ಬಿಜೆಪಿಗೆ ಭಾರೀ ಬಹುಮತ ಸಿಗಲಿದೆ; ಕೇಂದ್ರ ಸಚಿವ ರಾಜನಾಥ್​ ಸಿಂಗ್​​ ಭವಿಷ್ಯ

543 ಲೋಕಸಭಾ ಕ್ಷೇತ್ರಗಳ ಪೈಕಿ ಸ್ಪಷ್ಟ ಬಹುಮತ ಪಡೆಯಲು 273 ಸ್ಥಾನ ಗೆಲ್ಲಬೇಕು. ಆದರೆ, ಎನ್​ಡಿಎ ಈ ಬಾರಿ 233 ಸ್ಥಾನ ಗೆಲ್ಲಲು ಮಾತ್ರ ಯಶಸ್ವಿಯಾಗಲಿದೆ ಎನ್ನಲಾಗಿದೆ.

ರಾಜನಾಥ್​ ಸಿಂಗ್​

ರಾಜನಾಥ್​ ಸಿಂಗ್​

  • News18
  • Last Updated :
  • Share this:
ನವದೆಹಲಿ(ಮೇ.14): ಬಿಜೆಪಿ ಸರಳ ಬಹುಮತಕ್ಕಿಂತ ಹೆಚ್ಚಿನ ಸೀಟು ಗೆಲ್ಲಲಿದೆ ಎಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್ ಭವಿಷ್ಯ ನುಡಿದಿದ್ದಾರೆ. ಕಳೆದ ಎರಡು ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಬಿಜೆಪಿಗೆ ಭಾರೀ ಬಹುಮತ ಸಿಗಲಿದೆ. ಐದು ವರ್ಷಗಳ ಹಿಂದೆ ಜನರಿಗೆ ನೀಡಿದ್ದ ಭರವಸೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಈಡೇರಿಸಿದ್ಧಾರೆ. ಹಾಗಾಗಿ ಮತದಾರ ಈ ಸಲವೂ ಭಾರೀ ಬಹುಮತದೊಂದಿಗೆ ಬಿಜೆಪಿಯನ್ನು ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಕೇಂದ್ರ ಸಚಿವ ರಾಜನಾಥ್​​ ಸಿಂಗ್​ ಅವರು, ಪ್ರಧಾನಿ ಮೋದಿಯವರ ಮೇಲೆ ಜನರಿಗಿದ್ದ ಭರವಸೆ ಈಗ ನಂಬಿಕೆಯಾಗಿ ಪರಿವರ್ತನೆ ಆಗಿದೆ. ನಮ್ಮ ಆಡಳಿತದ ಕಳೆದ ಐದು ವರ್ಷಗಳಲ್ಲಿ ಎಲ್ಲಿಯೂ ಹಣದುಬ್ಬರ ಸಮಸ್ಯೆ ಎದುರಾಗಲಿಲ್ಲ. ಚುನಾವಣಾ ಪ್ರಚಾರ ಸಂದರ್ಭದಲ್ಲೂ ಎಲ್ಲಿಯೂ ಕೇಳಿ ಬರಲಿಲ್ಲ. ಈ ಸಾಧನೆ ಕೇಂದ್ರ ಸರ್ಕಾರದ ಹಣಕಾಸು ಸಾಮರ್ಥ್ಯವನ್ನು ತೋರಿಸುತ್ತದೆ' ಎಂದರು.

ಇನ್ನು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ನಡೆದ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯಿಸಿದ ರಾಜನಾಥ್​​ ಸಿಂಗ್​ ಅವರು, ಮಮತಾ ಬ್ಯಾನರ್ಜಿಯವರ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಜಾಪ್ರಭುತ್ವದಲ್ಲಿ ಯಾವುದೇ ರೀತಿಯ ರಾಜಕೀಯ ಹಿಂಸಾಚಾರಕ್ಕೆ ಜಾಗವಿಲ್ಲ. ಯಾಕೋ ಗೊತ್ತಿಲ್ಲ ಪಶ್ಚಿಮ ಬಂಗಾಳದಲ್ಲಿ ಮಾತ್ರ ಪದೇಪದೇ ಈ ರೀತಿ ಘಟನೆಗಳು ನಡೆಯುತ್ತಿವೆ. ಇದಕ್ಕೆ ನೇರಹೊಣೆ ಇಲ್ಲಿನ ಸರ್ಕಾರ ಮತ್ತು ಸಿಎಂ ಎಂದು ಮಮತಾ ಬ್ಯಾನರ್ಜಿಯವರತ್ತ ಬೆಟ್ಟು ಮಾಡಿದರು.

ಹಾಗೆಯೇ ಬಿಜೆಪಿ ಹಿಂದೂ ಭಯೋತ್ಪಾದನೆಯನ್ನು ಕುಮಕ್ಕು ನೀಡುತ್ತಿದೆ ಎಂಬ ಕಾಂಗ್ರೆಸ್​ ಆರೋಪಕ್ಕೂ ಸಿಂಗ್​​ ಪ್ರತಿಕ್ರಿಯಿಸಿದರು. ಭಯೋತ್ಪಾದನೆ ಎಂದರೇ ಭಯೋತ್ಪಾದನೆಯೇ. ಅದಕ್ಕೆ ಇದೇ ರೀತಿ ಧರ್ಮ ಎಂಬುದಿಲ್ಲ. 2008ರಲ್ಲೂ ಕಾಂಗ್ರೆಸ್‌ ಇದೇ ರೀತಿ ಹೇಳಿಕೆ ನೀಡಿತ್ತು. ಪ್ರತಿನಿತ್ಯ ಹೀಗೆ ಕಾಂಗ್ರೆಸ್​ ನೀಡುವ ಮೂಲಕ ಬಿಜೆಪಿ ಹೋರಾಟವನ್ನು ದುರ್ಬಲಗೊಳಿಸಲು ಮುಂದಾಗಿದೆ ಎಂದು ಕಿಡಿಕಾರಿದರು.

543 ಲೋಕಸಭಾ ಕ್ಷೇತ್ರಗಳ ಪೈಕಿ ಸ್ಪಷ್ಟ ಬಹುಮತ ಪಡೆಯಲು 273 ಸ್ಥಾನ ಗೆಲ್ಲಬೇಕು. ಆದರೆ, ಎನ್​ಡಿಎ ಈ ಬಾರಿ 233 ಸ್ಥಾನ ಗೆಲ್ಲಲು ಮಾತ್ರ ಯಶಸ್ವಿಯಾಗಲಿದೆ ಎನ್ನಲಾಗಿದೆ. ಕಾಂಗ್ರೆಸ್​​ ಕಳೆದ ಬಾರಿಗಿಂತ ಉತ್ತಮ ಪ್ರದರ್ಶನ ನೀಡಲಿದ್ದು, 167 ಸ್ಥಾನಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲಿದೆ. ಇನ್ನು, ತೃತೀಯ ರಂಗದವರು 143 ಸ್ಥಾನ ಗೆಲ್ಲಲಿದ್ದು, ಈ ಬಾರಿ ಅವರೇ ಕಿಂಗ್​ ಮೇಕರ್​ ಆಗುವ ಎಲ್ಲ ಲಕ್ಷಣ ಗೋಚರವಾಗಿದೆ.
First published: