"WHO data ಹಾಗೂ ಕಾಂಗ್ರೆಸ್ 'ಬೇಟಾ' ಎರಡೂ ತಪ್ಪು"! ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕರ ವ್ಯಂಗ್ಯ

"ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತ ದೇಶದ ಪ್ರತಿಷ್ಠೆಗೆ ಜಾಗತಿಕ ಮಟ್ಟದಲ್ಲಿ ಕುಂದು ತರುವ ಯತ್ನ ಮಾಡುತ್ತಿದ್ದಾರೆ. ಹೀಗಾಗಿ ಡಬ್ಲ್ಯೂಎಚ್‌ಒ ಡೇಟಾ ಹಾಗೂ ಕಾಂಗ್ರೆಸ್‌ನ ಬೇಟಾ ಎರಡೂ ಸರಿಯಿಲ್ಲ ಎಂದು ಸಂಬಿತ್ ಪಾತ್ರ ವ್ಯಂಗ್ಯವಾಡಿದ್ದಾರೆ.

ರಾಹುಲ್ ಗಾಂಧಿ-ಸಂಬಿತ್ ಪಾತ್ರಾ

ರಾಹುಲ್ ಗಾಂಧಿ-ಸಂಬಿತ್ ಪಾತ್ರಾ

  • Share this:
ನವದೆಹಲಿ: ಭಾರತದಲ್ಲಿ (India) ಕೋವಿಡ್‌ನಿಂದ (Covid) ಉಂಟಾದ ಸಾವಿನ (Death) ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆ (WHO) ನೀಡಿರುವ ವರದಿ (Report) ಈಗ ತೀವ್ರ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿದೆ. ಭಾರತದಲ್ಲಿ ಕೋವಿಡ್‌ ವೈರಸ್‌ ಸೋಂಕಿನಿಂದ ಗರಿಷ್ಠ ಸಂಖ್ಯೆಯಲ್ಲಿ ಜನರು ಮೃತಪಟ್ಟಿದ್ದಾರೆ ಎಂದು ಡಬ್ಲ್ಯೂಎಚ್‌ಒ ಹೇಳಿದೆ. ಜಾಗತಿಕ ಮಟ್ಟದಲ್ಲಿ ಕೂಡ ದಾಖಲಾದ ಅಧಿಕೃತ ಸಂಖ್ಯೆಗಿಂತಲೂ ಹೆಚ್ಚಿನ ಸಾವು ಭಾರತದಲ್ಲಿ ಸಂಭವಿಸಿದೆ ಎಂದು ಅದು ಹೇಳಿದೆ. ಅದರ ವರದಿ ಪ್ರಕಾರ ಭಾರತದಲ್ಲಿ ಕೋವಿಡ್‌ನಿಂದ ಬರೋಬ್ಬರಿ 47 ಲಕ್ಷ ಜನರು ಮೃತಪಟ್ಟಿದ್ದಾರೆ. ಭಾರತ ಸರ್ಕಾರ (Indian Government) ಅಧಿಕೃತವಾಗಿ ಘೋಷಿಸಿದ್ದಕ್ಕಿಂತಲೂ ಬಹುತೇಕ 10 ಪಟ್ಟು ಹೆಚ್ಚಾಗಿದೆ ಅಂತ ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿರುದ್ಧ ಕಾಂಗ್ರೆಸ್ ನಾಯಕ (Congress Leader) ರಾಹುಲ್ ಗಾಂಧಿ (Rahul Gandhi) ಆರೋಪಿಸಿದ್ದರು. ಇದೀಗ ರಾಹುಲ್‌ ವಿರುದ್ಧ ಬಿಜೆಪಿ (BJP) ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ವರದಿಗೆ ಭಾರತ ಆಕ್ಷೇಪ

ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, ಭಾರತದಲ್ಲಿ ಸಂಭವಿಸಿದ ಕೋವಿಡ್ ಸಾವುಗಳ ಕುರಿತಾದ ಡಬ್ಲ್ಯೂಎಚ್‌ಒ ಅಂಕಿ ಅಂಶ ತಪ್ಪು ಎಂದರು. ಭಾರತದಲ್ಲಿ ಸಂಭವಿಸಿದ ಸಾವಿನ ಲೆಕ್ಕಾಚಾರ ಹಾಕುವಾಗ ವಿಶ್ವ ಆರೋಗ್ಯ ಸಂಸ್ಥೆ ಅನುಸರಿಸಿದ ಮಾನದಂಡವನ್ನು ಪ್ರಶ್ನಿಸಿದ ಸಂಬಿತ್ ಪಾತ್ರ, ಇದರ ವಿರುದ್ಧ ಭಾರತ ಸರ್ಕಾರವು ತನ್ನ ಆಕ್ಷೇಪಣೆಯನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಸಲ್ಲಿಸಿದೆ ಎಂದು ತಿಳಿಸಿದರು.

“ಡಬ್ಲ್ಯೂಎಚ್‌ಒ ಡಾಟಾ, ಕಾಂಗ್ರೆಸ್ ‘ಬೇಟಾ’ ಎರಡೂ ತಪ್ಪು!”

ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಂಬಿತ್ ಪಾತ್ರಾ, ರಾಹುಲ್ ಗಾಂಧಿ ಅವರು ಮಾತ್ರ ಈ ವಿಚಾರದಲ್ಲಿ ವಿನಾಕಾರಣ ರಾಜಕೀಯ ಮಾಡುತ್ತಿದ್ದಾರೆ. 2014ರಿಂದಲೂ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತ ದೇಶದ ಪ್ರತಿಷ್ಠೆಗೆ ಜಾಗತಿಕ ಮಟ್ಟದಲ್ಲಿ ಕುಂದು ತರುವ ಯತ್ನ ಮಾಡುತ್ತಿದ್ದಾರೆ. ಹೀಗಾಗಿ ಡಬ್ಲ್ಯೂಎಚ್‌ಒ ಡೇಟಾ ಹಾಗೂ ಕಾಂಗ್ರೆಸ್‌ನ ಬೇಟಾ ಎರಡೂ ಸರಿಯಿಲ್ಲ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: Omicron: ರಾಜ್ಯಕ್ಕೆ ಕಾಲಿಟ್ಟೇ ಬಿಡ್ತಾ ಕೋವಿಡ್ 4ನೇ ಅಲೆ? ಪತ್ತೆಯಾಯ್ತು ಒಮಿಕ್ರಾನ್ ಹೊಸ ಉಪ ತಳಿ!

ವಿಶ್ವ ಆರೋಗ್ಯ ಸಂಸ್ಥೆ ವರದಿಯಲ್ಲಿ ಏನಿದೆ?

ಭಾರತದಲ್ಲಿ ಕೋವಿಡ್‌ನಿಂದ ಬರೋಬ್ಬರಿ 47 ಲಕ್ಷ ಜನರು ಮೃತಪಟ್ಟಿದ್ದಾರೆ. ಭಾರತ ಸರ್ಕಾರ (Indian Government) ಅಧಿಕೃತವಾಗಿ ಘೋಷಿಸಿದ್ದಕ್ಕಿಂತಲೂ ಬಹುತೇಕ 10 ಪಟ್ಟು ಹೆಚ್ಚಾಗಿದೆ ಅಂತ ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು.

ಕೇಂದ್ರ ಸರ್ಕಾರ ಹೇಳುತ್ತಿರುವುದೇನು?

ಕೊರೊನಾ ಸೋಂಕಿಗೆ ಬಲಿಯಾದವರ ಮಾಹಿತಿ ಬಿಡುಗಡೆ ಮತ್ತು ಸಾವಿನ ಲೆಕ್ಕಾಚಾರಕ್ಕೆ WHO ಅನುಸರಿಸಿದ ಮಾನದಂಡಗಳಿಗೆ ಆಕ್ಷೇಪಿಸಿದ್ದ ಕೇಂದ್ರ ಸರಕಾರ,  ದೇಶದಲ್ಲಿ ಕೊರೊನಾ ಸಾವಿನ ಕುರಿತಾಗಿ ತನ್ನದೇ ಲೆಕ್ಕಾಚಾರವನ್ನು ಬಿಡುಗಡೆ ಮಾಡಿದೆ.

ಅದರಂತೆ 2020 ರಲ್ಲಿ 4.75 ಲಕ್ಷ ಮಂದಿ ಮೃತಪಟ್ಟಿದ್ದು, ಆ ಪೈಕಿ ಕೋವಿಡ್‌-19 ಸೋಂಕಿಗೆ ತುತ್ತಾದವರು 1.42 ಲಕ್ಷ ಮಂದಿ ಎನ್ನಲಾಗಿದೆ. 2020ನೇ ಸಾಲಿನ ಜನನ ಮತ್ತು ಮರಣ ಆಧರಿತ ನಾಗರಿಕ ನೋಂದಣಿ ವ್ಯವಸ್ಥೆ (ಸಿಆರ್‌ಎಸ್‌) ವರದಿ ಬಿಡುಗಡೆಗೊಳಿಸಲಾಗಿದ್ದು, ನೋಂದಾಯಿತ ಸಾವಿನ ಸಂಖ್ಯೆ 2020ಕ್ಕೆ ಕಳೆದ ವರ್ಷಕ್ಕಿಂತ 6.2% ಹೆಚ್ಚಳವಾಗಿದೆ.

ಇದನ್ನೂ ಓದಿ: Covid ಸಾವುಗಳ‌ ಬಗ್ಗೆ ಸುಳ್ಳು ಹೇಳುತ್ತಿರುವ ಮೋದಿ: ರಾಹುಲ್ ಗಾಂಧಿ ಟೀಕೆ

ರಾಹುಲ್ ಗಾಂಧಿ ಆರೋಪ ಏನು?

''ಕೋವಿಡ್‌ ಮೊದಲ ಹಾಗೂ ಎರಡನೇ ಅಲೆಯಲ್ಲಿ ಜನ ಹೇಗೆ ಯಾತನೆ ಅನುಭವಿಸಿದರು ಎಂದು ಎಲ್ಲರಿಗೂ ಗೊತ್ತಿದೆ. ಕೇಂದ್ರ ಸರಕಾರ ಕೊರೊನಾ ಸೋಂಕಿತರ ಸಾವಿನ ವಿಚಾರದಲ್ಲಿ ಸತ್ಯ ಮುಚ್ಚಿಡುತ್ತಿದೆ ಎಂದು ನಾವು ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದೆವು. ಈಗ ಸೋಂಕಿತರ ಸಾವಿನ ಸಂಖ್ಯೆ ಎಷ್ಟು ಎನ್ನುವ ಲೆಕ್ಕ ಸಿಕ್ಕಿದೆ. ಕೇಂದ್ರದ ಸಚಿವರು ಡಬ್ಲ್ಯೂಎಚ್‌ ಮೇಲೆ ಮುಗಿಬೀಳಬಹುದು. ಆದರೆ ವಿಜ್ಞಾನ ಎಂದಿಗೂ ಸುಳ್ಳು ಹೇಳುವುದಿಲ್ಲ. ಮೋದಿ ಮಾತ್ರ ಸತ್ಯ ಬಾಯಿಬಿಡುವುದಿಲ್ಲ,'' ಎಂದು ರಾಹುಲ್‌ ಗಾಂಧಿ ಟಾಂಗ್‌ ಕೊಟ್ಟಿದ್ದರು.
Published by:Annappa Achari
First published: