ಶಾಹೀನ್ ಬಾಗ್ ಬಿಸಿ ಆರಲು ಅಮಿತ್ ಶಾ ಬಿಡುವುದಿಲ್ಲ: ಅರವಿಂದ್ ಕೇಜ್ರಿವಾಲ್

ಶಾಹೀನ್ ಬಾಗ್ ಸಮೀಪವಿರುವ ಜಸೋಲಾ ವಿಹಾರ್ ಪ್ರದೇಶದ ಸುಮಾರು 200 ಜನರು ಕಾಲಿಂದಿ ಕುಂಜ್ ರಸ್ತೆಯನ್ನು ತೆರವುಗೊಳಿಸುವಂತೆ ಪ್ರತಿಭಟನೆ ಮಾಡಿದ್ಧಾರೆ. ಇದೇ ಹಿನ್ನೆಲೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರು ರಸ್ತೆ ತೆರವುಗೊಳಿಸುವ ಹೊಣೆಗಾರಿಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರದ್ದು ಎಂದು ಇವತ್ತು ಹೇಳಿಕೆ ನೀಡಿರುವುದು.

ಅರವಿಂದ್ ಕೇಜ್ರಿವಾಲ್

ಅರವಿಂದ್ ಕೇಜ್ರಿವಾಲ್

 • News18
 • Last Updated :
 • Share this:
  ನವದೆಹಲಿ(ಫೆ. 03): ಶಾಹೀನ್ ಬಾಗ್​ನಲ್ಲಿ ಸಿಎಎ, ಎನ್​ಆರ್​ಸಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ನಿಲ್ಲುವುದು ಅಮಿತ್ ಶಾ ಅವರಿಗೆ ಬೇಕಿಲ್ಲ. ಬಿಜೆಪಿಗೆ ಲಾಭವಾಗುವ ಲೆಕ್ಕಾಚಾರದಲ್ಲಿ ಪ್ರತಿಭಟನೆಗಳನ್ನು ಜೀವಂತವಾಗಿರಿಸಿಕೊಳ್ಳಲಾಗುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪ ಮಾಡಿದ್ಧಾರೆ. ಶಾಹೀನ್ ಬಾಗ್​ನಲ್ಲಿ ಕಳೆದ ಕೆಲ ವಾರಗಳಿಂದ ಪ್ರತಿಭಟನೆ ನಡೆಸುತ್ತಿರುವ ಜನರು ದೆಹಲಿಗೆ ಬಹಳ ಮುಖ್ಯವೆನಿಸಿರುವ ಕಾಲಿಂದಿ ಕುಂಜ್ ರಸ್ತೆಯನ್ನ ಮುತ್ತಿಕೊಂಡಿದ್ದಾರೆ. ಈ ವಿಚಾರದ ಬಗ್ಗೆ ಮಾತನಾಡುತ್ತಾ ಕೇಜ್ರಿವಾಲ್ ಕೇಂದ್ರ ಗೃಹ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

  ಶಾಹೀನ್ ಬಾಗ್​ನಲ್ಲಿ ಪ್ರತಿಭಟನಾಕಾರರಿಂದ ರಸ್ತೆ ಸಂಪರ್ಕ ಕಡಿತಗೊಂಡಿರುವುದು ಬಿಜೆಪಿಗೆ ಲಾಭ ತರುತ್ತದೆ. ಅದಕ್ಕಾಗೆ ಕೇಂದ್ರ ಸರ್ಕಾರ ಸುಮ್ಮನೆ ನೋಡುತ್ತಾ ಕೂತಿದೆ ಎಂದು ಕೇಜ್ರಿವಾಲ್ ಆಕ್ರೋಶ ವ್ಯಕ್ತಪಡಿಸಿದರು. “ಅಮಿತ್ ಶಾ ಮನಸು ಮಾಡಿದರೆ ಎರಡೇ ನಿಮಿಷದಲ್ಲಿ ಈ ರಸ್ತೆಯನ್ನು ಮುಕ್ತಗೊಳಿಸಬಹುದು. ಆದರೆ, ಈ ಸಮಸ್ಯೆ ಬಗೆಹರಿದುಬಿಟ್ಟರೆ ಬಿಜೆಪಿಗೆ ಚುನಾವಣೆ ಎದುರಿಸಲಿ ಬೇರೆ ವಿಚಾರವೇ ಇರುವುದಿಲ್ಲ” ಎಂದು ದೆಹಲಿ ಮುಖ್ಯಮಂತ್ರಿ ಟೀಕಿಸಿದರು.

  ಇದನ್ನೂ ಓದಿ: ಅಮಿತ್ ಶಾ ರಾಜೀನಾಮೆ ನೀಡಬೇಕು: ಟ್ವಿಟ್ಟರ್​ನಲ್ಲಿ ಟ್ರೆಂಡಿಂಗ್

  ಕಳೆದ 50 ದಿನಗಳಿಂದ ಶಾಹೀನ್ ಬಾಗ್​ನಲ್ಲಿ ದಿನ ನಿತ್ಯ ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟನಾಕಾರರು ಕಾಲಿಂದಿ ಕುಂಜ್ ಸೇರಿದಂತೆ ಇಲ್ಲಿಯ ಕೆಲ ರಸ್ತೆಗಳನ್ನು ಬ್ಲಾಕ್ ಮಾಡಿರುವುದು ದೆಹಲಿಯ ಹಲವು ನಿವಾಸಿಗಳಿಗೆ ಸಂಕಷ್ಟವನ್ನೂ ತಂದಿತ್ತಿವೆ. ನೋಯ್ಡಾಗೆ ಹೋಗಲು ಕಾಲಿಂದಿ ಕುಂಜ್ ರಸ್ತೆ ಶಾರ್ಟ್ ಕಟ್ ಎನಿಸಿದೆ. ಈಗ ಈ ರಸ್ತೆ ಬ್ಲಾಕ್ ಆಗಿರುವುದರಿಂದ ಸುತ್ತಿಬಳಸಿ ನೋಯ್ಡಾಗೆ ಹೋಗಬೇಕಾಗುತ್ತದೆ ಎಂದು ಇಲ್ಲಿಯ ನಿವಾಸಿಗಳು ಹೇಳುತ್ತಿದ್ಧಾರೆ ಎಂದು ನ್ಯೂ ಇಂಡಿಯನ್ ಎಕ್ಸ್​ಪ್ರೆಸ್ ಪತ್ರಿಕೆ ವರದಿ ಮಾಡಿದೆ.

  ಸಿಎಎ ವಿರುದ್ಧ ಇವರು ಇಷ್ಟು ಪ್ರತಿಭಟನೆ ಮಾಡುವಂಥದ್ದು ಏನಿದೆ? ಇವರ ಪ್ರತಿಭಟನೆಯಿಂದಾಗಿ ಮಕ್ಕಳು ಶಾಲೆಗೆ ಸರಿಯಾಗಿ ಹೋಗಲು ಸಾಧ್ಯವಾಗುತ್ತಿಲ್ಲ. ಪರೀಕ್ಷೆ ಸಮೀಪಿಸುತ್ತಿದ್ದು ಮಕ್ಕಳು ತಯಾರಿ ನಡೆಸಲು ಆಗುತ್ತಿಲ್ಲ. ಈ ಪ್ರತಿಭಟನಾಕಾರರನ್ನು ರಾಮಲೀಲಾ ಮೈದಾನಕ್ಕೋ ಅಥವಾ ಬೇರೆ ಯಾವುದಾದರೂ ಜಾಗಕ್ಕೋ ಕಳುಹಿಸುವುದು ಒಳಿತು. ಸ್ಥಳೀಯ ನಿವಾಸಿಗಳಿಗೆ ತೊಂದರೆ ಕೊಟ್ಟುಕೊಂಡು ಪ್ರತಿಭಟಿಸುತ್ತಿರುವುದು ಸರಿಯಲ್ಲ ಎಂದು ಇಲ್ಲಿನ ನಿವಾಸಿಯೊಬ್ಬರು ಹೇಳಿದ್ದಾರೆ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

  ಇದನ್ನೂ ಓದಿ: ಆರ್ಥಿಕತೆ ಚೇತರಿಕೆ? ಜನವರಿ ಪಿಎಂಐ ಇಂಡೆಕ್ಸ್ ಪ್ರಕಾರ ಉತ್ಪಾದನಾ ವಲಯ 8 ವರ್ಷದಲ್ಲೇ ಗರಿಷ್ಠ ಮಟ್ಟ

  ಇದೇ ವೇಳೆ, ಶಾಹೀನ್ ಬಾಗ್ ಸಮೀಪವಿರುವ ಜಸೋಲಾ ವಿಹಾರ್ ಪ್ರದೇಶದ ಸುಮಾರು 200 ಜನರು ಕಾಲಿಂದಿ ಕುಂಜ್ ರಸ್ತೆಯನ್ನು ತೆರವುಗೊಳಿಸುವಂತೆ ಪ್ರತಿಭಟನೆ ಮಾಡಿದ್ಧಾರೆ. ಇದೇ ಹಿನ್ನೆಲೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರು ರಸ್ತೆ ತೆರವುಗೊಳಿಸುವ ಹೊಣೆಗಾರಿಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರದ್ದು ಎಂದು ಇವತ್ತು ಹೇಳಿಕೆ ನೀಡಿರುವುದು.

  ದೆಹಲಿಯಲ್ಲಿ ಫೆ. 8ರಂದು ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಕೇಜ್ರಿವಾಲ್ ಹ್ಯಾಟ್ರಿಕ್ ಸಿಎಂ ಪಟ್ಟದ ನಿರೀಕ್ಷೆಯಲ್ಲಿದ್ಧಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟಕ್ಕೆ ಆಮ್ ಆದ್ಮಿ ಪಕ್ಷ ಬೆಂಬಲ ನೀಡಿದ್ದರೂ ಕೇಜ್ರಿವಾಲ್ ಅವರು, ಇದು ಸರ್ಕಾರದ ಸಾಧನೆಯೇ ಚುನಾವಣೆಯ ವಿಚಾರವಾಗಿದೆ ಎಂದು ಘೋಷಿಸಿದ್ಧಾರೆ. ಎಲ್ಲಿಯೂ ಅವರು ಸಿಎಎ ವಿರೋಧಿ ಹೋರಾಟವನ್ನು ಚುನಾವಣೆಯ ವಿಚಾರವಾಗಿ ಪ್ರಸ್ತಾಪ ಮಾಡುತ್ತಿಲ್ಲ ಎಂಬುದು ಇಲ್ಲಿ ಗಮನಾರ್ಹ. ಆದರೆ, ದೆಹಲಿಯಲ್ಲಿ ಸಿಎಂ ಅಭ್ಯರ್ಥಿ ಮುಂದಿಡದ ಬಿಜೆಪಿಯು ಈ ಚುನಾವಣೆಯಲ್ಲಿ ಸಿಎಎ ವಿಚಾರವನ್ನೇ ಪ್ರಮುಖ ಅಸ್ತ್ರವಾಗಿ ಬಳಕೆ ಮಾಡುತ್ತಿದೆ.

  ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

  First published: