣಾಳಿಕೆ ಸಿದ್ಧತೆ ಜೊತೆಗೆ ಹಲವು ವಿಚಾರಗಳನ್ನು ಚರ್ಚಿಸಲಿದ್ದಾರೆ. ಹಾಗೆಯೇ ಇತ್ತೀಚೆಗಿನ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಯ ಸೋಲಿಗೆ ಕಾರಣವೇನು? ಎನ್ನುವುದರ ಬಗ್ಗೆಯೂ ಅವಲೋಕನೆ ನಡೆಯಲಿದೆ. ಇದೇ ವೇಳೆ ರಾಜ್ಯ ನಾಯಕರ ಚುನಾವಣೆ ತಯಾರಿ ಕುರಿತು ಪರಾಮರ್ಶೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಅಭ್ಯರ್ಥಿಗಳ ಆಯ್ಕೆ ಮಾನದಂಡ:

ಈಗಾಗಲೇ ರಾಜ್ಯದ ಎಲ್ಲಾ ಲೋಕಸಭಾ ಅಭ್ಯರ್ಥಿಗಳ ಕುರಿತಂತೆ ಸ್ಥಳೀಯ ನಾಯಕರಿಂದ ಬಿಜೆಪಿ ಹೈಕಮಾಂಡ್​​ ಮಾಹಿತಿ ಸಂಗ್ರಹಿಸಿದ್ದಾರೆ. ಹಾಗೆಯೇ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ಎಸ್​​ ಯಡಿಯೂರಪ್ಪನವರಿಂದಲೂ ಲೋಕಸಭಾ ಅಭ್ಯರ್ಥಿಗಳ ಸ್ಥಿತಿಗತಿ ಹೇಗಿದೆ? ಎಂಬ ಬಗೆಗಿನ ಮಾಹಿತಿಯೂ ಕಲೆ ಹಾಕಿದ್ದಾರೆ. ಸ್ಥಳೀಯ ನಾಯಕರ ಅಭಿಪ್ರಾಯವೂ ಕಾರ್ಯಕಾರಿಣಿ ಸಭೆಯಲ್ಲಿ ಮುಂದಿಡಲಿದ್ದಾರೆ. ಈ ಸಂದರ್ಭದಲ್ಲಿ ಅಭ್ಯರ್ಥಿಗಳ ಆಯ್ಕೆ ಮಾನದಂಡ? ಯಾರಿಗೆ ಅವಕಾಶ ನೀಡಬೇಕು? ಯಾವ ಹಾಲಿ ಸಂಸದರನ್ನು ಕೈ ಬಿಡಬೇಕೆಂದು ನಿರ್ಧರಿಸಲಿದ್ದಾರೆ.
Loading...

ಇದನ್ನೂ ಓದಿ: CBI vs CBI | ಅಲೋಕ್ ವರ್ಮಾ ರಾಜೀನಾಮೆ; ರಾಕೇಶ್ ಅಸ್ತನಾ ವಿರುದ್ಧದ ತನಿಖೆಗೆ ತಡೆ ಇಲ್ಲ

ಬಿಜೆಪಿ ವಿರೋಧಿ ಪಡೆ:

ಇನ್ನು ದೇಶಾದ್ಯಂತ ಬಿಜೆಪಿ ವಿರೋಧಿ ಪಡೆ ಪುಟಿದೇಳುತ್ತಿದೆ. ಕಾಂಗ್ರೆಸ್​​ ಸೇರಿದಂತೆ ಪ್ರಾದೇಶಿಕ ಪಕ್ಷಗಳು ಪ್ರಧಾನಿ ಮೋದಿ ಸರ್ಕಾರವನ್ನು ಬಗ್ಗು ಬಡೆಯಲು ಮುಂದಾಗಿವೆ. ಇದೀಗ ಕೇಂದ್ರ ವಿಕ್ಷಗಳಿಗೆ ಸೆಡ್ಡು ಹೊಡೆದು ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದ ಬಿಜೆಪಿಯೂ ಹಲವು ರಣತಂತ್ರಗಳನ್ನು ರೂಪಿಸುತ್ತಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದ 123 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲಲು "ಮಿಷನ್‌ 123' ಯೋಜನೆ ಜಾರಿಗೊಳಿಸಲು ಮುಂದಾಗಿದೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದೆಲ್ಲೆಡೆ 100 ದಿನಗಳಲ್ಲಿ 20 ರಾಜ್ಯಗಳಲ್ಲಿ ಸಾಲುಸಾಲು ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಗಿದೆ.

ಸೋತ ಕ್ಷೇತ್ರಗಳನ್ನು ಗೆಲ್ಲಲು ಯೋಜನೆ:

ತನ್ನ ಭದ್ರಕೋಟೆಯಾಗಿದ್ದ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಡದಲ್ಲಿ ಬಿಜೆಪಿ ಸೋತು ಕಾಂಗ್ರೆಸ್​​ ಅಧಿಕ್ಕಾರಕ್ಕೇರಿದೆ. ಇಲ್ಲಿ ಎದುರಾಳಿ ಕಾಂಗ್ರೆಸ್​ ಮುಂದೆ ಸೋತ ಬಿಜೆಪಿ ಈ ಬಾರಿ ಎಚ್ಚೆತ್ತುಕೊಂಡಿದೆ. ಹೇಗಾದರೂ ಮತ್ತೆ ಮತದಾರರನ್ನು ತಲುಪು ಯೋಜನೆಗಳನ್ನು ಹಾಕಿಕೊಂಡಿದೆ. ಕಳೆದ 2014ರ ಚುನಾವಣೆಯಲ್ಲಿ ಗೆದ್ದ ಸೀಟುಗಳಿಗಿಂತ ಹೆಚ್ಚು ಸ್ಥಾನಗಳು ಗೆಲ್ಲಬೇಕು. ಸ್ಪರ್ಧಿಸಿ ಸೋತ 123 ಸ್ಥಾನಗಳಲ್ಲಿಯೂ ನಮ್ಮ ಛಾಪು ಮೂಡಿಸಬೇಕೆಂದು ಬಿಜೆಪಿ ಹೊರಟಿದೆ.

ಇದನ್ನೂ ಓದಿ: 2002ರ ಪತ್ರಕರ್ತ ಛತ್ರಪತಿ ಹತ್ಯೆ ಪ್ರಕರಣ: ಗುರ್ಮೀತ್ ಬಾಬಾ ಸೇರಿ ನಾಲ್ವರು ತಪ್ಪಿತಸ್ಥರು – ಸಿಬಿಐ ಕೋರ್ಟ್ ತೀರ್ಪು

ಇನ್ನು 2014ರ ಚುನಾವಣೆಯಲ್ಲಿ ಪಶ್ಚಿಮ ಬಂಗಾಲ, ಅಸ್ಸಾಂ, ಒಡಿಶಾಗಳ ಒಟ್ಟು 77 ಲೋಕಸಭಾ ಕ್ಷೇತ್ರಗಳ ಪೈಕಿ ಕೇವಲ 10 ಸ್ಥಾನಗಳನ್ನು ಮಾತ್ರ ಬಿಜೆಪಿ ಮಡಿಲಿಗೆ ಹಾಕಿಕೊಂಡಿತ್ತು. ಹಾಗೆಯೇ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳದಲ್ಲಿಯೂ ಭಾರೀ ಕಡಿಮೆ ಪ್ರಮಾಣದಲ್ಲಿ ಗೆಲ್ಲುವಂತಾಯ್ತು. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಮೇಲಿನ ರಾಜ್ಯಗಳಲ್ಲಿ ಹೆಚ್ಚು ಸ್ಥಾನಗಳು ಬಿಜೆಪಿಗೆ ಒಲಿಯುವಂತೆ ಮಾಡಲು ಕೇಸರಿ ಪಡೆ ಯೋಜನೆಯನ್ನು ಹಾಕಿಕೊಂಡಿದೆ. ಈ ಹಿನ್ನೆಲೆಯಲ್ಲಿ ಇಂದು ರಾಷ್ಟ್ರೀಯ ಬಿಜೆಪಿ ಕಾರ್ಯಕಾರಿಣಿಸಿ ಸಭೆ ನಡೆಸುತ್ತಿದ್ದು, ಎಲ್ಲಾ ವಿಚಾರಗಳ ಬಗ್ಗೆ ಚರ್ಚಿಸಲಿದ್ದಾರೆ.

----------------
ಮಾಧ್ಯಮದೊಂದಿಗೆ ಜಟಾಪಟಿಗಿಳಿದ ಯಶ್
First published:January 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...