ಸೋಲಿನ ಪರಾಮರ್ಶೆಗೆ ಮುಂದಾದ ಬಿಜೆಪಿ: ಒಂದೇ ವರ್ಷದಲ್ಲಿ 5 ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡ ಕಮಲ ಪಾಳಯ

ಇನ್ನು, ಬಿಜೆಪಿಗೆ ಜಾರ್ಖಂಡ್ ಸೋಲು ನಿರೀಕ್ಷಿತವೇ ಆಗಿದೆ. ಬುಡಕಟ್ಟು ಜನಾಂಗಕ್ಕೆ ಸೇರದ ರಘುಬರ್ ದಾಸ್ ಅವರ ಜನಪ್ರಿಯತೆ ಸಾಕಷ್ಟು ಮಂಕಾಗಿಹೋಗಿತ್ತು. ರಾಜ್ಯದಲ್ಲಿ ಆಡಳಿತವಿರೋಧಿ ಅಲೆ ಪ್ರಬಲವಾಗಿತ್ತು. ಸ್ವತಃ ಬಿಜೆಪಿ ಕೂಡ 25ಕ್ಕಿಂತ ಹೆಚ್ಚು ಸ್ಥಾನವನ್ನು ನಿರೀಕ್ಷಿಸಿರಲಿಲ್ಲ

news18-kannada
Updated:December 24, 2019, 10:41 AM IST
ಸೋಲಿನ ಪರಾಮರ್ಶೆಗೆ ಮುಂದಾದ ಬಿಜೆಪಿ: ಒಂದೇ ವರ್ಷದಲ್ಲಿ 5 ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡ ಕಮಲ ಪಾಳಯ
ಇನ್ನು, ಬಿಜೆಪಿಗೆ ಜಾರ್ಖಂಡ್ ಸೋಲು ನಿರೀಕ್ಷಿತವೇ ಆಗಿದೆ. ಬುಡಕಟ್ಟು ಜನಾಂಗಕ್ಕೆ ಸೇರದ ರಘುಬರ್ ದಾಸ್ ಅವರ ಜನಪ್ರಿಯತೆ ಸಾಕಷ್ಟು ಮಂಕಾಗಿಹೋಗಿತ್ತು. ರಾಜ್ಯದಲ್ಲಿ ಆಡಳಿತವಿರೋಧಿ ಅಲೆ ಪ್ರಬಲವಾಗಿತ್ತು. ಸ್ವತಃ ಬಿಜೆಪಿ ಕೂಡ 25ಕ್ಕಿಂತ ಹೆಚ್ಚು ಸ್ಥಾನವನ್ನು ನಿರೀಕ್ಷಿಸಿರಲಿಲ್ಲ
  • Share this:
ಬೆಂಗಳೂರು(ಡಿ.24): ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆಯನ್ನೇರಿ ಜೆಎಂಎಂ ನೇತೃತ್ವದ ಮೈತ್ರಿಕೂಟ ಸ್ಪಷ್ಟ ಬಹುಮತ ಗಳಿಸಿದೆ. 81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಯ ಚುನಾವಣೆಯಲ್ಲಿ ಜೆಎಂಎಂ-ಕಾಂಗ್ರೆಸ್-ಆರ್​ಜೆಡಿ ಮೈತ್ರಿಕೂಟ 47 ಸ್ಥಾನಗಳನ್ನು ಜಯಿಸಿದೆ. ಈ ಮೂಲಕ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢ, ಮಹಾರಾಷ್ಟ್ರದ ನಂತರ ಜಾರ್ಖಂಡ್​​ ರಾಜ್ಯದಲ್ಲೂ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಒಂದೇ ವರ್ಷದಲ್ಲಿ ಸುಮಾರು 5 ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡ ಬಿಜೆಪಿ ಹೈಕಮಾಂಡ್​​ಗೀಗ ಪಕ್ಷದ ಮುಂದಿನ ಭವಿಷ್ಯದ ಬಗ್ಗೆ ಚಿಂತೆ ಶುರುವಾಗಿದೆ ಎನ್ನುತ್ತಿವೆ ಮೂಲಗಳು.

ಹೌದು, ಜಾರ್ಖಾಂಡ್ ಸೇರಿದಂತೆ ಐದು ರಾಜ್ಯಗಳಲ್ಲಿ ಸೋತ ಬಿಜೆಪಿ ಹೈಕಮಾಂಡ್​​ ತಮ್ಮ ಪಕ್ಷದ ರಾಜಕೀಯ ಭವಿಷ್ಯದ ಬಗ್ಗೆ ಎಚ್ಚರಿಕೆ ವಹಿಸಲಿದ್ದಾರೆ ಎನ್ನಲಾಗಿದೆ. ಮೊದಲಿಗೆ ಕಳೆದ ವರ್ಷ 2018 ವರ್ಷಾಂತ್ಯದಲ್ಲಿ ಬಿಜೆಪಿ ರಾಜ್ಯಸ್ಥಾನ, ಮಧ್ಯಪ್ರದೇಶ, ಛತ್ತೀಸ್​​ಗಡ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿತ್ತು. ನಂತರ ಮಹಾರಾಷ್ಟ್ರದಲ್ಲಿ ಮತ್ತೀಗ ಜಾರ್ಖಂಡ್​​ನಲ್ಲೂ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಹಾಗಾಗಿಯೇ ಹೈಕಮಾಂಡ್​​ ಬಿಜೆಪಿ ಬಲವರ್ಧನೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಐದು ರಾಜ್ಯಗಳಂತೆಯೇ ಹರಿಯಾಣ ಚುನಾವಣೆಯಲ್ಲೂ ಬಿಜೆಪಿ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆಗಳಿದ್ದವು. ಆದರೆ, ದುಷ್ಯಂತ್ ಚೌಟಾಲಾ ನೇತೃತ್ವದ ಜನನಾಯಕ ಜನತಾ ಪಕ್ಷದ ಬೆಂಬಲದಿಂದ ಹೇಗೋ ಸರ್ಕಾರ ರಚಿಸುವಲ್ಲಿ ಬಿಜೆಪಿ ಯಶಸ್ವಿಯಾಯಿತು. ಇದೀಗ ಐದು ರಾಜ್ಯಗಳ ಸೋಲಿನ ಪರಾಮರ್ಶೆಗೆ ಮುಂದಾದ ಬಿಜೆಪಿ ಹೈಕಮಾಂಡ್​​​ ಪಕ್ಷ ಸಂಘಟನೆಗೆ ಒತ್ತು ನೀಡಬೇಕೆಂದು ನಿರ್ಧರಿಸಿದ್ಧಾರೆ.

ಇದನ್ನೂ ಓದಿ: ಜಾರ್ಖಂಡ್ ಚುನಾವಣೆ: ಬಿಜೆಪಿಗೆ ಮುಖಭಂಗ; ಜೆಎಂಎಂ ಹಾಗೂ ಮಿತ್ರರಿಗೆ ಗೆಲುವಿನ ನಗೆ

ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮಾಡುತ್ತೇವೆಂದು ಘೋಷಿಸಿ ಬಿಜೆಪಿ ಅಡಿ ಇಡುತ್ತಿರುವಂತೆಯೇ ಕಾಂಗ್ರೆಸ್ ಪಕ್ಷ ಒಂದೊಂದೇ ರಾಜ್ಯಗಳನ್ನ ಬಿಜೆಪಿಯಿಂದ ಕಿತ್ತುಕೊಳ್ಳುತ್ತಿರುವುದು ಗಮನಾರ್ಹ. ಮಹಾರಾಷ್ಟ್ರದಲ್ಲಿ ಶಿವಸೇನೆಯನ್ನು ಸೆಳೆದು ಅಧಿಕಾರ ಹಿಡಿಯಿತು. ಈಗ ಜಾರ್ಖಂಡ್​ನಲ್ಲಿ ನೇರವಾಗಿಯೇ ಕಾಂಗ್ರೆಸ್ ಜನಾದೇಶ ಪಡೆದು ಅಧಿಕಾರ ಹಂಚಿಕೊಳ್ಳುತ್ತಿದೆ.

ಇನ್ನು, ಬಿಜೆಪಿಗೆ ಜಾರ್ಖಂಡ್ ಸೋಲು ನಿರೀಕ್ಷಿತವೇ ಆಗಿದೆ. ಬುಡಕಟ್ಟು ಜನಾಂಗಕ್ಕೆ ಸೇರದ ರಘುಬರ್ ದಾಸ್ ಅವರ ಜನಪ್ರಿಯತೆ ಸಾಕಷ್ಟು ಮಂಕಾಗಿಹೋಗಿತ್ತು. ರಾಜ್ಯದಲ್ಲಿ ಆಡಳಿತವಿರೋಧಿ ಅಲೆ ಪ್ರಬಲವಾಗಿತ್ತು. ಸ್ವತಃ ಬಿಜೆಪಿ ಕೂಡ 25ಕ್ಕಿಂತ ಹೆಚ್ಚು ಸ್ಥಾನವನ್ನು ನಿರೀಕ್ಷಿಸಿರಲಿಲ್ಲ. ಬಿಜೆಪಿಗೆ ಸಿಕ್ಕಿರುವ ಒಂದೇ ಸಮಾಧಾನವೆಂದರೆ ರಘುಬರ್ ದಾಸ್ 5 ವರ್ಷ ಆಡಳಿತಾವಧಿ ಪೂರ್ಣಗೊಳಿಸಿದ್ದು. ಜಾರ್ಖಂಡ್​ನಲ್ಲಿ ಪೂರ್ಣಾವಧಿ ಮುಖ್ಯಮಂತ್ರಿಯಾದ ಮೊದಲ ವ್ಯಕ್ತಿ ರಘುಬರ್ ದಾಸ್.
First published: December 24, 2019, 9:14 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading