ಶಾಹೀನ್ ಬಾಗ್ ಪ್ರತಿಭಟನೆ ವಿಚಾರದಲ್ಲಿ ಬಿಜೆಪಿಯಿಂದ ಕೊಳಕು ರಾಜಕಾರಣ: ಅರವಿಂದ್ ಕೇಜ್ರಿವಾಲ್

ಸಿಎಎ ಹಾಗೂ ಎನ್‌ಆರ್‌ಸಿ ವಿರೋಧಿಸಿ ಶಾಹೀನ್‌ ಬಾಗ್ ಹಾಗೂ ಜಾಮಿಯಾ ಮಿಲಿಯಾ ವಿವಿ ಬಳಿ ಮಹಿಳೆಯರು, ಮಕ್ಕಳು ಸೇರಿದಂತೆ ಸಾವಿರಾರು ಮಂದಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಸಿಎಂ ಅರವಿಂದ ಕೇಜ್ರಿವಾಲ್

ಸಿಎಂ ಅರವಿಂದ ಕೇಜ್ರಿವಾಲ್

 • Share this:
  ನವದೆಹಲಿ(ಜ.27): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಶಾಹೀನ್‌ ಬಾಗ್​​ನಲ್ಲಿ ಮಹಿಳೆಯರು ನಡೆಸುತ್ತಿರುವ ಪ್ರತಿಭಟನೆಯನ್ನು ಬಿಜೆಪಿ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್​​ ಕೇಜ್ರಿವಾಲ್​​ ಆರೋಪಿಸಿದ್ಧಾರೆ. ಇಂದು ವಿಧಾನಸಭಾ ಚುನಾವಣಾ ಪ್ರಚಾರದ ಭಾಗವಾಗಿ ಇಲ್ಲಿನ ಬವನ ನಗರದಲ್ಲಿ ನಡೆದ ರ‍್ಯಾಲಿಯನ್ನುದ್ದೇಶಿಸಿ ಮಾತಾಡಿದ ಅರವಿಂದ್​ ಕೇಜ್ರಿವಾಲ್​​, ಶಾಹೀನ್​​ ಬಾಗ್​​ ಪ್ರತಿಭಟನೆಯನ್ನು ಭಾರತೀಯ ಜನತಾ ಪಕ್ಷ ಮತ ಬ್ಯಾಂಕ್​​ಗಾಗಿ ಬಳಸಿಕೊಳ್ಳುತ್ತಿದೆ. ಚುನಾವಣೆ ಮುಗಿದ ನಂತರ ಶಾಹೀನ್​​ ಬಾಗ್​​ ಪ್ರತಿಭಟನೆ ಬಗ್ಗೆ ಬಿಜೆಪಿ ಉಸಿರೆತ್ತುವುದಿಲ್ಲ ನೋಡುತ್ತಿರಿ ಎಂದು ಕಿಡಿಕಾರಿದ್ದಾರೆ.

  ಶಾಹೀನ್​​ ಬಾಗ್​​ ಪ್ರತಿಭಟನೆ ವಿಚಾರದಲ್ಲಿ ಬಿಜೆಪಿ ಕೊಳಕು ರಾಜಕಾರಣ ಮಾಡುತ್ತಿದೆ. ದೇಶದ ಪ್ರತಿಯೊಬ್ಬರಿಗೂ ಪ್ರತಿಭಟಿಸುವ ಹಕ್ಕನ್ನು ಸಂವಿಧಾನ ನೀಡಿದೆ. ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಮಾತ್ರ ಬಿಜೆಪಿ ಶಾಹೀನ್​ ಬಾಗ್​ ಬಗ್ಗೆ ಮಾತಾಡುತ್ತಿದೆ. ಫೆಬ್ರವರಿ 8ನೇ ತಾರೀಕು ಚುನಾವಣೆ ಮುಗಿದ ಮೇಲೆ ಈ ಬಗ್ಗೆ ಬಿಜೆಪಿ ಒಂದು ಮಾತನ್ನು ಆಡುವುದಿಲ್ಲ ಎಂದು ಸಿಎಂ ಅರವಿಂದ್​​ ಕೇಜ್ರಿವಾಲ್​​​ ಕಿಡಿಕಾರಿದ್ಧಾರೆ.

  ಪೌರತ್ವ ಕಾಯ್ದೆ ವಿರೋಧಿಸಿ ಕಳೆದ 43 ದಿನಗಳಿಂದ ಶಾಹೀನ್‌ ಬಾಗ್‌ನಲ್ಲಿ ಪ್ರತಿಭಟನೆ ನಡೆಸುತ್ತಿದೆ. ಇದನ್ನು ಶಾಹೀನ್‌ ಬಾಗ್ ಮಹಿಳೆಯರ ಪ್ರತಿಭಟನೆ ಎಂದೇ ಕರೆಯಲಾಗುತ್ತಿದೆ. ಈ ಹಿಂದೆಯೇ ಸಿಎಎ ಮತ್ತು ಎನ್​​ಆರ್​ಸಿ ವಿರುದ್ಧ ಶಾಹೀನ್‌ ಬಾಗ್​ನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ತೆರವುಗಳಿಸುವಂತೆ ಆದೇಶ ನೀಡಬೇಕೆಂದು ಹೈಕೋರ್ಟ್​ ಮೊರೆ ಹೋಗಿತ್ತು. ಆಗ ಬಿಜೆಪಿ ಸಲ್ಲಿಸಿದ್ದ ಮನವಿಯನ್ನು ವಿಚಾರಣೆಗೆ ಸ್ವೀಕರಿಸಲು ದೆಹಲಿ ಹೈಕೋರ್ಟ್ ನಿರಾಕರಿಸಿತ್ತು.

  ಶಾಹೀನ್‌ ಬಾಗ್‌ನಲ್ಲಿ ಪ್ರತಿಭಟನೆ ನಡೆಯುತ್ತಿರುವುದರಿಂದ ರಸ್ತೆ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಹಾಗೆಯೇ ವಾಹನ ಸಂಚಾರ ದಟ್ಟಣೆಯುಂಟಾಗುತ್ತಿದೆ ಎಂದು ಬಿಜೆಪಿ ಮುಖ್ಯಸ್ಥ ತುಷಾರ್ ಸಹದೇವ್ ದೂರಿದ್ದರು.

  ಇದನ್ನೂ ಓದಿ: ದೆಹಲಿ ವಿಧಾನಸಭಾ ಚುನಾವಣೆ: ಸಿಎಂ ಅರವಿಂದ್​​ ಕೇಜ್ರಿವಾಲ್​​ ಎದುರು 93 ಅಭ್ಯರ್ಥಿಗಳು ಕಣಕ್ಕೆ

  ಇನ್ನು ಪ್ರತಿಭಟನೆಯಿಂದ ಶಾಹೀನ್‌ ಬಾಗ್‌ನ ಸುತ್ತಮುತ್ತಲಿನ ಪ್ರದೇಶಗಳ ರಸ್ತೆಗಳು ನಿರ್ಬಂಧಿಸಲ್ಪಟ್ಟಿದೆ. ವಾಹನಗಳನ್ನು ಡಿಎನ್‌ಡಿ ಫ್ಲೈವೇ ಕಡೆಗೆ ತಿರುಗಿಸಲಾಗುತ್ತಿದೆ. ಇದರಿಂದ ದೆಹಲಿಯಿಂದ ಉತ್ತರಪ್ರದೇಶ, ಉತ್ತರಾಖಂಡ, ನೊಯ್ಡಾಗೆ ಹೋಗಲು ಆಗುತ್ತಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ಪ್ರತಿಭಟನಕಾರರು ತಡೆಬೇಲಿಗಳನ್ನು ಹಾಗೂ ಭಾರೀ ಗಾತ್ರದ ಕಲ್ಲುಗಳನ್ನು ಇರಿಸಿದ್ಧಾರೆ. ಪಾದಾಚಾರಿಗಳು ಸಂಚರಿಸಲು ಅವಕಾಶ ನೀಡುತ್ತಿಲ್ಲವೆಂದು ಅರ್ಜಿಯಲ್ಲಿ ದೂರಲಾಗಿತ್ತು.

  ಈ ಪ್ರತಿಭಟನೆಗಳನ್ನು ಯಾವುದೇ ಸಾರ್ವಜನಿಕ ಅಸ್ತಿಗೆ ಹಾನಿ ಮಾಡದೆ, ಅಧಿಕೃತ ಪ್ರತಿಭಟನಾ ಪ್ರದೇಶಗಳಲ್ಲಿ ನಡೆಸಬೇಕು. ರಸ್ತೆತಡೆ ನಿವಾರಿಸಿ, ಸಂಚಾರ ಸುಗಮಗೊಳಿಸುವಂತೆ ಆದೇಶಿಸಬೇಕೆಂದು ಅರ್ಜಿದಾರರು ಕೋರಿದ್ದರು.

  ಸಿಎಎ ಹಾಗೂ ಎನ್‌ಆರ್‌ಸಿ ವಿರೋಧಿಸಿ ಶಾಹೀನ್‌ ಬಾಗ್ ಹಾಗೂ ಜಾಮಿಯಾ ಮಿಲಿಯಾ ವಿವಿ ಬಳಿ ಮಹಿಳೆಯರು, ಮಕ್ಕಳು ಸೇರಿದಂತೆ ಸಾವಿರಾರು ಮಂದಿ ಪ್ರತಿಭಟನೆ ನಡೆಸುತ್ತಿದ್ದಾರೆ.
  First published: