ಲೋಕಸಭೆ ಫಲಿತಾಂಶದಂತೆ ಹರಿಯಾಣ, ಮಹಾರಾಷ್ಟ್ರ ಚುನಾವಣೆಯಲ್ಲಿಯೂ ಕಾಂಗ್ರೆಸ್​ಗೆ ಹೀನಾಯ ಸೋಲು; ಮೋದಿ

ಕಾಂಗ್ರೆಸ್​-ಎಸ್​ಸಿಪಿ ನಾಯಕರು ಜನರ ಮನೋಭಾವನೆಯನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಇದೇ ಕಾರಣಕ್ಕೆ ಅವರು ಲೋಕಸಭೆಯಲ್ಲಿ ಸೋತರು. ಈ ಬಾರಿ ಮತದಾರರು ಅವರಿಗೆ ಕಠಿಣ ಶಿಕ್ಷೆ ನೀಡಲಿದ್ದಾರೆ ಎಂದರು.

Seema.R | news18-kannada
Updated:October 17, 2019, 5:49 PM IST
ಲೋಕಸಭೆ ಫಲಿತಾಂಶದಂತೆ ಹರಿಯಾಣ, ಮಹಾರಾಷ್ಟ್ರ ಚುನಾವಣೆಯಲ್ಲಿಯೂ ಕಾಂಗ್ರೆಸ್​ಗೆ ಹೀನಾಯ ಸೋಲು; ಮೋದಿ
ಪ್ರಧಾನಿ ನರೇಂದ್ರ ಮೋದಿ
  • Share this:
ಸತಾರಾ (ಅ.17): ಹರಿಯಾಣ, ಮಹಾರಾಷ್ಟ್ರ ವಿಧಾನಸಭಾ ಚುನುವಾಣೆ ಭರ್ಜರಿ ಪ್ರಚಾರ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದ ಸತಾರಾದಲ್ಲಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಬಾರಿ ಕೂಡ ಮಹಾರಾಷ್ಟ್ರ, ಹರಿಯಾಣದಲ್ಲಿ ಮತದಾರರು ಕಾಂಗ್ರೆಸ್​ನ್ನು ತಿರಸ್ಕರಿಸಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದಂತೆ ಈ ಎರಡು ರಾಜ್ಯಗಳಲ್ಲಿಯೂ ಬಿಜೆಪಿ ಬಹುಮತಗಳಿಸಿ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದಿದ್ದಾರೆ.

ಕಾಂಗ್ರೆಸ್​-ಎಸ್​ಸಿಪಿ ನಾಯಕರು ಜನರ ಮನೋಭಾವನೆಯನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಇದೇ ಕಾರಣಕ್ಕೆ ಅವರು ಲೋಕಸಭೆಯಲ್ಲಿ ಸೋತರು. ಈ ಬಾರಿ ಮತದಾರರು ಅವರಿಗೆ ಕಠಿಣ ಶಿಕ್ಷೆ ನೀಡಲಿದ್ದಾರೆ ಎಂದರು.

ಛತ್ರಪತಿ ಶಿವಾಜಿ ತಮ್ಮ ಮರಾಠ ಸೈನ್ಯದ ಶಕ್ತಿ ಹೆಚ್ಚಿಸಲು ರಕ್ಷಣಾ ಬಲವನ್ನು ಅಭಿವೃದ್ಧಿ ಪಡಿಸಿದಂತೆ ನಮ್ಮ ಸರ್ಕಾರ ಕೂಡ ಕಾರ್ಯನಿರ್ವಹಿಸುತ್ತಿದೆ. ದುಷ್ಟಶಕ್ತಿಗೆ ಜನರು ಸರಿಯಾದ ಉತ್ತರ ನೀಡುವರು ಎಂದು ಗರ್ಜಿಸಿದರು ಎಂದು ಪಿಟಿಐ ವರದಿ ಮಾಡಿದೆ.

ಇದನ್ನು ಓದಿ: ಭಾರತರತ್ನ ಪಡೆಯಲು ಸಾವರ್ಕರ್​ಗಿಂತ ಅರ್ಹ ವ್ಯಕ್ತಿ ಇಲ್ಲ; ಅಮಿತ್​ ಶಾ

ಇನ್ನು ವೀರ ಸಾವರ್ಕರ್​ ಕುರಿತು ವಿವಾದಾತ್ಮಕ ಹೇಳಿಕೆ ನೀಡುತ್ತಿರುವವರ ಬಗ್ಗೆ ಕಿಡಿಕಾರಿದ ಅವರು, ಸಾವರ್ಕರ್​ ಬಗ್ಗೆ ಕೆಟ್ಟ ಸುದ್ದಿ ಹಬ್ಬಿಸುವ ನಾಯಕರ ವಿರುದ್ಧ  ಸತಾರಾದ ಜನರು ಆಕ್ರೋಶ ವ್ಯಕ್ತಪಡಿಸುವರು. ದೇಶದ ಹಿತಾಸಕ್ತಿ ವಿರುದ್ದ ಮಾತನಾಡುವವರಿಗೆ ರಾಷ್ಟ್ರ ರಕ್ಷಕರ ನೆಲದಲ್ಲಿ ಅವಕಾಶವಿಲ್ಲ ಎಂದರು.

ಇನ್ನು ಇದೇ ಅಕ್ಟೋಬರ್​  21ರಂದು ಮಹಾರಾಷ್ಟ, ಹರಿಯಾಣ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅ.24ರಂದು ಫಲಿತಾಂಶ ಪ್ರಕಟವಾಗಲಿದೆ.
First published:October 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading