ಉಗ್ರರ ಗುಂಡಿಗೆ ಕಾಶ್ಮೀರದ ಬಿಜೆಪಿ ಕಾರ್ಯಕರ್ತರ ಬಲಿ; ಅಮಿತ್ ಶಾ ಸಂತಾಪ

news18
Updated:August 22, 2018, 11:31 AM IST
ಉಗ್ರರ ಗುಂಡಿಗೆ ಕಾಶ್ಮೀರದ ಬಿಜೆಪಿ ಕಾರ್ಯಕರ್ತರ ಬಲಿ; ಅಮಿತ್ ಶಾ ಸಂತಾಪ
ಶಬೀರ್ ಅಹ್ಮದ್ ಭಟ್
news18
Updated: August 22, 2018, 11:31 AM IST
ನ್ಯೂಸ್ 18 ಕನ್ನಡ

ನವದೆಹಲಿ (ಆಗಸ್ಟ್ 22): ಭಯೋತ್ಪಾದಕರಿಂದ ಅಪಹರಕ್ಕೊಳಗಾಗಿದ್ದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತ ಬುಧವಾರ ಬೆಳಗ್ಗೆ ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಕೊಲೆಯಾಗಿದ್ದಾರೆ.

ಶಬೀರ್ ಅಹ್ಮದ್ ಭಟ್ ಎಂಬುವರೆ ಉಗ್ರರ ಗುಂಡಿಗೆ ಬಲಿಯಾದ ಬಿಜೆಪಿ ಕಾರ್ಯಕರ್ತ. ಕೆಲ ಗಂಟೆಗಳ ಹಿಂದೆ ಉಗ್ರರು ಪುಲ್ವಾಮಾ ಜಿಲ್ಲೆಯ ರಖ್ ಎ ಲಿಟರ್ ನಗರದ ಭಟ್ ಮನೆಯಲ್ಲಿಯೇ ಈ ಕೃತ್ಯ ಎಸಗಿದ್ದಾರೆ.
ಶಬೀರ್ ಅಹ್ಮದ್ ಭಟ್ ಅವರು ಮಂಗಳವಾರ ಉಗ್ರರಿಂದ ಅಪಹರಣಕ್ಕೆ ಒಳಗಾಗಿದ್ದರು. ಇಂದು ಬೆಳಗ್ಗೆ ಅವರು ಗುಂಡೇಟಿಗೆ ಬಲಿಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶಬೀರ್​ ಅವರಿಗೆ ರಕ್ಷಣೆಗೆ ಸೈನಿಕ ಸಿಬ್ಬಂದಿಯನ್ನೂ ನಿಯೋಜಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
Loading...

ಜಮ್ಮು-ಕಾಶ್ಮಿರದಲ್ಲಿ ನಗರಸಭೆ ಮತ್ತು ಪಂಚಾಯತ್ ಚುನಾವಣೆ ಕಳೆದ ವಾರ ಘೋಷಣೆಯಾದ ನಂತರ ಮೊದಲ ರಾಜಕೀಯ ಕಾರ್ಯಕರ್ತರ ಕೊಲೆ ಇದಾಗಿದೆ.

ಶಬೀರ್ ಅಹ್ಮದ್ ಭಟ್ ಅವರ ಸಾವಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸಂತಾಪ ಸೂಚಿಸಿದ್ದಾರೆ. "ಯುವಕರು ಭವ್ಯ ಭವಿಷ್ಯ ಆಯ್ಕೆ ಮಾಡಿಕೊಳ್ಳುವುದನ್ನು ಉಗ್ರರು ತಡೆಗಟ್ಟಲು ಸಾಧ್ಯವಿಲ್ಲ. ಎಗ್ಗಿಲ್ಲದೇ ನಡೆಯುತ್ತಿರುವ ಉಗ್ರರ ಅಟ್ಟಹಾಸ ಬಹುಕಾಲ ಉಳಿಯುವುದಿಲ್ಲ," ಎಂದು ಶಾ ತಿಳಿಸಿದ್ದಾರೆ.

First published:August 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ