2019ರ ಲೋಕಸಭೆ ಚುನಾವಣೆಗಾಗಿ ಬಿಜೆಪಿ ವಾಜಪೇಯಿ ಹೆಸರನ್ನು ದುರುಪಯೋಗ ಮಾಡುತ್ತಿದೆ; ವಾಜಪೇಯಿ ಸೋದರ ಸೊಸೆ


Updated:August 23, 2018, 7:07 PM IST
2019ರ ಲೋಕಸಭೆ ಚುನಾವಣೆಗಾಗಿ ಬಿಜೆಪಿ ವಾಜಪೇಯಿ ಹೆಸರನ್ನು ದುರುಪಯೋಗ ಮಾಡುತ್ತಿದೆ; ವಾಜಪೇಯಿ ಸೋದರ ಸೊಸೆ
ಕರುಣಾ ಶುಕ್ಲಾ
  • Share this:
ನವದೆಹಲಿ(ಆ. 23): ಅಟಲ್ ಬಿಹಾರಿ ವಾಜಪೇಯಿ ಮರಣದ ನಂತರ ಅವರ ಅಸ್ಥಿ ಕಲಶ ವಿಚಾರ ಈಗ ರಾಜಕೀಯ ಯುದ್ಧವಾಗಿ ಮಾರ್ಪಟ್ಟಿದೆ. ದೇಶದೆಲ್ಲೆಡೆ 16 ಪ್ರಮುಖ ನದಿಗಳಲ್ಲಿ ವಾಜಪೇಯಿ ಅವರ ಚಿತಾಭಸ್ಮ ವಿಸರ್ಜನೆ ಮಾಡಲು ಯೋಜನೆ ಹಾಕಲಾಗಿದೆ. ಪ್ರತಿಯೊಂದು ರಾಜ್ಯದಲ್ಲೂ ಚಿತಾಭಸ್ಮವನ್ನಿಟ್ಟುಕೊಂಡು ವಿವಿಧೆಡೆ ಮೆರವಣಿಗೆ ಆಯೋಜಿಸಲಾಗಿದೆ. 2019ರ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿಯು ಸಾವಿನ ಮನೆಯಲ್ಲಿ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಟೀಕೆ ಮಾಡುತ್ತಿವೆ. ವಿಪಕ್ಷಗಳ ಟೀಕೆಗೆ ಈಗ ವಾಜಪೇಯಿ ಅವರ ನಿಕಟ ಬಂಧು ಕರುಣಾ ಶುಕ್ಲ ಕೂಡ ಧ್ವನಿಗೂಡಿಸಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ಬದುಕಿದ್ದಾಗ ಲಾಭ ಗಳಿಸಿದ್ದ ಬಿಜೆಪಿ ಈಗ ಅವರ ಸಾವಿನ ನಂತರವೂ ಅವರಿಂದ ಲಾಭ ಮಾಡಿಕೊಳ್ಳಲು ಹೊರಟಿದೆ. ಬಿಜೆಪಿ ನಿರ್ಲಜ್ಜೆಯಿಂದ ವಾಜಪೇಯಿ ಸಾವನ್ನು ರಾಜಕೀಯಗೊಳಿಸುತ್ತಿದೆ. ದೇಶದ ಪ್ರಜೆಗಳು ಬಿಜೆಪಿಯ ಈ ಚಿತಾವಣೆ ಅರ್ಥ ಮಾಡಿಕೊಳ್ಳಬೇಕು ಎಂದು ಕರುಣಾ ಶುಕ್ಲಾ ಮನವಿ ಮಾಡಿದ್ದಾರೆ.

ಆದರೆ, ಭಾರತೀಯ ಜನತಾ ಪಕ್ಷವು ವಿಪಕ್ಷಗಳ ವಾದವನ್ನು ಅಲ್ಲಗಳೆದಿದೆ. ಸಾವಿನ ಮನೆಯಲ್ಲಿ ವಿಪಕ್ಷಗಳಿಂದಲೇ ರಾಜಕಾರಣ ನಡೆಯುತ್ತಿದೆ ಎಂದು ಬಿಜೆಪಿ ಪ್ರತ್ಯಾರೋಪ ಮಾಡಿದೆ. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ನಿಧನದ ನಂತರ ಅವರ ಅಸ್ಥಿ ಭಸ್ಮ ವಿಸರ್ಜನೆಗೆ ಮೆರವಣಿಗೆ ನಡೆಸಿದ್ದನ್ನ ಸ್ಮರಿಸಿ ಬಿಜೆಪಿಯು ಕಾಂಗ್ರೆಸ್​ಗೆ ತಿರುಗೇಟು ನೀಡಿದೆ. ದೇಶದ ಒಬ್ಬ ಧೀಮಂತ ನಾಯಕನಿಗೆ ಗೌರವ ನೀಡುವ ಇಂಥ ಸಂದರ್ಭದಲ್ಲಿ ವಿಪಕ್ಷಗಳು ಕ್ಷುಲ್ಲಕ ರಾಜಕಾರಣ ಮಾಡುತ್ತಿವೆ ಎಂದು ಬಿಜೆಪಿ ಹೇಳುತ್ತಿದೆ.

ದೆಹಲಿಯಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ನೇತೃತ್ವದಲ್ಲಿ ವಾಜಪೇಯಿ ಅಂತ್ಯಕ್ರಿಯೆ ನಂತರ ಅವರ ಅಸ್ಥಿಯನ್ನು ವಿಭಜಿಸಿ ವಿವಿಧ ಕೆಂಪು ಬಟ್ಟೆಯಲ್ಲಿ ಚಿತಾಭಸ್ಮ ಹಾಕಿ ವಿವಿಧ ಮುಖಂಡರಿಗೆ ನೀಡಲಾಗಿದೆ. ಕರ್ನಾಟಕದಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ವಾಜಪೇಯಿ ಅವರ ಅಸ್ಥಿಯನ್ನಿಟ್ಟುಕೊಂಡು ಬೆಂಗಳೂರಿನಲ್ಲಿ ವಿವಿಧೆಡೆ ಮೆರವಣಿಗೆ ಮಂಡ್ಯದ ಶ್ರೀರಂಗಪಟ್ಟಣದಲ್ಲಿರುವ ಪಶ್ಚಿಮ ವಾಹಿನಿಯಲ್ಲಿ ಇಂದು ವಿಸರ್ಜನೆ ಮಾಡಿ ಕಾವೇರಿ ನದಿಗೆ ಅರ್ಪಿಸಲಾಯಿತು. ಅದೇ ರೀತಿ ಪ್ರತಿಯೊಂದು ರಾಜ್ಯದಲ್ಲೂ ಅಟಲ್ ಕಲಶದ ಮೆರವಣಿಗೆ ನಡೆಯುವ ಯೋಜನೆ ಇದೆ. ಅಟಲ್ ಕಳಶ್ ಯೋಜನೆಯಲ್ಲಿ ಅವರ ದತ್ತು ಕುಟುಂಬದವರು ಸಕ್ರಿಯವಾಗಿ ಪಾಲ್ಗೊಂಡಿರುವುದು ವಿಶೇಷ.
First published:August 23, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading