ಪಕ್ಷದ ಹಿರಿಯ ಮುಖಂಡನ ಮೇಲೆ ಲೈಂಗಿಕ ಕಿರುಕುಳದ ದೂರು ನೀಡಿದ ಬಿಜೆಪಿ ಕಾರ್ಯಕರ್ತೆ

ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದ ನಂತರ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಂಜಯ್​ ಕುಮಾರ್​ ಅವರನ್ನು ತೆಗೆದು ಹಾಕಲಾಗಿದೆ.

Latha CG | news18
Updated:November 22, 2018, 12:22 PM IST
ಪಕ್ಷದ ಹಿರಿಯ ಮುಖಂಡನ ಮೇಲೆ ಲೈಂಗಿಕ ಕಿರುಕುಳದ ದೂರು ನೀಡಿದ ಬಿಜೆಪಿ ಕಾರ್ಯಕರ್ತೆ
ಸಂಜಯ್​ ಕುಮಾರ್​
  • News18
  • Last Updated: November 22, 2018, 12:22 PM IST
  • Share this:
ಡೆಹ್ರಾಡೂನ್​,(ನ.13): ರಾಜಕೀಯ ವಲಯದಲ್ಲೂ #MeToo ಆರೋಪ ಕೇಳಿಬಂದಿದ್ದು, ಲೈಂಗಿಕ ಕಿರುಕುಳದ ಆರೋಪದ ಮೇಲೆ ಪಕ್ಷದ ಹಿರಿಯ ಮುಖಂಡ ಸಂಜಯ್​​ ಕುಮಾರ್​ ಮೇಲೆ ಬಿಜೆಪಿ ಕಾರ್ಯಕರ್ತೆ ದೂರು ದಾಖಲಿಸಿದ್ದಾರೆ.

ನ.10 ರ ರಾತ್ರಿ ಬಿಜೆಪಿ ಕಾರ್ಯಕರ್ತೆ ಪೊಲೀಸರಿಗೆ ಇ-ಮೇಲ್​ ಕಳಿಸುವ ಮೂಲಕ ದೂರು ನೀಡಿದ್ದಾರೆ. 5 ವರ್ಷಗಳಿಂದ ತನಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮೂಲಗಳ ಪ್ರಕಾರ, ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದ ನಂತರ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಂಜಯ್​ ಕುಮಾರ್​ ಅವರನ್ನು ತೆಗೆದು ಹಾಕಲಾಗಿದೆ ಎನ್ನಲಾಗಿದೆ.  ಆರ್​ಎಸ್​ಎಸ್​ನ ಮಾಜಿ ಪ್ರಚಾರಕರಾಗಿದ್ದ ಸಂಜಯ್​ ಕುಮಾರ್​​ ಸುಮಾರು 7 ವರ್ಷಗಳಿಂದ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ: ಕೊಲೆ ಪ್ರಕರಣದ ಆರೋಪಿಯಾಗಿದ್ದ ಕೇರಳದ ಪೊಲೀಸ್​ ಅಧಿಕಾರಿ ಆತ್ಮಹತ್ಯೆ

ಮಹಿಳೆಯು ಸಂಜಯ್​​ ಕುಮಾರ್​ ವಿರುದ್ಧ ಲೈಂಗಿಕ ಕಿರಕುಳದ ಆರೋಪ ಮಾಡಿದ್ದಾರೆ. ಆದರೆ ಆಕೆ ಲಿಖಿತ ದೂರು ನೀಡಲು ಮುಂದೆ ಬಂದಿಲ್ಲ. ಹೀಗಾಗಿ  ಸಂಜಯ್​​ ಕುಮಾರ್​ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಲು ಪಕ್ಷದಲ್ಲಿ ಯಾವುದೇ ಪುರಾವೆಗಳಿಲ್ಲ ಎಂದು  ಉತ್ತರಾಖಂಡದ ಬಿಜೆಪಿ ಅಧ್ಯಕ್ಷ ಅಜಯ್​ ಭಟ್​ ತಿಳಿಸಿದ್ದಾರೆ.

ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದ ವೇಳೆ ತನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದರು. ಅಷ್ಟೇ ಅಲ್ಲದೇ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಕಾರ್ಯಕರ್ತೆ ದೂರಿನ ಪ್ರತಿಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪಕ್ಷದ ಮುಖಂಡರ ಬಳಿ ಹೇಳಿದ್ದರೂ ಸಹ ಅವರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಹೇಳಿದ್ದಾರೆ. ​

ಇದನ್ನೂ ನೋಡಿ:
First published:November 13, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading