ಲೋಕಸಭಾ ಚುನಾವಣೆ ದಿನಗಣನೆ ಶುರುವಾಗಿರುವಾಗ ಭಾರತೀಯ ಜನತಾ ಪಾರ್ಟಿಯ ವೆಬ್ಸೈಟ್ನನ್ನು ಹ್ಯಾಕ್ ಮಾಡಿರುವ ಘಟನೆ ಮಂಗಳವಾರ ನಡೆದಿದೆ. ಬಿಜೆಪಿಯ ಅಧಿಕೃತ ಪೇಜ್ ಆದ
www.bjp.org ಪೇಜ್ ಅನ್ನು ಹ್ಯಾಕ್ ಮಾಡಲಾಗಿದ್ದು, 522 ಎರರ್ ಎಂದು ಅದರ ಮುಖಪುಟದಲ್ಲಿ ಕಂಡು ಬರುತ್ತಿದೆ.
ಬಿಜೆಪಿ ವೆಬ್ಸೈಟ್ ಹ್ಯಾಕ್ ಆಗಿರುವ ಬಗ್ಗೆ ಬಿಜೆಪಿ ನಾಯಕರು ಇದುವರೆಗೂ ದೂರು ನೀಡಿಲ್ಲ. ಹಾಗೂ ಹೇಳಿಕೆ ನೀಡಿಲ್ಲ. ಮಂಗಳವಾರ 11.30ರ ಸುಮಾರಿಗೆ ಈ ಸೈಬರ್ ದಾಳಿ ನಡೆದಿದೆ.
ಬಿಜೆಪಿ ವೆಬ್ತಾಣ ದಾಳಿಗೆ ಒಳಗಾಗಿರುವುದನ್ನು ಕಾಂಗ್ರೆಸ್ ಐಟಿ ಮುಖ್ಯಸ್ಥೆ ರಮ್ಯಾ ಕೂಡ ಟ್ವೀಟ್ ಮಾಡಿದ್ದಾರೆ.
ಮಂಗಳವಾರ 11.30ರ ಸುಮಾರಿಗೆ ಬಿಜೆಪಿ ವೆಬ್ಸೈಟ್ ಓಪನ್ ಆಗಿದೆ, ಈ ವೇಳೆ ಮೋದಿ ಮತ್ತು ಜರ್ಮನ್ ಚಾನ್ಸೆಲರ್ ಮಾರ್ಕೆಲ್ ಜೊತೆಗಿನ ಪೋಟೋ ಕೂಡ ಕಂಡಿದೆ, ಇದರ ಜೊತೆಗೆ ಕೆಲವು ಅವಹೇಳನಕಾರಿ ವಾಕ್ಯಗಳು ಕಂಡುಬಂದಿದೆ.
ಇದನ್ನು ಓದಿ: ಆದಿವಾಸಿ, ಬುಡಕಟ್ಟು ಹಕ್ಕುಗಳ ರಕ್ಷಣೆಗೆ ಒತ್ತಾಯಿಸಿ ಇಂದು ಭಾರತ್ ಬಂದ್
ಕೆಲವು ದಿನಗಳ ಹಿಂದೆ ಛತ್ತೀಸ್ಗಢದ ಬಿಜೆಪಿ ವೆಬ್ಸೈಟ್ ಅನ್ನು ಪಾಕಿಸ್ತಾನದ ಹ್ಯಾಕರ್ಸ್ ದಾಳಿ ಮಾಡಿದ್ದರು. ಹ್ಯಾಕ್ ಮಾಡಿ ಅದರಲ್ಲಿ ಬಿಜೆಪಿ ತಾಣದಲ್ಲಿ ಪಾಕಿಸ್ತಾನದ ಬಾವುಟ ಬರುವಂತೆ ಮಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ