ಪಶ್ಚಿಮಬಂಗಾಳ ಉದ್ವಿಗ್ನ; ಮಮತಾ ಸರ್ಕಾರದ ವಿರುದ್ಧ ಬೀದಿಗಿಳಿದ ಬಿಜೆಪಿ, ಪ್ರತಿಭಟನಾಕಾರರ ಮೇಲೆ ಜಲ ಫಿರಂಗಿ, ಟಿಯರ್ ಗ್ಯಾಸ್​ ಬಳಕೆ

ಲೋಕಸಭೆ ಚುನಾವಣೆಯಿಂದ ಹಿಡಿದು ಇಂದಿನವರೆಗೂ ರಾಜ್ಯದಲ್ಲಿ ರಾಜಕೀಯ ಘರ್ಷಣೆಗಳು ಸಂಭವಿಸುತ್ತಲೇ ಇವೆ. ನಾರ್ಥ್​ 24 ಪರ್ಗಾನಸ್​ ಜಿಲ್ಲೆಯ ಕಂಕಿನಾರದಲ್ಲಿ ಸೋಮವಾರ ಸಂಭವಿಸಿದ ಬಾಂಬ್ ಸ್ಪೋಟದಲ್ಲಿ ಇಬ್ಬರು ಮೃತಪಟ್ಟು, ನಾಲ್ವರು ಗಾಯಗೊಂಡಿದ್ದರು.

HR Ramesh | news18
Updated:June 12, 2019, 3:15 PM IST
ಪಶ್ಚಿಮಬಂಗಾಳ ಉದ್ವಿಗ್ನ; ಮಮತಾ ಸರ್ಕಾರದ ವಿರುದ್ಧ ಬೀದಿಗಿಳಿದ ಬಿಜೆಪಿ, ಪ್ರತಿಭಟನಾಕಾರರ ಮೇಲೆ ಜಲ ಫಿರಂಗಿ, ಟಿಯರ್ ಗ್ಯಾಸ್​ ಬಳಕೆ
ಪಶ್ಚಿಮಬಂಗಾಳದಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿಚಾರ್ಜ್​ ಮಾಡಿದ್ದು
  • News18
  • Last Updated: June 12, 2019, 3:15 PM IST
  • Share this:
ಪಶ್ಚಿಮಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಕಾರ್ಯಕರ್ತರ ನಡುವೆ ಹಿಂಸಾಚಾರ ಭುಗಿಲೆದ್ದಿದೆ. ತೃಣಮೂಲ ಕಾಂಗ್ರೆಸ್​ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಲಾಲ್​ ಬಜಾರ್​ ಕಡೆಗೆ ಪ್ರತಿಭಟನಾ ಮೆರವಣಿಗೆ ಸಾಗುತ್ತಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ಜಲ ಫಿರಂಗಿ ಮತ್ತು ಟಿಯಸ್​ ಗ್ಯಾಸ್​ ಪ್ರಯೋಗ ಮಾಡಿದ್ದಾರೆ.

ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ನಡೆಸುತ್ತಿದ್ದ ಪ್ರತಿಭಟನಾ ಮೆರವಣಿಗೆಯನ್ನು ನಿಲ್ಲಿಸುವಂತೆ ಪೊಲೀಸರು ಹಲವು ಬಾರಿ ಮನವಿ ಮಾಡಿದರೂ ಪ್ರತಿಭಟನಾಕಾರರು ಕೇಳಲಿದಿದ್ದಾಗ ಪೊಲೀಸರು ಜಲಫಿರಂಗಿ ಹಾಗೂ ಲಾಠಿಚಾರ್ಜ್​ ಮೂಲಕ ಕಾರ್ಯಕರ್ತರನ್ನು ಚದುರಿಸಿದರು.


 
First published:June 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading