15ರಲ್ಲಿ ಬಿಜೆಪಿ ಕನಿಷ್ಠ ಎಂಟರಲ್ಲಾದರೂ ಗೆಲುವು ಸಾಧಿಸಲಿದೆ; ಸಚಿವ ಕೆ.ಎಸ್.ಈಶ್ವರಪ್ಪ

ಆಪರೇಷನ್ ಕಮಲ ಮಾಡಲಾಗುತ್ತಿದೆ ಎಂಬ ದಿನೇಶ್ ಗೂಂಡುರಾವ್ ಹೇಳಿಕೆ ಅವರಿಗೆ ನಾಚಿಕೆ ಆಗಬೇಕು. ಅವರಿಗೆ ಕಾಂಗ್ರೆಸ್ ಶಾಸಕರ ಮೇಲೆ ನಂಬಿಕೆಯೇ ಇಲ್ಲವಾಗಿದೆ. ಅವರ ಶಕ್ತಿಹೀನತೆ, ದೌರ್ಬಲ್ಯ ತೋರಿಸಿಕೊಡುತ್ತಿದ್ದಾರೆ. ದಿನೇಶ್ ಗೂಂಡೂರಾವ್ ಅವರೇ, ಅವರ ಶಾಸಕರಿಗೆ ಆಪರೇಷನ್ ಕಮಲಕ್ಕೆ ಒಳಗಾಗಲು ಹೇಳಿಕೊಡುವಂತಿದೆ ಎಂದು ಈಶ್ವರಪ್ಪ ಹೇಳಿದರು.

HR Ramesh | news18-kannada
Updated:December 4, 2019, 3:18 PM IST
15ರಲ್ಲಿ ಬಿಜೆಪಿ ಕನಿಷ್ಠ ಎಂಟರಲ್ಲಾದರೂ ಗೆಲುವು ಸಾಧಿಸಲಿದೆ; ಸಚಿವ ಕೆ.ಎಸ್.ಈಶ್ವರಪ್ಪ
ಕೆ.ಎಸ್​.ಈಶ್ವರಪ್ಪ
  • Share this:
ಶಿವಮೊಗ್ಗ: ಮುಂದಿನ ಮೂರೂವರೆ ವರ್ಷ ಸ್ಥಿರ ಸರ್ಕಾರ ಇರಬೇಕೋ ಬೇಡವೋ ಎಂಬುದನ್ನು ಜನರು ನಾಳೆ ತೀರ್ಮಾನ ಮಾಡುತ್ತಾರೆ. ನನಗೆ ಅನುಭವ ಇರುವ ಪ್ರಕಾರ, ಈ ಚುನಾವಣೆಯಲ್ಲಿ ಜನರು ಬಿಜೆಪಿಗೆ ಆಶೀರ್ವಾದ ಮಾಡಲಿದ್ದಾರೆ ಎಂಬ ನಂಬಿಕೆ ನನಗಿದೆ ಎಂದು ಗ್ರಾಮಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈರಶ್ವರಪ್ಪ, ಬಿಜೆಪಿ 15 ಕ್ಕೆ 15 ಸ್ಥಾನ ಗೆಲ್ಲುವ ಅವಕಾಶ ಇದೆ, ಆದರೂ, 8ಕ್ಕಿಂತ ಕಡಿಮೆ ಸ್ಥಾನಕ್ಕೆ ಬಿಜೆಪಿ ಇಳಿಯಲ್ಲ ಎಂದರು.

ಮತ್ತೆ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ,  ಖರ್ಗೆಯವರು ಕಲಬುರಗಿಯಲ್ಲಿ ಸೋತಿರುವುದು ಮರೆತಿದ್ದಾರೆ. ಸಿದ್ದರಾಮಯ್ಯ, ಚಾಮುಂಡೇಶ್ವರಿಯಲ್ಲಿ ಸೋತಿದ್ದು ಮರೆತಿದ್ದಾರೆ. ನಿಖಿಲ್ ಸೋತಿರುವುದನ್ನು ಮರೆತಿದ್ದಾರೆ. 9 ರ ನಂತರ ಖರ್ಗೆಯವರನ್ನು ಸಿಎಂ ಮಾಡಲು ಸಿದ್ಧರಾಮಯ್ಯನವರನ್ನು ಒಪ್ಪಿಸುತ್ತಿದ್ದಾರೆ ಎಂಬ ವಿಷಯ ತೇಲಿ ಬಂದಿದೆ. ಎಷ್ಟು ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಳ್ಳುತ್ತಿದ್ದಿರಾ ಎಂಬುದು ಮೊದಲು ನೋಡಿಕೊಳ್ಳಿ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್-ಜೆಡಿಎಸ್ ತಿರುಕನ ಕನಸು ಕಾಣುತ್ತಿದೆ. ಬೆಳಗಿನಿಂದ ಭಿಕ್ಷೆ ಬೇಡಿ ರಾತ್ರಿ ಬೆಳ್ಳಿ ತಟ್ಟೆಯಲ್ಲಿ ಚಿಕನ್, ಮಟನ್ ತಿನ್ನುವ ರೀತಿಯಲ್ಲಿ ರಾತ್ರಿ ಸಮಯದಲ್ಲಿ ಕಾಂಗ್ರೆಸ್-ಜೆಡಿಎಸ್ ಕನಸು ಕಾಣುತ್ತಿದೆ. ಹೊಂದಾಣಿಕೆ ಮಾಡಿಕೊಳ್ಳಲು ಹೊರಟಿರುವ ಕಾಂಗ್ರೆಸ್-ಜೆಡಿಎಸ್ ಪರಿಸ್ಥಿತಿ ಹೀಗಾಗಿದೆ. ಮೊದಲು ತಿರುಕನ ಕನಸು ಬಿಡಿ. ಸಿದ್ಧರಾಮಯ್ಯನೂ ಸಿಎಂ ಆಗಲ್ಲ, ಖರ್ಗೆನೂ ಸಿಎಂ ಆಗಲ್ಲ ಎಂದು ಭವಿಷ್ಯ ನುಡಿದರು.

ಇದನ್ನು ಓದಿ: ಮೈಸೂರು ಪೊಲೀಸ್ ಐಜಿಪಿ ತಮ್ಮ ಕೆಲಸ ಬಿಟ್ಟು ಬಿಜೆಪಿ ಕಚೇರಿಯಲ್ಲಿ ಗುಲಾಮಗಿರಿ ಮಾಡಲಿ; ಹೆಚ್​.ಡಿ. ರೇವಣ್ಣ ಕಿಡಿ

ಮತ್ತೆ ಆಪರೇಷನ್ ಕಮಲ ಮಾಡಲಾಗುತ್ತಿದೆ ಎಂಬ ದಿನೇಶ್ ಗೂಂಡುರಾವ್ ಹೇಳಿಕೆ ಅವರಿಗೆ ನಾಚಿಕೆ ಆಗಬೇಕು. ಅವರಿಗೆ ಕಾಂಗ್ರೆಸ್ ಶಾಸಕರ ಮೇಲೆ ನಂಬಿಕೆಯೇ ಇಲ್ಲವಾಗಿದೆ. ಅವರ ಶಕ್ತಿಹೀನತೆ, ದೌರ್ಬಲ್ಯ ತೋರಿಸಿಕೊಡುತ್ತಿದ್ದಾರೆ. ದಿನೇಶ್ ಗೂಂಡೂರಾವ್ ಅವರೇ, ಅವರ ಶಾಸಕರಿಗೆ ಆಪರೇಷನ್ ಕಮಲಕ್ಕೆ ಒಳಗಾಗಲು ಹೇಳಿಕೊಡುವಂತಿದೆ. ದಿನೇಶ್ ಮನಸ್ಸಲ್ಲಿ ಈ ರೀತಿ ಭಾವನೆ ಯಾಕೆ ಬಂದಿದೆ ಎಂಬುದು ಗೊತ್ತಿಲ್ಲ. ಒಂದು ಕಡೆ ಖರ್ಗೆಗೆ ಸಿ.ಎಂ. ಮಾಡಲು ಹೊರಟಿರುವುದು ಅವರೇ ಹೇಳುತ್ತಿದ್ದಾರೆ. ಮತ್ತೊಂದು ಕಡೆ ಬಿಜೆಪಿ ಆಪರೇಷನ್ ಕಮಲ ಮೂಲಕ ಅಧಿಕಾರಕ್ಕೆ ಬರುತ್ತೆ ಎಂದು ಹೇಳುತ್ತಿದ್ದಿರಾ ಎಂದು ಕಾಂಗ್ರೆಸ್ ದ್ವಂದ್ವ ಹೇಳಿಕೆ ಉದಾಹರಣೆ ನೀಡಿದರು.
First published: December 4, 2019, 3:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading