ಕೋಲ್ಕತ್ತಾ (ಡಿ.7): ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವಿನ ಘರ್ಷಣೆಯಾಗಿದ್ದು, ಈ ವೇಳೆ ಓರ್ವ ಕಾರ್ಯಕರ್ತ ಸಾವನ್ನಪ್ಪಿದ್ದಾನೆ. ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ಜಲ ಫಿರಂಗಿ ಮತ್ತು ಅಶ್ರುವಾಯು ಬಳಸಿ ಚದುರಿಸಲು ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಥಳಿಸಿದ ಪರಿಣಾ ಉಲೆನ್ ರಾಯ್ ಎಂಬ ಬಿಜೆಪಿ ಕಾರ್ಯಕರ್ತ ಸಾವನ್ನಪ್ಪಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಆದರೆ, ಪೊಲೀಸರು ಆತನ ಮೇಲೆ ನಾವು ಪ್ರಹಾರ ನಡೆಸಿಲ್ಲ ಎಂದು ತಿಳಿಸಿದೆ. ಅಧಿಕೃತ ಸಾವಿನ ಮರಣೋತ್ತರ ವರದಿಗಾಗಿ ಕಾಯುತ್ತಿರುವುದಾಗಿ ತಿಳಿಸಿದೆ. ಈ ಮಧ್ಯೆ ಈ ಘಟನೆ ಕುರಿತು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ, ಇದೊಂದು ಕೊಲೆ ಎಂದು ಗಂಭೀರ ಆರೋಪ ಹೊರೆಸಿದ್ದಾರೆ.
ಟಿಎಂಸಿ ಅನೀತಿಯನ್ನು ಪ್ರತಿಭಟಸಿ ಇಂದು ಬಿಜೆಪಿ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಉತ್ತರ ಬಂಗಾಳದ ಸಿಲಿಗುರಿಯ ಉತ್ತರ ಕನ್ಯಾ ಮೆರವಣಿಗೆ ತಡೆಯಲು ಪೊಲೀಸರು ಬ್ಯಾರಿಕೇಡ್ ಅನ್ನು ಮುರಿದು ಒಳ ನುಗ್ಗುವ ಪ್ರಯತ್ನ ನಡೆಸಿದರು.
ನ್ಯಾಷನಲ್ ಹೈ ವೆ-31ರ ಮೊದಲ ಎರಡು ಬ್ಯಾರಿಕೇಡ್ ಮುರಿದು ಮುನ್ನುಗಲು ಕಾರ್ಯಕರ್ತರು ಮುಂದಾದರು.
I am informed by our local karyakartas that Sri Ulen Roy, a senior BJP karyakarta, has succumbed to splinter injuries caused by the country bombs that Mamata’s police threw.
This is murder. Nothing less.
We are very angry. We will never forgive you Mamata Di.
Om Shanti! pic.twitter.com/7xgZcKus4n
— Tejasvi Surya (@Tejasvi_Surya) December 7, 2020
ಈ ಮೆರವಣಿಗೆಯಲ್ಲಿ ಉತ್ತರ ಬಂಗಾಳದ ಬಿಜೆಪಿ 7 ಸದಸ್ಯರು ಮತ್ತು ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಮತ್ತು ರಾಜ್ಯ ಉಸ್ತುವಾರಿಗಳಾ ಕೈಲಾಶ್ ವಿಜಯ ವರ್ಗಿಯಾ ಮತ್ತು ಅರವಿಂದ್ ಮೆನನ್ ಭಾಗಿಯಾಗಿದ್ದರು. ಈ ವೇಳೆ ಘರ್ಷಣೆ ಹೆಚ್ಚಾದ ಹಿನ್ನಲೆ ವಿಜಯ ವರ್ಗಿಯಾ ಹಾಗೂ ತೇಜಸ್ವಿ ಸೂರ್ಯ ಅವರನ್ನು ವೈಯಕ್ತಿಕ ಭದ್ರತಾ ಸಿಬ್ಬಂದಿಗಳು ತಮ್ಮ ವಾಹದಲ್ಲಿ ಕರೆದೊಯ್ಯುವಂತಹ ಸ್ಥಿತಿ ನಿರ್ಮಾಣವಾಯಿತು ಎಂದು ಬಿಜೆಪಿ ತಿಳಿಸಿದೆ. ಈ ಘಟನೆ ಕುರಿತು ರಾಜ್ಯಪಾಲ ಜಗದೀಪ್ ಧಂಕರ್ ಅವರಿಗೂ ಮಾಹಿತಿ ನೀಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ