ನವ ದೆಹಲಿ (ಫೆಬ್ರವರಿ 08); ದೆಹಲಿ ವಿಧಾನಸಭಾ ಚುನಾವಣೆ ಬೆನ್ನಿಗೆ ಫಲಿತಾಂಶ ನೀಡುತ್ತಿರುವ ಮತಗಟ್ಟೆ ಸಮೀಕ್ಷೆಗಳು ದೆಹಲಿಯಲ್ಲಿ ಮತ್ತೊಮ್ಮೆ ಆಮ್ ಆದ್ಮಿ ಪಕ್ಷ ಸರ್ಕಾರ ರಚಿಸುವುದು ಖಚಿತ ಎನ್ನುತ್ತಿವೆ. ಆದರೆ, ಇದಕ್ಕೆ ವ್ಯತಿರೀಕ್ತ ಹೇಳಿಕೆ ನೀಡಿರುವ ದೆಹಲಿ ಬಿಜೆಪಿ ಸಂಸದ ಮನೋಜ್ ತಿವಾರಿ, “ದೆಹಲಿ ಚುನಾವಣೆ ಮಟ್ಟಿಗೆ ಎಲ್ಲಾ ಸಮೀಕ್ಷೆಗಳೂ ಸುಳ್ಳಾಗಲಿವೆ. ಅಲ್ಲದೆ, ಬಿಜೆಪಿ ಅತ್ಯಧಿಕ 48 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ” ಎಂದು ಭವಿಷ್ಯ ನುಡಿದಿದ್ದಾರೆ.
ಈ ಕುರಿತು ಹಿಂದಿಯಲ್ಲಿ ಟ್ವಿಟ್ ಮಾಡಿರುವ ಮನೋಜ್ ತಿವಾರಿ, “ಎಲ್ಲಾ ಮತಗಟ್ಟೆ ಸಮೀಕ್ಷೆಗಳೂ ಸುಳ್ಳಾಗಲಿವೆ. 48 ಸ್ಥಾನಗಳಲ್ಲಿ ಗೆಲುವು ದಾಖಲಿಸುವ ಮೂಲಕ ಬಿಜೆಪಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗದ್ದುಗೆ ಏರಲಿದೆ. ಈ ಸಂದರ್ಭದಲ್ಲಿ ಯಾರೂ ಇವಿಎಂ ಯಂತ್ರವನ್ನು ದೂರಬೇಡಿ” ಎಂದಿದ್ದಾರೆ.
ये सभी एग्ज़िट पोल होंगे fail..
मेरी ये ट्वीट सम्भाल के रखियेगा..
भाजपा दिल्ली में ४८ सीट ले कर सरकार बनायेगी .. कृपया EVM को दोष देने का अभी से बहाना ना ढूँढे..🙏
— Manoj Tiwari (@ManojTiwariMP) February 8, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ