• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Assembly Election 2023: ಮತ್ತೆ ಬಿಜೆಪಿ ತೆಕ್ಕೆಗೆ ತ್ರಿಪುರಾ-ನಾಗಾಲ್ಯಾಂಡ್, ಮೇಘಾಲಯದಲ್ಲೂ ಮೈತ್ರಿ ಫಿಕ್ಸ್​!

Assembly Election 2023: ಮತ್ತೆ ಬಿಜೆಪಿ ತೆಕ್ಕೆಗೆ ತ್ರಿಪುರಾ-ನಾಗಾಲ್ಯಾಂಡ್, ಮೇಘಾಲಯದಲ್ಲೂ ಮೈತ್ರಿ ಫಿಕ್ಸ್​!

ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ

ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ

ನಾಗಾಲ್ಯಾಂಡ್ ವಿಧಾನಸಭೆಯಲ್ಲಿ ಆಡಳಿತಾರೂಢ ಎನ್‌ಡಿಪಿಪಿ-ಬಿಜೆಪಿ ಮೈತ್ರಿಕೂಟ 60ರಲ್ಲಿ 35 ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತ ಪಡೆದಿದ್ದರೆ, ತ್ರಿಪುರಾದಲ್ಲಿ ಬಿಜೆಪಿ-ಐಪಿಎಫ್‌ಟಿ ಮೈತ್ರಿಕೂಟ 32 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಸತತ 2ನೇ ಬಾರಿಗೆ ಸರ್ಕಾರ ರಚನೆ ಮಾಡಲಿದೆ. 2018 ರಲ್ಲಿ ಎಡರಂಗದ ಭದ್ರಕೋಟೆಯನ್ನು ಛಿದ್ರ ಮಾಡಿದ್ದ ಬಿಜೆಪಿ-ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ ಮೈತ್ರಿಯೊಂದಿಗೆ ಈಶಾನ್ಯ ರಾಜ್ಯದಲ್ಲಿ ತನ್ನ ಸತತ 2ನೇ ಗೆಲುವಿನ ಸಿಹಿಯುಂಡಿದೆ.

ಮುಂದೆ ಓದಿ ...
  • News18 Kannada
  • 2-MIN READ
  • Last Updated :
  • New Delhi, India
  • Share this:

ನವದೆಹಲಿ: ಈಶಾನ್ಯದ ಮೂರು ರಾಜ್ಯಗಳ ಚುನಾವಣೆ (Election) ಫಲಿತಾಂಶ ಬಹುತೇಕ ಹೊರಬಿದ್ದಿದ್ದು, ನಾಗಾಲ್ಯಾಂಡ್ (Nagaland) ಮತ್ತು ತ್ರಿಪುರಾಗಳಲ್ಲಿ (Tripura) ಬಿಜೆಪಿ (BJP) ಮೈತ್ರಿಕೂಟ ಅಧಿಕಾರಕ್ಕೆ ಮರಳುವುದು ಖಚಿತವಾಗಿದೆ. ತ್ರಿಪುರಾದಲ್ಲಿ ಮಾಣಿಕ್​ ಸಹಾ (Manik Saha) ಗೆಲುವು ಸಾಧಿಸಿದ್ದು, 2ನೇ ಬಾರಿಗೆ ಮುಖ್ಯಮಂತ್ರಿ ಹುದ್ದೆಗೇರಲಿದ್ದಾರೆ. ಸಹಾ ಕಾಂಗ್ರೆಸ್​ನ (Congress) ಹಿರಿಯ ನಾಯಕ ಆಶಿಶ್ ಕುಮಾರ್ ವಿರುದ್ಧ 1257 ಮತಗಳಿಂದ ಗೆಲುವು ಸಾಧಿಸಿದ್ದಾರೆ. ನಾಗಲ್ಯಾಂಡ್​ನಲ್ಲಿ ಎನ್​ಡಿಪಿಪಿ ಜೊತೆಗಿನ ಮೈತ್ರಿಕೂಟ ಬಹುಮತ ಪಡೆದಿದೆ. ಇದರ ಜೊತೆಗೆ ಮೇಘಾಲಯದಲ್ಲಿಯೂ (Meghalaya) ಭಾರತೀಯ ಜನತಾ ಪಕ್ಷ ಉತ್ತಮ ಫಲಿತಾಂಶ ಪಡೆದಿದ್ದು, ಸರ್ಕಾರದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ. ಈಗಾಗಲೇ ಎನ್​ಪಿಪಿ ಕಾನ್ರಾಡ್ ಸಂಗ್ಮಾ ತಮ್ಮ ಪಕ್ಷಕ್ಕೆ ನೆರವು ನೀಡಲು ಬಿಜೆಪಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.


ನಾಗಾಲ್ಯಾಂಡ್ ವಿಧಾನಸಭೆಯಲ್ಲಿ ಆಡಳಿತಾರೂಢ ಎನ್‌ಡಿಪಿಪಿ-ಬಿಜೆಪಿ ಮೈತ್ರಿಕೂಟ ಗುರುವಾರ 60ರಲ್ಲಿ 35 ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತ ಪಡೆದಿದ್ದರೆ, ತ್ರಿಪುರಾದಲ್ಲಿ ಬಿಜೆಪಿ-ಐಪಿಎಫ್‌ಟಿ ಮೈತ್ರಿಕೂಟ 32 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಸತತ 2ನೇ ಬಾರಿಗೆ ಸರ್ಕಾರ ರಚನೆ ಮಾಡಲಿದೆ. 2018 ರಲ್ಲಿ ಎಡರಂಗದ ಭದ್ರಕೋಟೆಯನ್ನು ಛಿದ್ರ ಮಾಡಿದ್ದ ಬಿಜೆಪಿ-ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ ಮೈತ್ರಿಯೊಂದಿಗೆ ಈಶಾನ್ಯ ರಾಜ್ಯದಲ್ಲಿ ತನ್ನ ಸತತ 2ನೇ ಗೆಲುವಿನ ಸಹಿಯುಂಡಿದೆ. ತ್ರಿಪುರಾದಲ್ಲಿ ಎಡರಂಗ-ಕಾಂಗ್ರೆಸ್ ಮೈತ್ರಿಕೂಟ ಇಲ್ಲಿ 14 ಸ್ಥಾನಗಳನ್ನು ಗೆದ್ದರೆ, ತಿಪ್ರಾ ಮೋಥಾ ತನ್ನ ಚುನಾವಣಾ ಚೊಚ್ಚಲ ಪರೀಕ್ಷೆಯಲ್ಲೇ 13 ಸ್ಥಾನಗಳನ್ನು ಗೆಲ್ಲುವ ಮೂಲಕ ಗಮನ ಸೆಳೆದಿದೆ.


ಇದನ್ನೂ ಓದಿ: Election Commission: ಚುನಾವಣಾ ಆಯುಕ್ತರ ನೇಮಕದಲ್ಲಿ ಪಾಲ್ಗೊಳ್ತಾರೆ ವಿಪಕ್ಷ ನಾಯಕರು! ಸಮಿತಿ ರಚನೆಗೆ ಸುಪ್ರಿಂ ಮಹತ್ವದ ಆದೇಶ


ಅಮಿತ್​ ಶಾಗೆ ಸಂಗ್ಮಾ ಕರೆ?


ಮೇಘಾಲಯದಲ್ಲಿ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಹೆಚ್ಚು ಸ್ಥಾನಗಳನ್ನು ಗೆದ್ದರೂ ಬಹುಮತದ ಕೊರತೆಯನ್ನು ಅನುಭವಿಸಿದೆ. ಇದರ ಪರಿಣಾಮವಾಗಿ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು ಸರ್ಕಾರ ರಚಿಸಲು ಬೆಂಬಲ ಕೋರಿ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಸಂಪರ್ಕಿಸಿದ್ದಾರೆ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಟ್ವೀಟ್ ಮಾಡಿದ್ದಾರೆ. ಕ್ರಿಶ್ಚಿಯನ್ ಪ್ರಾಬಲ್ಯದ ರಾಜ್ಯದಲ್ಲಿ ಬಿಜೆಪಿಯ ಗೆಲುವು ಕಳೆದ ಐದು ವರ್ಷಗಳಲ್ಲಿ ಪಕ್ಷಕ್ಕೆ ಹೆಚ್ಚುತ್ತಿರುವ ಸ್ವೀಕಾರಾರ್ಹತೆಯನ್ನು ಸೂಚಿಸುತ್ತದೆ. ಅಲ್ಲದೆ ಅಲ್ಪಸಂಖ್ಯಾತರ ವಿರೋಧಿ ಎಂಬ ಹಣೆಪಟ್ಟಿಯನ್ನು ಬಿಜೆಪಿ ತೊಡೆದುಹಾಕಿದೆ ಎಂದು ತಿಳಿಸಿದ್ದಾರೆ.




ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ ಎನ್​ಪಿಪಿ


ಸಂಗ್ಮಾ ನೇತೃತ್ವದ ಎನ್​ಪಿಪಿ ಬಹುಮತಕ್ಕೆ ಅಗತ್ಯವಿರುವ ಸ್ಥಾನಗಳಿಗಿಂತ ಕೆಲವು ಸೀಟು ಕಡಿಮೆ ಹೊಂದಿದೆ. ಹೀಗಾಗಿ ಬಿಜೆಪಿ ಹಾಗೂ ಪಕ್ಷೇತರರ ನೆರವಿನಿಂದ ಸರ್ಕಾರ ರಚಿಸುವ ಲೆಕ್ಕಾಚಾರ ಹಾಕುತ್ತಿದೆ. ಸಂಗ್ಮಾ ಅವರ ಪಕ್ಷ ಈಗಾಗಲೆ 20 ಸ್ಥಾನಗಳಲ್ಲಿ ಗೆದ್ದಿರುವ ಬಗ್ಗೆ ಅಧಿಕೃತ ಘೋಷಣೆಯಾಗಿದೆ. 6 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಗೆಲ್ಲುವ ಭರವಸೆ ಹೊಂದಿದೆ.


ನೇಫಿಯು ರಿಯೋ 5ನೇ ಬಾರಿ ಅಧಿಕಾರ


ಎನ್‌ಡಿಪಿಪಿ ಮತ್ತು ಅದರ ಮಿತ್ರ ಪಕ್ಷವಾದ ಬಿಜೆಪಿಗೆ ನಾಗಲ್ಯಾಂಡ್​ನಲ್ಲಿ ಗೆಲುವು ದೊರೆತಿದ್ದು, ನೇಫಿಯು ರಿಯೊ ಅವರು ಸತತ ಐದನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ನಾಗಾಲ್ಯಾಂಡ್ ರಾಜಕೀಯ ದಿಗ್ಗಜ ಮತ್ತು ಅದರ ದೀರ್ಘಾವಧಿಯ ಮುಖ್ಯಮಂತ್ರಿ ನೇಫಿಯು ರಿಯೊ ಅವರು ತಮ್ಮ ಪಕ್ಷ ಮತ್ತು ಅದರ ಮಿತ್ರ ಪಕ್ಷವಾದ ಬಿಜೆಪಿಗೆ ಬಹುಮತದ ವಿಜಯದ ನಂತರ ಸತತ ಐದನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.


35 ಸ್ಥಾನಗಳಲ್ಲಿ ಗೆಲುವು


60 ಸದಸ್ಯ ಬಲದ ನಾಗಾಲ್ಯಾಂಡ್ ವಿಧಾನಸಭೆಯಲ್ಲಿ ಎರಡು ಪಕ್ಷಗಳು ಒಟ್ಟಾಗಿ 35 ಸ್ಥಾನಗಳನ್ನು ಪಡೆದುಕೊಂಡಿವೆ. ರಿಯೋ ಈ ಗೆಲುವಿನೊಂದಿಗೆ ಈಶಾನ್ಯ ರಾಜ್ಯವನ್ನು ಮೂರು ಬಾರಿ ಮುನ್ನಡೆಸಿದ್ದ ಹಿರಿಯ ನಾಯಕ ಎಸ್‌ಸಿ ಜಮೀರ್ ಅವರ ದಾಖಲೆಯನ್ನು ಮುರಿದಿದ್ದಾರೆ. ಇಲ್ಲಿಯವರೆಗೆ ಎನ್‌ಡಿಪಿಪಿ 23 ಸ್ಥಾನಗಳನ್ನು ಗೆದ್ದಿದ್ದರೆ ಮತ್ತು ಬಿಜೆಪಿ 12 ಸ್ಥಾನಗಳನ್ನು ಗೆದ್ದಿದೆ, ಜಂಟಿಯಾಗಿ 35 ಸ್ಥಾನಗಳನ್ನು ಗೆದ್ದಿರುವುದಲ್ಲದೆ, ಇನ್ನೂ2 ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿವೆ.


ಈ ಮೂರು ರಾಜ್ಯಗಳಲ್ಲಿ ಬಿಜೆಪಿ ತನ್ನ ಹಿಡಿತವನ್ನು ಉಳಿಸಿಕೊಳ್ಳುವುದರ ಜೊತೆಗೆ 8 ರಲ್ಲಿ 7 ರಾಜ್ಯಗಳಲ್ಲಿ ಸರ್ಕಾರಗಳನ್ನು ಹೊಂದಿದೆ. ಇನ್ನೂ ಒಂದು ಕಾಲದಲ್ಲಿ ಈಶಾನ್ಯದಲ್ಲಿ ಅಸಾಧಾರಣ ಸ್ಥಾನವನ್ನು ಹೊಂದಿದ್ದ ಕಾಂಗ್ರೆಸ್ ಈ ವರ್ಷ ಎಲ್ಲಾ ಮೂರು ರಾಜ್ಯಗಳಲ್ಲಿ ಛಾಪು ಮೂಡಿಸಲು ವಿಫಲವಾಗಿದೆ.

Published by:Rajesha M B
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು