Yogi Adityanath Exclusive interview: ‘ಯುಪಿಯಲ್ಲಿ 80:20 ಫೈಟ್, ಬಿಜೆಪಿ 300ಕ್ಕೂ ಹೆಚ್ಚು ಸ್ಥಾನ ಗೆಲ್ಲೋದು ಗ್ಯಾರೆಂಟಿ’

ಉತ್ತರ ಪ್ರದೇಶದಲ್ಲಿ ಬಿಜೆಪಿ 300 ಸ್ಥಾನಗಳನ್ನು ದಾಟುವ ವಿಶ್ವಾಸವಿದೆ ಅಂತ ಯೋಗಿ ಆದಿತ್ಯನಾಥ್​ ಹೇಳಿದ್ರು. ಇದು 80:20 ಫೈಟ್, 2022ರ ಯುಪಿ ಚುನಾವಣೆಯಲ್ಲಿ ಬಿಜೆಪಿ 300 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುತ್ತದೆ ಎಂದ್ರು

ಯೋಗಿ ಆದಿತ್ಯನಾಥ್​

ಯೋಗಿ ಆದಿತ್ಯನಾಥ್​

  • Share this:
ಉತ್ತರ ಪ್ರದೇಶದ (Uttar Pradesh) ಚುನಾವಣಾ (Election) ಕಣ ರಂಗೇರಿದೆ. ಸಿಎಂ ಯೋಗಿ ಆದಿತ್ಯನಾಥ್​ (Yogi Adityanath) ಅವರು ಇಂದು ನಾಮಪತ್ರ (Nomination) ಸಲ್ಲಿಕೆ ಮಾಡಿದ್ರು. ನಾಮಪತ್ರ ಸಲ್ಲಿಕೆ ಬಳಿಕ ಅವರು ಮೊದಲ ಬಾರಿಗೆ ನ್ಯೂಸ್​ 18ಗೆ ಎಕ್ಸ್​​ಕ್ಲೂಸಿವ್​ ಸಂದರ್ಶನ ನೀಡಿದರು. ನೆಟ್​ವರ್ಕ್​ 18 ಗ್ರೂಪ್​​ನ ಎಂಡಿ ಮತ್ತು ಗ್ರೂಪ್ ಎಡಿಟರ್ ಇನ್ ಚೀಫ್ ರಾಹುಲ್ ಜೋಶಿ (Rahul Joshi) ಜೊತೆ ಸಂದರ್ಶನದಲ್ಲಿ (Interview) ಮಾತನಾಡಿದ ಅವರು ಉತ್ತರ ಪ್ರದೇಶದಲ್ಲಿ ಬಿಜೆಪಿ ಭರ್ಜರಿ ಗೆಲುವಿನ ನಗೆ ಬೀರಲಿದೆ ಅಂತ ಹೇಳಿದ್ದಾರೆ.  ಉತ್ತರ ಪ್ರದೇಶದಲ್ಲಿ ಬಿಜೆಪಿ 300 ಸ್ಥಾನಗಳನ್ನು ದಾಟುವ ವಿಶ್ವಾಸವಿದೆ ಅಂತ ಯೋಗಿ ಆದಿತ್ಯನಾಥ್​ ಹೇಳಿದ್ರು. ಇದು 80:20 ಫೈಟ್, 2022ರ ಯುಪಿ ಚುನಾವಣೆಯಲ್ಲಿ ಬಿಜೆಪಿ 300 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುತ್ತದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

‘ಡಬಲ್​ ಇಂಜಿನ್​’ ಸರ್ಕಾರದ ಗೆಲುವು ನಿಶ್ಚಿತ

ಉತ್ತರ ಪ್ರದೇಶವು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಅಪಾರ ನಂಬಿಕೆ ಹೊಂದಿದೆ. ಯುಪಿ ಜನತೆ ನಮ್ಮ ಬಿಜೆಪಿಯನ್ನು ಗೆಲ್ಲುಸುತ್ತೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 300 ಸ್ಥಾನಗಳನ್ನು ದಾಟುವ ವಿಶ್ವಾಸವಿದೆ ಹೊಂದಿದೆ. ನಮ್ಮ ಸರ್ಕಾರ ಅತ್ಯುತ್ತಮವಾಗಿ ಕೆಲಸ ಮಾಡಿದೆ. ಈ ಸರ್ಕಾರದ ಅಡಿಯಲ್ಲಿ ಮಹಿಳೆಯರು, ಮಕ್ಕಳು ಹಾಗೂ ಎಲ್ಲಾ ವರ್ಗದ ಜನರು ಪ್ರಯೋಜನ ಪಡೆದಿದ್ದಾರೆ. ಭಾರತೀಯ ಜನತಾ ಪಕ್ಷದ 'ಡಬಲ್ ಇಂಜಿನ್' ಸರ್ಕಾರವು ಬಹುಮತ ಪಡೆಯೋದು ಗ್ಯಾರೆಂಟಿ. ಅದರಲ್ಲಿ ಯಾವುದೇ ಸಂದೇಹವಿಲ್ಲ. ಇದು 80:20ರ ಸ್ಪರ್ಧೆ  ಬಿಜೆಪಿ 80% ಸ್ಥಾನಗಳನ್ನು ಪಡೆಯುತ್ತದೆ ಮತ್ತು ಇತರ ಪಕ್ಷಗಳು 20% ಗಳಿಸುತ್ತವೆ ಎಂದು ಯೋಗಿ ಆದಿತ್ಯನಾಥ್​ ಹೇಳಿದ್ರು

'ಸಮಾಜವಾದಿಗಳಲ್ಲ ಪರಿವಾರವಾದಿಗಳು’

ಸಮಾಜವಾದಿ ಪಕ್ಷ ಮತ್ತು ಅಖಿಲೇಶ್ ಯಾದವ್ ಬಗ್ಗೆ ಮಾತನಾಡಿದ ಯೋಗಿ ಆದಿತ್ಯನಾಥ್, ನಾವು ರಾಷ್ಟ್ರೀಯತೆಯ ಬಗ್ಗೆ ಮಾತನಾಡುತ್ತೇವೆ, ಅವರು ಜಾತಿಗಳ ಬಗ್ಗೆ ಮಾತನಾಡುತ್ತಾರೆ. ನಾವು ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತೆಗೆದುಕೊಳ್ಳುತ್ತೇವೆ, ಆದರೆ ಅವರು ತಮ್ಮ ಕುಟುಂಬದ ಬಗ್ಗೆ ಮಾತಾಡ್ತಾರೆ. ಅವರು ತಮ್ಮನ್ನು ಸಮಾಜವಾದಿಗಳು ಎಂದು ಕರೆದುಕೊಳ್ಳಬಹುದು, ಆದರೆ ಅವರು ಪರಿವಾರವಾದಿಗಳು ಮತ್ತು ದಂಗೆವಾದಿಗಳು ಎಂದು ಯೋಗಿ ಆದಿತ್ಯನಾಥ್​ ಹೇಳಿದ್ದಾರೆ.

ಇದನ್ನೂ ಓದಿ: Yogi Adityanath Exclusive interview: ನಾವು ಮುಸ್ಲಿಂ ವಿರೋಧಿಗಳಲ್ಲ, ದೇಶ ವಿರೋಧಿ ಶಕ್ತಿಗಳ ವಿರೋಧಿಗಳು

'ಸಮಾಜವಾದಿ ಪಕ್ಷವನ್ನು ಯಾರೂ ಕ್ಷಮಿಸುವುದಿಲ್ಲ'

ಕೈರಾನಾ ಕ್ಷೇತ್ರದಲ್ಲಿ ಬಿಜೆಪಿ ಸೋಲಿನ ಬಗ್ಗೆ ಮಾತನಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಮಾಜವಾದಿ ಪಕ್ಷವನ್ನು ಯಾರೂ ಕ್ಷಮಿಸುವುದಿಲ್ಲ. 2019ರ ಚುನಾವಣೆಯಲ್ಲಿ ಎಲ್ಲಾ ಸಮೀಕ್ಷೆಗಳು ತಪ್ಪು ಎಂದು ಸಾಬೀತಾಗಿದೆ. ಹಿಂಸಾಚಾರದಲ್ಲಿ ನಂಬಿಕೆ ಇಟ್ಟವರು ಎಸ್ಪಿ. ರಾಮ ಭಕ್ತರ ಮೇಲೆ ಗುಂಡು ಹಾರಿಸಿದ ಎಸ್ಪಿಯನ್ನು ಯಾರೂ ಕ್ಷಮಿಸುವುದಿಲ್ಲ. ಎಸ್‌ಪಿ ಗಲಭೆಯಲ್ಲಿ ನಂಬಿಕೆ ಇಟ್ಟಿದ್ದಾರೆ ಅಂತ ಹೇಳಿದ್ರು

'ಬಿಜೆಪಿ ತೊರೆಯುವವರು ಪರಿವಾರವಾದ್ ಜೊತೆ'

2022ರ ಉತ್ತರ ಪ್ರದೇಶ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ನಾಯಕರು ಇತರ ಪಕ್ಷಗಳಿಗೆ ಬದಲಾದ ಬಗ್ಗೆ ಕೇಳಿದಾಗ, ಯೋಗಿ ಆದಿತ್ಯನಾಥ್ ಅವರು, ಇತರ ಪಕ್ಷಗಳಿಂದಲೂ ಅನೇಕ ಜನರು ಬಿಜೆಪಿಗೆ ಸೇರಿದ್ದಾರೆ. ಬಿಜೆಪಿ ಸೇರುವವರಿಗೆ ಟಿಕೆಟ್ ಆಮಿಷವೊಡ್ಡಿಲ್ಲ. ಬಿಜೆಪಿಯನ್ನು ತೊರೆಯುವವರು ‘ಪರಿವಾರವಾದ’ ಜೊತೆ ಸೇರ್ತಿದ್ದಾರೆ ಎಂದ್ರು ಯೋಗಿ ಆದಿತ್ಯನಾಥ್

ಇದನ್ನೂ ಓದಿ: UP Elections: ಇಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಾಮಪತ್ರ ಸಲ್ಲಿಕೆ

‘ಮಾ.10ರಂದು ಕಾಂಗ್ರೆಸ್ ಭವಿಷ್ಯ ನಿರ್ಧಾರವಾಗುತ್ತೆ’

ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬರಲು ಪ್ರಿಯಾಂಕಾ ಗಾಂಧಿ ಮತ್ತು ಕಾಂಗ್ರೆಸ್ ರಣತಂತ್ರಗಳ ಬಗ್ಗೆ ಯೋಗಿ ಆದಿತ್ಯನಾಥ್  ಮಾತಾಡಿದ್ರು. ಪ್ರತಿಯೊಬ್ಬರಿಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕಿದೆ, ಆದ್ರೆ ಎಷ್ಟು ಜನರು ಭವಿಷ್ಯ ಕಾಂಗ್ರೆಸ್​ನೊಂದಿಗೆ ಕೊನೆಗೊಳ್ಳುತ್ತೆ ಅನ್ನೋದನ್ನು ನಾವು ನೋಡಬೇಕಾಗಿದೆ. ಮಾರ್ಚ್ 10 ರಂದು ಕಾಂಗ್ರೆಸ್ ಭವಿಷ್ಯ ತಿಳಿಯುತ್ತೆ. ನಾನು ಶೈವ ಸಂಪ್ರದಾಯಕ್ಕೆ ಸೇರಿದವನು, ಹಾಗಾಗಿ ನಾನು ವಿಷ ಕುಡಿದು ಅಮೃತ ಹಂಚಬಹುದು. ಇದು ನಮ್ಮ ಕೆಲಸ ಮಾಡುವ ವಿಧಾನ, ನಾವು ಸದಾ ಕೆಲಸ ಮಾಡುತ್ತಲೇ ಇರುತ್ತೇವೆ ಎಂದ್ರು ಯೋಗಿ ಆದಿತ್ಯನಾಥ್​

ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಫೆಬ್ರವರಿ 10 ರಿಂದ ಆರಂಭವಾಗುವ ಚುನಾವಣೆ, ಮಾರ್ಚ್ 10ರಂದು ಫಲಿತಾಂಶ ಪ್ರಕಟದೊಂದಿಗೆ ಮುಕ್ತಾಯವಾಗಲಿದೆ.
Published by:Pavana HS
First published: