ಕಾಶ್ಮೀರ ವಿಚಾರದಲ್ಲಿ ವಿವಾದ ಸೃಷ್ಟಿಸಿದ ಕೈ ಪಾಳಯ; ಕಾಂಗ್ರೆಸ್​​ ನಡೆಗೆ ಬಿಜೆಪಿ ಕಿಡಿ

ಇನ್ನು ಕಾಶ್ಮೀರದಲ್ಲಿ ಹೆಚ್ಚಾಗುತ್ತಿರುವ ಹಿಂಸಾಚಾರವನ್ನು ನಾವು ಅಂತ್ಯಗೊಳಿಸಬೇಕಿದೆ ಎಂದು ಲೇಬರ್​​ ಪಕ್ಷದ ನಾಯಕ ಜೆರೆಮಿ ಕಾರ್ಬಿನ್ ಟ್ವೀಟ್​​ ಮೂಲಕ ಸಂದೇಶ ಸಾರಿದ್ದರು.

news18-kannada
Updated:October 10, 2019, 10:26 PM IST
ಕಾಶ್ಮೀರ ವಿಚಾರದಲ್ಲಿ ವಿವಾದ ಸೃಷ್ಟಿಸಿದ ಕೈ ಪಾಳಯ; ಕಾಂಗ್ರೆಸ್​​ ನಡೆಗೆ ಬಿಜೆಪಿ ಕಿಡಿ
ಕಾಂಗ್ರೆಸ್​​ ವಿದೇಶ ನಿಯೋಗ
  • Share this:
ನವದೆಹಲಿ(ಅ.10): ಜಮ್ಮು-ಕಾಶ್ಮೀರ ಭಾರತದ ಆಂತರಿಕ ವಿಚಾರವೆಂದು ಎಷ್ಟೇ ಹೇಳಿದರೂ ಕಾಂಗ್ರೆಸ್​ ಮಾತ್ರ ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಬಿಜೆಪಿ ಗಂಭೀರ ಆರೋಪ ಎಸಗಿದೆ. ಅಲ್ಲದೇ ಕಾಂಗ್ರೆಸ್​​ ಕಾಶ್ಮೀರ ವಿಚಾರವನ್ನು ಅಂತಾರಾಷ್ಟ್ರೀಯ ಸಮಸ್ಯೆಯನ್ನಾಗಿ ಬಿಂಬಿಸಲು ಹೊರಟಿದೆ. ಹಾಗಾಗಿಯೇ ಇಂದು ಕಾಂಗ್ರೆಸ್‌ನ ಇಂಗ್ಲೆಂಡ್ ಪ್ರತಿನಿಧಿಗಳ ನಿಯೋಗವು, ಅಲ್ಲಿನ ಲೇಬರ್ ಪಕ್ಷದ ನಾಯಕ ಜೆರೆಮಿ ಕಾರ್ಬಿನ್​​ರನ್ನು ಭೇಟಿ ಮಾಡಿದೆ ಎಂದು ಟ್ವೀಟ್​​ ಮಾಡಿದೆ.ಇಂದು ಜಮ್ಮು-ಕಾಶ್ಮೀರದ ವಿಚಾರ ಚರ್ಚಿಸಲು ಕಾಂಗ್ರೆಸ್​ ನಿಯೋಗ, ಇಂಗ್ಲೆಂಡ್​​ನ ಲೇಬರ್​​ ಪಕ್ಷದ ನಾಯಕರನ್ನು ಭೇಟಿ ಮಾಡಿತ್ತು. ಕಾಂಗ್ರೆಸ್ ನಾಯಕರ ನಿಯೋಗದ ಭೇಟಿ ಬಳಿಕ ಟ್ವೀಟ್​​ ಮಾಡಿರುವ ಲೇಬರ್​​ ಪಕ್ಷದ ನಾಯಕ ಜೆರೆಮಿ ಕಾರ್ಬಿನ್, ' ಕಾಂಗ್ರೆಸ್​ನ ಯುಕೆ ಪ್ರತಿನಿಧಿಗಳ ಜೊತೆಗಿನ ಸಭೆಯೂ ಫಲಪ್ರದವಾಗಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಾಶ್ಮೀರದಲ್ಲಿ ಮಾನವಹಕ್ಕುಗಳ ಉಲ್ಲಂಘನೆ ಮಾಡಿದ್ದು, ಖಂಡನೀಯ. ನಾವು ಈಗಾಗಲೇ ಕಾಶ್ಮೀರದ ಸ್ಥಿತಿಗತಿಯ ಬಗ್ಗೆ ಚರ್ಚಿಸಿದ್ದೇವೆ. ಈ ಬಗ್ಗೆ ನಾವೊಂದು ನಿಲುವು ತೆಗೆದುಕೊಳ್ಳಲಿದ್ದೇವೆ ಎಂದು ಬರೆದುಕೊಂಡಿದ್ದರು.


ಇನ್ನು ಕಾಶ್ಮೀರದಲ್ಲಿ ಹೆಚ್ಚಾಗುತ್ತಿರುವ ಹಿಂಸಾಚಾರವನ್ನು ನಾವು ಅಂತ್ಯಗೊಳಿಸಬೇಕಿದೆ' ಎಂದು ಲೇಬರ್​​ ಪಕ್ಷದ ನಾಯಕ ಜೆರೆಮಿ ಕಾರ್ಬಿನ್ ಟ್ವೀಟ್​​ ಮೂಲಕ ಸಂದೇಶ ಸಾರಿದ್ದರು.

ಕಾಶ್ಮೀರದ ವಿಚಾರದಲ್ಲಿ ಕಾಂಗ್ರೆಸ್​​ನ ವಿವಾದಾತ್ಮಕ ನಡೆಯನ್ನು ಖಂಡಿಸಿದ ಬಿಜೆಪಿ, ಭಾರತದ ಜನ ಮುಂದೆ ನಿಮಗೆ ತಕ್ಕ ಉತ್ತರ ನೀಡಲಿದ್ದಾರೆ. ಭಾರತದ ಕುರಿತು ವಿದೇಶಗಳ ನಾಯಕರಿಗೆ ಕಾಂಗ್ರೆಸ್ ಏನು ಹೇಳುತ್ತಿದೆ ಎಂಬುದನ್ನು ತಿಳಿಸಬೇಕೆಂದು ಆಗ್ರಹಿಸಿತ್ತು.

ಈ ಬೆನ್ನಲ್ಲೇ ಬಿಜೆಪಿ ಆರೋಪಕ್ಕೆ ಸ್ಪಷ್ಟೀಕರಣ ನೀಡಿದ ಕಾಂಗ್ರೆಸ್‌ನ ವಿದೇಶಿ ಘಟಕ, ಲೇಬರ್ ಪಕ್ಷ ಕಾಶ್ಮೀರ ವಿಚಾರದಲ್ಲಿ ಒಂದು ನಿಲುವು ತೆಗೆದುಕೊಂಡಿದೆ. ಜಮ್ಮು-ಕಾಶ್ಮೀರ ವಿಚಾರದಲ್ಲಿ ಪ್ರಧಾನಿ ಮೋದಿ ಸರ್ಕಾರ ತೆಗೆದುಕೊಂಡ ತೀರ್ಮಾನವನ್ನು ಖಂಡಿಸಿದೆ. ಆದರೆ, ಜಮ್ಮು-ಕಾಶ್ಮೀರ ಭಾರತದ ಆಂತರಿಕ ವಿಚಾರ ಮತ್ತು ಹೊರಗಿನವರ ಹಸ್ತಕ್ಷೇಪ ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಉತ್ತರಿಸಿದೆ.


----------
First published:October 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading