ಬಿಜೆಪಿಯ ಚೌವ್ಹಾಣ್ ಕಾಂಗ್ರೆಸ್ ಶಾಸಕರಿಗೆ ಹಣದ ಆಮಿಷ ಒಡ್ಡಿರುವ ಆಡಿಯೋ ದಾಖಲೆ ನನ್ನ ಬಳಿ ಇದೆ; ದಿಗ್ವಿಜಯ್ ಸಿಂಗ್

ರೆಸಾರ್ಟ್​ನಲ್ಲಿರುವ 18 ಶಾಸಕರಿಗೆ ನಾನು ಪತ್ರ ಬರೆದಿದ್ದೇನೆ. ಅದನ್ನು ಡಿಜಿಪಿಯವರಿಗೆ ನೀಡಿದ್ದೇನೆ. ನನ್ನ ಪತ್ರವನ್ನು ನಮ್ಮ ಎಲ್ಲ ಶಾಸಕರಿಗೆ ತಲುಪಿಸುವಂತೆ ಡಿಜಿಪಿ ಪ್ರವೀಣ್ ಸೂದ್ ಅವರಲ್ಲಿ  ಕೋರಿದ್ದೇನೆ. ಆದರೆ, ಅದೂ ಕೂಡ ಸಾಧ್ಯವಿಲ್ಲ ಅಂತ ಡಿಜಿಪಿ ಪ್ರವೀಣ್ ಸೂದ್ ನಿರಾಕರಿಸಿದ್ದಾರೆ.

ದಿಗ್ವಿಜಯ್ ಸಿಂಗ್

ದಿಗ್ವಿಜಯ್ ಸಿಂಗ್

 • Share this:
  ಬೆಂಗಳೂರು: ಬೆಂಗಳೂರು ರೆಸಾರ್ಟ್​ನಲ್ಲಿ ಬೀಡುಬಿಟ್ಟಿರುವ ಮಧ್ಯಪ್ರದೇಶ ಕಾಂಗ್ರೆಸ್ ಶಾಸಕರನ್ನು ಭೇಟಿಯಾಗಲು ಲಿಖಿತ ರೂಪದಲ್ಲಿ ಮನವಿ ನೀಡುವಂತೆ ಕರ್ನಾಟಕ ಡಿಜಿಪಿ ನಿನ್ನೆ ನಮಗೆ ಭರವಸೆ ನೀಡಿದ್ದರು. ಅದರಂತೆ ಇಂದು ನಾವು ಲಿಖಿತ ರೂಪದಲ್ಲಿ ಶಾಸಕರ ಭೇಟಿಗೆ ಮನವಿ ಸಲ್ಲಿಸಿದ್ದೇವೆ. ಆದರೆ, ಈಗ ಶಾಸಕರ ಭೇಟಿ ಸಾಧ್ಯವಿಲ್ಲ ಎಂದು ಡಿಜಿಪಿ ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಆರೋಪಿಸಿದ್ದಾರೆ.

  ಕೆಪಿಸಿಸಿ ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ದಿಗ್ವಿಜಯ್ ಸಿಂಗ್,  ರೆಸಾರ್ಟ್​ನಲ್ಲಿರುವ 18 ಶಾಸಕರಿಗೆ ನಾನು ಪತ್ರ ಬರೆದಿದ್ದೇನೆ. ಅದನ್ನು ಡಿಜಿಪಿಯವರಿಗೆ ನೀಡಿದ್ದೇನೆ. ನನ್ನ ಪತ್ರವನ್ನು ನಮ್ಮ ಎಲ್ಲ ಶಾಸಕರಿಗೆ ತಲುಪಿಸುವಂತೆ ಡಿಜಿಪಿ ಪ್ರವೀಣ್ ಸೂದ್ ಅವರಲ್ಲಿ  ಕೋರಿದ್ದೇನೆ. ಆದರೆ, ಅದೂ ಕೂಡ ಸಾಧ್ಯವಿಲ್ಲ ಅಂತ ಡಿಜಿಪಿ ಪ್ರವೀಣ್ ಸೂದ್ ನಿರಾಕರಿಸಿದ್ದಾರೆ. ಹೀಗಾಗಿ ಎಲ್ಲ ಪತ್ರಗಳನ್ನು ಕೋರಿಯರ್ ಮೂಲಕ ರಮಡ ಹೊಟೇಲ್​ನಲ್ಲಿರುವ ಶಾಸಕರಿಗೆ ನೀಡಿದ್ದೇನೆ ಎಂದರು.

  ಸಿಎಂ ಯಡಿಯೂರಪ್ಪ ಅವರನ್ನು ಕೂಡ ಭೇಟಿ ಮಾಡುವ ಪ್ರಯತ್ನ ಮಾಡಿದ್ದೇನೆ. ಬಿಜೆಪಿ ಈ ರೀತಿಯ ಪವರ್ ಗೇಮ್ ರಚನೆ ಮಾಡುತ್ತಿದೆ. ಮೋದಿ, ಅಮಿತ್ ಶಾ ಆಪರೇಷನ್ ಮನಿ ಬ್ಯಾಗ್ ಹಿಂದಿದ್ದಾರೆ. ಕರ್ನಾಟಕದಲ್ಲಿ ಯಾವ ರೀತಿ ಆಪರೇಷನ್ ಮನಿ ಬ್ಯಾಗ್ ಮಾಡಿದ್ದಾರೋ ಅದೇ ರೀತಿ ಮಾಡುತ್ತಿದ್ದಾರೆ. ಶಿವರಾಜ್ ಸಿಂಗ್ ಚೌಹಾಣ್ ಕಾಂಗ್ರೆಸ್ ಶಾಸಕರಿಗೆ ಹಣದ ಆಮಿಷ ಒಡ್ಡಿರುವ ಆಡಿಯೋ ದಾಖಲೆ ನನ್ನ ಬಳಿ ಇದೆ. ಭ್ರಷ್ಟಾಚಾರದ ಆರೋಪ ಹೊತ್ತಿರುವ ಶಾಸಕರು ಇದರ ಹಿಂದಿದ್ದಾರೆ ಎಂದು ಆರೋಪ ಮಾಡಿದರು.

  ಇದನ್ನು ಓದಿ: ಬೆಂಗಳೂರಲ್ಲಿ ದಿಗ್ವಿಜಯ ಸಿಂಗ್ ವಶಕ್ಕೆ ಪಡೆದ ಪ್ರಕರಣ; ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ
  First published: