ಬಿಜೆಪಿ ಚುನಾವಣೆ ಗೆದ್ದದ್ದು ನನ್ನಿಂದ: ಅಣ್ಣಾ ಹಜಾರೆ ನೋವಿನ ಮಾತು

ಪ್ರಧಾನಿ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡ ಅಣ್ಣಾ, “ಮೋದಿ ನೇತೃತ್ವದ ಸರಕಾರವು ಜನರ ದಾರಿ ತಪ್ಪಿಸುತ್ತಿದ್ದು, ದೇಶವನ್ನು ನಿರಂಕುಶಪ್ರಭುತ್ವಕ್ಕೆ ಎಡೆ ಮಾಡಿಕೊಡುತ್ತಿದೆ” ಎಂದು ಟೀಕಿಸಿದರು.

Vijayasarthy SN | news18
Updated:February 5, 2019, 8:37 AM IST
ಬಿಜೆಪಿ ಚುನಾವಣೆ ಗೆದ್ದದ್ದು ನನ್ನಿಂದ: ಅಣ್ಣಾ ಹಜಾರೆ ನೋವಿನ ಮಾತು
ಪ್ರಧಾನಿ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡ ಅಣ್ಣಾ, “ಮೋದಿ ನೇತೃತ್ವದ ಸರಕಾರವು ಜನರ ದಾರಿ ತಪ್ಪಿಸುತ್ತಿದ್ದು, ದೇಶವನ್ನು ನಿರಂಕುಶಪ್ರಭುತ್ವಕ್ಕೆ ಎಡೆ ಮಾಡಿಕೊಡುತ್ತಿದೆ” ಎಂದು ಟೀಕಿಸಿದರು.
Vijayasarthy SN | news18
Updated: February 5, 2019, 8:37 AM IST
ಅಹ್ಮದ್​ನಗರ್(ಫೆ. 05): ಲೋಕಪಾಲ್ ಮಸೂದೆಗೆ ಆಗ್ರಹಿಸಿ ಅಣ್ಣಾ ಹಜಾರೆ ನಡೆಸುತ್ತಿರುವ ಧರಣಿ, ಸತ್ಯಾಗ್ರಹ 7ನೇ ದಿನಕ್ಕೆ ಕಾಲಿಟ್ಟಿದೆ. ಹಿಂದಿನ ಯುಪಿಎ ಸರಕಾರದ ಅವಧಿಯಲ್ಲಿ ದೇಶಾದ್ಯಂತ ಭ್ರಷ್ಟಾಚಾರ ವಿರೋಧಿ ಆಂದೋಲನ ಮಾಡಿ ಕೋಟ್ಯಂತರ ಜನರನ್ನು ಬಡಿದೆಚ್ಚರಿಸಿದ್ದ ಅಣ್ಣಾ ಹಜಾರೆ ಇದೀಗ ಮೋದಿ ಸರಕಾರದ ವಿರುದ್ಧ ತೊಡೆತಟ್ಟಿದ್ದಾರೆ. ಆದರೆ, ಲೋಕಪಾಲ್ ಹಾಗೂ ಭ್ರಷ್ಟಾಚಾರ ವಿರೋಧಿ ಆಂದೋಲನದಿಂದಾಗಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ ಪಕ್ಷ ಈಗ ಲೋಕಪಾಲ್​ಗೆ ದಿಕ್ಕು ಕೊಡುವ ಗೋಜಿಗೆ ಹೋಗಿಲ್ಲ. ಇದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆಗೆ ತೀವ್ರ ನೋವು ತಂದಿದೆ.

“2014ರಲ್ಲಿ ಬಿಜೆಪಿ ನನ್ನನ್ನು ಬಳಸಿಕೊಂಡಿತು. ಲೋಕಪಾಲ್​ಗಾಗಿ ನಾನು ನಡೆಸಿದ ಪ್ರತಿಭಟನೆಯು ಬಿಜೆಪಿ ಹಾಗೂ ಆಮ್ ಆದ್ಮಿ ಪಕ್ಷವನ್ನು ಅಧಿಕಾರದ ಗದ್ದುಗೆಗೆ ಏರಿಸಿತು. ನನಗೀಗ ಅವರ ಮೇಲಿದ್ದ ಎಲ್ಲಾ ಭರವಸೆಗಳು ಬತ್ತಿಹೋಗಿವೆ” ಎಂದು ಅಣ್ಣಾ ಹಜಾರೆ ನಿನ್ನೆ ಹೇಳಿದರು.

ಇದನ್ನೂ ಓದಿ: ಖದೀಮರಿಗೆ ದುಃಸ್ವಪ್ನವಾಗಿದ್ದ ರಮ್ಯಾ ಇನ್ನಿಲ್ಲ

ಪ್ರಧಾನಿ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡ ಅಣ್ಣಾ, “ಮೋದಿ ನೇತೃತ್ವದ ಸರಕಾರವು ಜನರ ದಾರಿ ತಪ್ಪಿಸುತ್ತಿದ್ದು, ದೇಶವನ್ನು ನಿರಂಕುಶಪ್ರಭುತ್ವಕ್ಕೆ ಎಡೆ ಮಾಡಿಕೊಡುತ್ತಿದೆ” ಎಂದು ಟೀಕಿಸಿದರು.

ಮಹಾರಾಷ್ಟ್ರದ ಬಿಜೆಪಿ ಸರಕಾರವನ್ನೂ ಬಿಡದ ಅಣ್ಣಾ ಹಜಾರೆ, “ಈ ಮಹಾರಾಷ್ಟ್ರ ಸರಕಾರ ಕಳೆದ 4 ವರ್ಷದಿಂದ ಬರೀ ಸುಳ್ಳುಗಳನ್ನೇ ಹೇಳುತ್ತಾ ಬಂದಿದೆ. ಎಷ್ಟು ದಿನ ಈ ಸುಳ್ಳು ನಡೆಯುತ್ತದೆ? ನನ್ನ ಶೇ. 90ರಷ್ಟು ಬೇಡಿಕೆಗಳನ್ನ ಈಡೇರಿಸಿದ್ದೇವೆಂದು ಸರಕಾರ ಸುಳ್ಳು ಹೇಳುತ್ತಿದೆ,” ಎಂದು ವಿಷಾದಿಸಿದರು.

“ನನ್ನೊಂದಿಗೆ ಚರ್ಚೆ ನಡೆಸಲು ಮತ್ತು ಮಾತುಕತೆ ನಡೆಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಚಿವರುಗಳು ಬರುತ್ತಾರೆ ಎಂದು ಇವರು ಹೇಳುತ್ತಲೇ ಇದ್ದಾರೆ. ಆದರೆ, ಜನರು ಗೊಂದಲವಾಗಬಾರದೆಂದು ನಾನು ಸಚಿವರನ್ನು ಭೇಟಿಯಾಗದಿರಲು ನಿರ್ಧರಿಸಿದ್ದೇನೆ. ಮೊದಲು ಅವರು ಸ್ಪಷ್ಟ ನಿರ್ಧಾರದೊಂದಿಗೆ, ಲಿಖಿತ ರೂಪದಲ್ಲಿ ಎಲ್ಲವನ್ನೂ ತಿಳಿಸಲಿ. ನನಗೆ ಅವರ ಮೇಲೆ ನಂಬುಗೆ ಹೊರಟುಹೋಗಿದೆ,” ಎಂದು ಅಣ್ಣಾ ಹಜಾರೆ ಹೇಳಿದರು.

ಇದನ್ನೂ ಓದಿ: ಹಂಪಿ ಉಳಿಸಿ ಹೋರಾಟಕ್ಕಿಳಿದ ರಾಜ ವಂಶಸ್ಥರು; ಮೈಸೂರು, ವಿಜಯನಗರ ವಂಶಸ್ಥರಿಂದ ಪ್ರತಿಭಟನೆ
Loading...

ತಮ್ಮ ಪ್ರತಿಭಟನೆಗೆ ತಮ್ಮ ಮಾಜಿ ಶಿಷ್ಯ ಅರವಿಂದ್ ಕೇಜ್ರಿವಾಲ್ ಅವರು ಬಂದರೆ ತನ್ನದೇನೂ ಅಭ್ಯಂತರವಿಲ್ಲ. ಆದರೆ, ಅವರೊಂದಿಗೆ ತಾನು ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಪರೋಕ್ಷವಾಗಿ ತಮ್ಮ ಮುನಿಸನ್ನು ಅಣ್ಣಾ ಹಜಾರೆ ಹೊರಹಾಕಿದರು.

ಅಣ್ಣಾ ಹಜಾರೆ ಅವರು ತಮ್ಮ ಸ್ವಂತ ಊರಾದ ರಾಲೆಗಣ್-ಸಿದ್ಧಿಯಲ್ಲಿ ಏಳು ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. 2011 ಮತ್ತು 2014ರಲ್ಲಿ ಅವರು ನಡೆಸಿದ ಹೋರಾಟವು ಆಂದೋಲನ ಸ್ವರೂಪ ಪಡೆದಿತ್ತು. ಮೋದಿ ಸರಕಾರ ಬಂದ ನಂತರ ಒಂದೆರಡು ಬಾರಿ ಅವರು ಪ್ರತಿಭಟನೆ ನಡೆಸಿದರಾದರೂ ಅಷ್ಟು ದೊಡ್ಡ ಮಟ್ಟಕ್ಕೆ ಅದು ತೀವ್ರತೆ ಪಡೆದಿಲ್ಲ. ಈ ಬಾರಿಯ ಪ್ರತಿಭಟನೆ ಕೂಡ ತೀವ್ರತೆ ಪಡೆದುಕೊಳ್ಳಲು ವಿಫಲವಾಗಿದೆ.
First published:February 5, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...