• Home
 • »
 • News
 • »
 • national-international
 • »
 • G20 Summit: G-20 ಶೃಂಗಸಭೆ ಲೋಗೋ ಅನಾವರಣಗೊಳಿಸಿದ ಪಿಎಂ ಮೋದಿ; ಕಮಲ ಕಂಡು ಕಾಂಗ್ರೆಸ್​ ಗರಂ!

G20 Summit: G-20 ಶೃಂಗಸಭೆ ಲೋಗೋ ಅನಾವರಣಗೊಳಿಸಿದ ಪಿಎಂ ಮೋದಿ; ಕಮಲ ಕಂಡು ಕಾಂಗ್ರೆಸ್​ ಗರಂ!

G-20 ಶೃಂಗಸಭೆ ಲೋಗೋ

G-20 ಶೃಂಗಸಭೆ ಲೋಗೋ

G-20 ಶೃಂಗಸಭೆಯ ಆತಿಥ್ಯ ಹಾಗೂ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿದೆ. ಈ ನಿಟ್ಟಿನಲ್ಲಿ ಈಗ ಭಾರತ ಶೃಂಗಸಭೆಯ ಲೋಗೋವನ್ನು ಅನಾವರಣಗೊಳಿಸಿದ್ದು ಅದರಲ್ಲಿ ಕಮಲದ ಹೂವು ಕೂಡಾ ಸೇರಿಸಲಾಗಿದೆ. ಸಹಜವಾಗಿಯೇ ಈ 'ಕಮಲ'ದ ಚಿತ್ರ ಪ್ರತಿಪಕ್ಷಗಳ ಕೋಪಕ್ಕೆ ಕಾರಣವಾಗಿದೆ. 

 • Trending Desk
 • Last Updated :
 • New Delhi, India
 • Share this:

  2023 ರಲ್ಲಿ ನಡೆಯಲಿರುವ ಜಗತ್ತಿನ ಮಹತ್ತರ ಸಮಾವೇಶ ಎಂದೇ ಪರಿಗಣಿಸಲಾಗುವ G-20 ಶೃಂಗಸಭೆಯ (G20 Summit) ಆತಿಥ್ಯ ಹಾಗೂ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿದೆ. ಈ ನಿಟ್ಟಿನಲ್ಲಿ ಈಗ ಭಾರತ ಶೃಂಗಸಭೆಯ ಲೋಗೋವನ್ನು (Logo) ಅನಾವರಣಗೊಳಿಸಿದ್ದು ಅದರಲ್ಲಿ ಕಮಲದ ಹೂವು ಕೂಡಾ ಸೇರಿಸಲಾಗಿದೆ. ಸಹಜವಾಗಿಯೇ ಈ 'ಕಮಲ'ದ (Lotus) ಚಿತ್ರ ಪ್ರತಿಪಕ್ಷಗಳ ಕೋಪಕ್ಕೆ ಕಾರಣವಾಗಿದೆ.  ಕೆರಳಿರುವ ಕಾಂಗ್ರೆಸ್ (Congress) ನಾಯಕರು ಇದೀಗ ಈ ಬಗ್ಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಆಕ್ರೋಶ ಹೊರಹಾಕುತ್ತಿದ್ದಾರೆ


  ಕಿಡಿ ಕಾರಿದ ಜೈರಾಮ್ ರಮೇಶ್


  ಈ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಕಾಂಗ್ರೆಸ್ ಹಿರಿಯ ನಾಯಕರಾಗಿರುವ ಜೈರಾಮ್ ರಮೇಶ್ ಅವರು ಟ್ವಿಟ್ಟರ್ ನಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಅವರು, " ಸುಮಾರು 70 ವರ್ಷಗಳ ಹಿಂದೆ ಕಾಂಗ್ರೆಸ್ ಧ್ವಜವನ್ನು ರಾಷ್ಟ್ರದ ಧ್ವಜವನ್ನಾಗಿ ಪರಿವರ್ತಿಸಬೇಕೆಂದು ಕೋರಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಅಂದಿನ ಕಾಂಗ್ರೆಸ್ ಪ್ರಧಾನಿ ನೆಹರು ಅವರು ತಿರಸ್ಕರಿಸಿದ್ದರು. ಆದರೆ, ಇಂದು ಬಿಜೆಪಿಯ ಚುನಾವಣಾ ಗುರುತು ಭಾರತದ ಅಧಿಕೃತ ಅಧ್ಯಕ್ಷತೆಯುಳ್ಳ G-20 ಶೃಂಗಸಭೆಯ ಲೋಗೋದಲ್ಲಿ ಸ್ಥಾನ ಪಡೆದಿದೆ. ಇದು ನಿಜಕ್ಕೂ ಆಘಾತಕಾರಿಯಾಗಿದೆ ಹಾಗೂ ಮೋದಿ ಮತ್ತು ಬಿಜೆಪಿ ಸ್ವಲ್ಪವೂ ನಾಚಿಕೆ ಪಡದೆ ತಮಗೆ ಸಿಕ್ಕ ಪ್ರತಿಯೊಂದು ಅವಕಾಶದಲ್ಲಿ ತಮ್ಮನ್ನು ತಾವು ಪ್ರಚಾರಿಸಿಕೊಳ್ಳಲು ಹಿಂಜರಿಯುವುದಿಲ್ಲ ಎಂಬುದು ನಮಗೆ ಗೊತ್ತಿದೆ" ಎಂದು ಬರೆದುಕೊಂಡಿದ್ದಾರೆ.


  ಇದನ್ನೂ ಓದಿ: Gujarat Elections: ಗುಜರಾತ್ ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ಭಾರೀ ಹಿನ್ನಡೆ, ಮಾಜಿ ಆರೋಗ್ಯ ಸಚಿವ ರಾಜೀನಾಮೆ


  ಕಂಚನ್ ಗುಪ್ತಾ ತಿರುಗೇಟು


  ಆದರೆ, ಜೈರಾಮ್ ರಮೇಶ್ ಅವರ ಈ ಆಕ್ರೋಶದ ನುಡಿ ಹಾಗೇ ಉಳಿದುಕೊಳ್ಳಲಿಲ್ಲ. ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಸಲಹೆಗಾರರಾಗಿರುವ ಕಂಚನ್ ಗುಪ್ತಾ ಅವರು ರಮೇಶ್ ಅವರ ಟ್ವೀಟ್​ಗೆ ಪ್ರತಿಕ್ರಿಯಿಸುತ್ತಾ ತಮ್ಮದೇ ಆದ ಧಾಟಿಯಲ್ಲಿ ತಿರುಗೇಟು ನೀಡಿದ್ದಾರೆ. ಗುಪ್ತಾ ಅವರು, "70 ವರ್ಷಗಳ ಮುಂಚೆ ನೆಹರು ಅವರು ಪ್ರಧಾನಿಯಾಗಿದ್ದ ಸಮಯದಲ್ಲಿ ಕಮಲದ ಹೂವನ್ನು ರಾಷ್ಟ್ರೀಯ ಪುಷ್ಪವನ್ನಾಗಿ ಘೋಷಿಸಲಾಯಿತು, ಜೈರಾಮ್ ರಮೇಶ್ ಅವರೇ ನಿಮಗಿದು ಆಘಾತಕಾರಿ ಅನಿಸಲಿಲ್ಲವೇ? ಅಲ್ಲದೆ, ತದನಂತರ ಬಂದ ಕಾಂಗ್ರೆಸ್ ಸರಕಾರಗಳು ಕಮಲದ ಹೂವಿನ ಚಿತ್ರವಿರುವ ನಾಣ್ಯಗಳನ್ನು ಹೊರತಂದರು ಹಾಗೂ ರಾಷ್ಟ್ರೀಯ ಲಾಂಛನ ಕಮಲದ ಹೂವಿನ ಮೇಲೆ ನಿಂತಿದೆ" ಎಂದು ಬರೆಯುವ ಮೂಲಕ ಪ್ರತಿಕ್ರಿಯಿಸಿದ್ದಾರೆ.


  ಕಾಂಗ್ರೆಸ್ ಅಸಮಾಧಾನ ಏಕೆ?


  ಇದು ಒಂದು ರೀತಿಯಲ್ಲಿ ಸಹಜವಾಗಿರುವ ಪ್ರತಿಕ್ರಿಯೆ ಎಂದೆನಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ಮುಂಚಿನಿಂದಲೂ ಒಬ್ಬರ ಮೇಲೊಬ್ಬರು ಬೊಟ್ಟು ಮಾಡುತ್ತಲೇ ಇದ್ದಾರೆ. ಪ್ರಸ್ತುತ ದೇಶದಲ್ಲಿ ಹಾಗೂ ಕಳೆದ ಕೆಲ ದಶಕಗಳಿಂದ ಈ ಎರಡೂ ರಾಷ್ಟ್ರೀಯ ಪಕ್ಷಗಳು ದೊಡ್ಡ ಮಟ್ಟದಲ್ಲಿ ವೈರತ್ವ ಸಾಧಿಸುತ್ತಲೇ ಬಂದಿವೆ ಎಂದರೆ ತಪ್ಪಾಗದು. ಕಮಲವು ಬಿಜೆಪಿ ಪಕ್ಷದ ಗುರುತಾಗಿದ್ದು ಜಿ-20 ಸಭೆ ಒಂದು ಅಧಿಕೃತವಾಗಿರುವ ದೇಶದ ಕಾರ್ಯಕ್ರಮವಾಗಿದೆ. ಈ ಸಂದರ್ಭದಲ್ಲೂ ಕಮಲದ ಬಳಕೆ ಬಿಜೆಪಿ ಪಕ್ಷಕ್ಕೆ ಹೆಚ್ಚಿನ ಪ್ರಚಾರವನ್ನು ನೀಡಬಹುದೆಂಬುದೇ ಕಾಂಗ್ರೆಸ್ ಆಕ್ರೋಶದ ಹಿಂದಿರುವ ಪ್ರಮುಖ ಕಾರಣ ಎನ್ನಬಹುದು.


  PM Narendra Modi stops for ambulance
  ಪ್ರಧಾನಿ ನರೇಂದ್ರ ಮೋದಿ


  G-20 ಶೃಂಗಸಭೆ ಲೋಗೊ


  ಈ ಮುಂಚೆ ಪ್ರಧಾನಿ ಮೋದಿ ಅವರು ಭಾರತ ಅಧ್ಯಕ್ಷತೆವಹಿಸುತ್ತಿರುವ G-20 ಶೃಂಗಸಭೆ ಲೋಗೊವನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ, ಕಮಲದ ಏಳು ದಳಗಳು ಜಗತ್ತಿನ ಏಳು ಖಂಡಗಳನ್ನೂ ಹಾಗೂ ಸಂಗೀತದ ಏಳು ಸ್ವರಗಳನ್ನು ಪ್ರತಿನಿಧಿಸುತ್ತದೆ. G-20 ಶೃಂಗಸಭೆಯು ಜಗತ್ತನ್ನೇ ಸಾಮರಸ್ಯದಡಿಯಲ್ಲಿ ಒಂದೆಡೆ ತರಲಿದೆ ಎಂದು ಸಾಂಕೇತಿಕವಾಗಿ ಹೇಳಿದರು.


  ಇದನ್ನೂ ಓದಿ: ಪಾಂಡಿಚೇರಿ ಸರ್ಕಾರ ಬೀಳಿಸಿದ ಬಿಜೆಪಿ ಕೆಲಸ ಮಹಾರಾಷ್ಟ್ರದಲ್ಲಿ ನಡೆಯುವುದಿಲ್ಲ; ಶಿವಸೇನೆ ಎಚ್ಚರಿಕೆ!


  ಈ ಸಂದರ್ಭದಲ್ಲಿ ಮೋದಿ ಅವರು ದೇಶದ ಜನತೆಯನ್ನುದ್ದೇಶಿಸುತ್ತಾ, "ನಾನು, ಭಾರತವು ಈ ಐತಿಹಾಸಿಕ G-20 ಶೃಂಗಸಭೆಯ ಅಧ್ಯಕ್ಷತೆಯನ್ನು ವಹಿಸುತ್ತಿರುವುದಕ್ಕಾಗಿ ದೇಶದ ಜನರನ್ನು ಅಭಿನಂದಿಸುತ್ತೇನೆ. ಈ ಮೂಲಕ 'ವಸುದೈವ ಕುಟುಂಬಕಂ' ಎಂಬ ಸಾರವನ್ನು ನಾವು ಜಗತ್ತಿಗೆ ಸಾರುತ್ತಿದ್ದೇವೆ. ಕಮಲವು ಭಾರತದ ಸಾಂಪ್ರದಾಯಿಕ ಸಿರಿವಂತಿಕೆ ಹಾಗೂ ನಂಬಿಕೆಯನ್ನು ಪ್ರತಿನಿಧಿಸುತ್ತದೆ ಹಾಗೂ ಈ ಮೂಲಕ ಜಗತ್ತನ್ನೇ ನಾವು ಒಂದಾಗಿಸುವಲ್ಲಿ ವಿಶ್ವಾಸ ಹೊಂದಿದ್ದೇವೆ. ಪ್ರಸ್ತುತ ಜಗತ್ತಿನೆಲ್ಲೆಡೆ ಉಂಟಾಗಿರುವ ಆತಂಕ ಹಾಗೂ ಸಂಕಷ್ಟಗಳ ಘಳಿಗೆಯಲ್ಲಿ ಭಾರತಕ್ಕೆ ಅಧ್ಯಕ್ಷತೆಯನ್ನು ನಿಭಾಯಿಸುವಂತಹ ಹೊಣೆಗಾರಿಕೆ ಬಂದಿದೆ. ಆದರೆ ಪರಿಸ್ಥಿತಿಗಳು ಹೇಗೇ ಇದ್ದರೂ ಕಮಲದ ಹೂವು ಅರಳದೇ ಇರದು" ಎಂದು ಹೇಳಿದ್ದಾರೆ.

  Published by:Precilla Olivia Dias
  First published: