ಕಾಂಗ್ರೆಸ್ ಮುಸ್ಲಿಮರನ್ನು ಬಳಸಿಕೊಂಡಂತೆಯೇ ಬಿಜೆಪಿ ಹಿಂದೂಗಳನ್ನು ಬಳಸಿಕೊಂಡಿದೆ: ಶಿವಸೇನೆ


Updated:September 12, 2018, 9:43 AM IST
ಕಾಂಗ್ರೆಸ್ ಮುಸ್ಲಿಮರನ್ನು ಬಳಸಿಕೊಂಡಂತೆಯೇ ಬಿಜೆಪಿ ಹಿಂದೂಗಳನ್ನು ಬಳಸಿಕೊಂಡಿದೆ: ಶಿವಸೇನೆ

Updated: September 12, 2018, 9:43 AM IST
ನ್ಯೂಸ್​ 18 ಕನ್ನಡ

ಮುಂಬೈ(ಸೆ.12): ಶಿವಸೇನೆಯು ತನ್ನ ಮಿತ್ರಪಕ್ಷ ಬಿಜೆಪಿ ವಿರುದ್ಧ ಮತ್ತೊಮ್ಮೆ ತೀವ್ರ ವಾಗ್ದಾಳಿ ನಡೆಸುತ್ತಾ "ಬಿಜೆಪಿ ಹಿಂದುತ್ವದ ಏಣಿ ಬಳಸಿ ಅಧಿಕಾರಕ್ಕೇರಿದರು ಆದರೆ ಉದ್ದೆಶ ಈಡೇರುತ್ತಿದ್ದಂತೆಯೇ ಅವರಿದನ್ನು ಕಿತ್ತೆಸೆದಿದ್ದಾರೆ" ಎಂದಿದ್ದಾರೆ. ಅಲ್ಲದೇ ಬಿಜೆಪಿಯು ಹಿಂದುತ್ವದ ಬೆನ್ನಿಗೆ ಚೂರಿ ಹಾಕಿದೆ ಎಂದು ಆರೋಪಿಸಿರುವ ಶಿವಸೇನೆಯ ಅಧ್ಯಕ್ಷ ಉದ್ಧವ್​ ಠಾಕ್ರೆ 'ಹಿಂದೂಗಳಿಗೆ ನೀಡಿದ್ದ ಒಂದು ಮಾತನ್ನೂ ಈಡೇರಿಸಿಲ್ಲ. ಹಿಂದೂಗಳು ಈಗ ನಿರಾಶರಾಗಿದ್ದಾರೆ ಯಾಕೆಂದರೆ ಬಿಜೆಪಿಯೂ ಈಗ ಕಾಂಗ್ರೆಸ್​ನಂತಾಗಿದೆ ಎಂದಿದ್ಧಾರೆ.

ಪಕ್ಷವು ತನ್ನ ಮುಖವಾಣಿ "ಸಾಮ್​ನಾ" ಪತ್ರಿಕೆಯ ಸಂಪಾದಕೀಯದಲ್ಲಿ "ಕಾಂಗ್ರೆಸ್​ ಕನಿಷ್ಟ ಪಕ್ಷ ಈವರೆಗೆ ಮುಸ್ಲಿಂಮರನ್ನು ಖುಷಿಪಡಿಸಲು ಪ್ರಯತ್ನಿಸಿದೆ. ಆದರೆ ಬಿಜೆಪಿ ಹಿಂದೂಗಳ ಕಾಳಜಿ ವಹಿಸುವ ಬದಲಾಗಿ ಜಾತ್ಯಾತೀತರನ್ನಾಗಿಸುವ ಪ್ರಯತ್ನ ಮಾಡುತ್ತಿದೆ. ಯಾವ ರೀತಿ ಕಾಂಗ್ರೆಸ್​ ಮುಸ್ಲಕಿಂಮರನ್ನು ಬಳಸಿಕೊಂಡಿತ್ತೋ ಅದೇ ರೀತಿ ಇಂದು ಬಿಜೆಪಿ ಹಿಂದೂಗಳನ್ನು ಬಳಸಿಕೊಳ್ಳುತ್ತಿದೆ. ಹೀಗಾಗಿ ಹಿಂದೂಗಳಲ್ಲಿ ನಿರಾಸೆ ಮೂಡಿದೆ" ಎಂದು ಪ್ರಕಟಿಸಲಾಗಿದೆ.

ಸಾಮ್​ನಾದಲ್ಲಿ 'ಹಿಂದೂಗಳಿಗೆ ನೀಡಿದ್ದ ಒಂದೇ ಒಂದು ಭರವಸೆಯನ್ನು ಈವರೆಗೆ ಬಿಜೆಪಿ ಈಡೇರಿಸಿಲ್ಲ. ಕನಿಷ್ಟ ಪಕ್ಷ ರಾಮಮಂದಿರ ನಿರ್ಮಾಣ ಹಾಗೂ ಸಮಾನ ನಾಗರಿಕ ಸಂಹಿತೆಯ ಕುರಿತಾಗಿ ನೀಡಲಾದ ಭರವಸೆಯನ್ನೂ ಪೂರ್ಣಗೊಳಿಸಿಲ್ಲ. ತಮ್ಮ ಹಿಂದುತ್ವ ಅಜೆಂಡಾದಲ್ಲಿ ಈ ಎಲ್ಲಾ ಭರವಸೆಗಳನ್ನು ಈಡೇರಿಸುವುದಾಗಿ ಬಿಜೆಪಿ ಹೇಳಿಕೊಂಡಿತ್ತು. ಆದರೆ ಈ ಬದ್ಧತೆ ಅಧಿಕಾರ ಪಡೆದ ಬಳಿಕ ತೋರಿಸಿಲ್ಲ' ಎಂದು ಪ್ರಕಟಿಸಲಾಗಿದೆ.

ಹಿಂದುತ್ವದ ಬೆನ್ನಿಗೆ ಚೂರಿ ಹಾಕಿದರು

ಶಿವಸೇನೆಯು ತನ್ನ ಪತ್ರಿಕೆಯಲ್ಲಿ "ಹಿಂದೂಗಳು ಒಂದಾಗಬೇಕೆಂದು ನರೇಂದ್ರ ಮೋದಿ ಪ್ರಧಾನ ಮಂತ್ದರಿಯಾದರು. ಆದರೆ ಮುಂದೆ ಆಗಿದ್ದೇನು? ಶಿವಸೇನೆಯೊಂದಿಗಿನ ಮೈತ್ರಿ ಮುರಿದು ಹಿಂದುತ್ಬವದ ಬೆನ್ನಿಗೆ ಚೂರಿ ಹಾಕಿದರು. ಅಲ್ಲದೇ ಯಾರೆಲ್ಲಾ ಹಿಂದುತ್ವ ಹಾಗೂ ದೇಶದ ಪರವಾಗಿ ಆಕ್ರಮಣಕಾರಿಯಾಗಿ ಮಾತನಾಡುತ್ತಾರೋ ಅವರೆಲ್ಲರನ್ನೂ ಬಿಜೆಪಿ ಪರವಾಗಿ ದೇಶದ್ರೋಹಿಗಳೆಂದು ಘೋಷಿಸಲಾಗುತ್ತದೆ. ಹಿಂದುತ್ವದ ಏಣಿಯನ್ನೇರಿ ಬಿಜೆಪಿ ಅಧಿಕಾರಕ್ಕೇರಿತು. ಆದರೆ ತನ್ನ ಕೆಲಸ ಆದ ಬಳಿಕ ಈ ಏಣಿಯನ್ನೇ ಕಿತ್ತೆಸೆದರು. ಅಧಿಕಾರಕ್ಕೇರಿದ ನಕಲಿ ಹಿಂದೂಗಳು ಇಂದು ಆಕ್ರಮಣಕಾರಿಯಾಗಿ ಮಾತನಾಡುವ ನಿಜವಾದ ಹಿಂದುತ್ವದ ಧ್ವನಿಯನ್ನು ಮರೆ ಮಾಡುವ ಯತ್ನದಲ್ಲಿದ್ದಾರೆ. ತಮ್ಮದೇ ದೇಶದಲ್ಲಿ ಹಿಂದೂಗಳನ್ನು ಭಯತ್ಪಾದಕರೆಂದು ಘೋಷಿಸಿ ಮುಗಿಸುವ ಪ್ರಯತ್ನ ನಡೆಯುತ್ತಿದೆ" ಎಂದು ಬರೆಯಲಾಗಿದೆ.
First published:September 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...