ಕಾಶ್ಮೀರದ ಕುಲಗಾಮ್​ನಲ್ಲಿ ಉಗ್ರರ ಗುಂಡಿನ ದಾಳಿಗೆ ಬಿಜೆಪಿ ಮುಖಂಡ ಸಾಜದ್ ಬಲಿ

ಗುರುವಾರ ಬೆಳಗ್ಗೆ ಬಿಜೆಪಿ ಮುಖಂಡ ಹಾಗೂ ಗ್ರಾಮ ಮುಖ್ಯಸ್ಥ ಸಾಜದ್ ಮನೆಯ ಬಳಿ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನ ಅನಂತನಾಗ್ ಜಿಲ್ಲೆಯ ಆಸ್ಪತ್ರೆಯೊಂದಕ್ಕೆ ಸಾಗಿಸುವಷ್ಟರಲ್ಲಿ ಸಾವನ್ನಪ್ಪಿದ್ದಾರೆ.

news18
Updated:August 6, 2020, 12:05 PM IST
ಕಾಶ್ಮೀರದ ಕುಲಗಾಮ್​ನಲ್ಲಿ ಉಗ್ರರ ಗುಂಡಿನ ದಾಳಿಗೆ ಬಿಜೆಪಿ ಮುಖಂಡ ಸಾಜದ್ ಬಲಿ
ಕಾಶ್ಮೀರದಲ್ಲಿ ಭದ್ರತಾ ಸಿಬ್ಬಂದಿ
  • News18
  • Last Updated: August 6, 2020, 12:05 PM IST
  • Share this:
ಶ್ರೀನಗರ(ಆ. 06): ಜಮ್ಮು-ಕಾಶ್ಮೀರದ ಕುಲಗಾಮ್ ಜಿಲ್ಲೆಯಲ್ಲಿ ಬಿಜೆಪಿ ನಾಯಕರೊಬ್ಬರನ್ನು ಉಗ್ರರು ಗುಂಡಿಟ್ಟು ಕೊಂದಿದ್ದಾರೆ. ಸಾಜದ್ ಅಹ್ಮದ್ ಖಂಡೇ ಅವರು ಉಗ್ರರಿಗೆ ಬಲಿಯಾದ ಬಿಜೆಪಿ ನಾಯಕ. ಜಿಲ್ಲೆಯ ಖಾಜಿಗುಂದ್ ಗ್ರಾಮದ ಸರ್ಪಂಚ್ ಆಗಿದ್ದ ಸಾಜದ್ ಅವರು ಕುಲಗಾಮ್ ಜಿಲ್ಲೆಯ ಬಿಜೆಪಿ ಉಪಾಧ್ಯಕ್ಷರಾಗಿದ್ದರು. ಗುರುವಾರ ಬೆಳಗ್ಗೆ ಸಾಜದ್ ಮನೆಯ ಬಳಿ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನ ಅನಂತನಾಗ್ ಜಿಲ್ಲೆಯ ಆಸ್ಪತ್ರೆಯೊಂದಕ್ಕೆ ಸಾಗಿಸುವಷ್ಟರಲ್ಲಿ ಸಾವನ್ನಪ್ಪಿದ್ದಾರೆ.

ಕುಲಗಾಂ ಜಿಲ್ಲೆಯಲ್ಲಿ ಎರಡು ದಿನಗಳ ಅಂತರದಲ್ಲಿ ಬಿಜೆಪಿ ನಾಯಕರ ಮೇಲೆ ನಡೆದ ಎರಡನೇ ದಾಳಿ ಇದಾಗಿದೆ. ಮೊನ್ನೆಯಷ್ಟೇ (ಆ. 4ರಂದು) ಕುಲಗಾಮ್ ಜಿಲ್ಲೆಯ ಮತ್ತೊಬ್ಬ ಬಿಜೆಪಿ ಸರ್ಪಂಚ್ ಆಗಿದ್ದ ಅರಿಫ್ ಅಹ್ಮದ್ ಅವರ ಮೇಲೆ ಉಗ್ರರು ಗುಂಡಿನ ದಾಳಿ ಎಸಗಿದ್ದರು. ಅದೃಷ್ಟಕ್ಕೆ ಅರಿಫ್ ಅವರು ಸಾವಿನಿಂದ ಪಾರಾದರೂ ಗಂಭೀರವಾಗಿ ಗಾಯಗೊಂಡಿದ್ದರು.

ಕಳೆದ ತಿಂಗಳು ಬಂಡೀಪೋರ್ ಜಿಲ್ಲೆ ಬಿಜೆಪಿ ಅಧ್ಯಕ್ಷರಾಗಿದ್ದ ಶೇಖ್ ವಾಸೀಮ್ ಬಾರಿ ಹಾಗೂ ಅವರ ಕುಟುಂಬದ ಇತರ ಇಬ್ಬರು ವ್ಯಕ್ತಿಗಳನ್ನು ಉಗ್ರರು ಬಲಿತೆಗೆದುಕೊಂಡಿದ್ದರು. ರೆಸಿಸ್ಟೆನ್ಸ್ ಫ್ರಂಟ್ ಎಂಬ ಹೊಸ ಉಗ್ರ ಸಂಘಟನೆಯೊಂದು ಈ ದಾಳಿಯ ಹೊಣೆ ಹೊತ್ತಿತ್ತು. ಜೈಷ್, ಲಷ್ಕರ್ ಮತ್ತು ಹಿಜ್ಬುಲ್ ಮುಜಾಹಿದೀನ್ ಸಂಘಟನೆಗಳ ಏಕೀಕೃತ ಸಂಘಟನೆಯಾಗಿ ರೆಸಿಸ್ಟೆನ್ಸ್ ಫ್ರಂಟ್ ಅನ್ನ ರಚಿಸಲಾಗಿದೆ ಎಂಬುದು ಪೊಲೀಸರ ಶಂಕೆ.

ಇದನ್ನೂ ಓದಿ: Hiroshima Day - ಹಿರೋಶಿಮಾ ಅಣು ಬಾಂಬ್ ದಾಳಿಗೆ 75 ವರ್ಷ; ಅಂದು ಆಗಿದ್ದೇನು? ಅದರ ಭೀಕರತೆ ಹೇಗಿತ್ತು?

ಅದಕ್ಕೂ ಒಂದು ತಿಂಗಳ ಹಿಂದೆ ಕಾಂಗ್ರೆಸ್ ನಾಯಕ ಹಾಗೂ ಸರ್ಪಂಚ್ ಆಗಿದ್ದ ಅಜಯ್ ಭಾರ್ತಿ ಅವರನ್ನು ಉಗ್ರರು ಬಲಿತೆಗೆದುಕೊಂಡಿದ್ದನ್ನ ಇಲ್ಲಿ ಉಲ್ಲೇಖಿಸಬಹುದು.

ಜಮ್ಮು-ಕಾಶ್ಮೀರದ ನಿರ್ಗಮಿತ ಲೆ| ಗವರ್ನರ್ ಗಿರೀಶ್ ಚಂದ್ರ ಮುರ್ಮು ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಉಗ್ರರ ಹತಾಶೆಯ ಕೃತ್ಯ ಇದು ಎಂದಿದ್ದಾರೆ.

“ಇತ್ತೀಚೆಗೆ ಬಹಳಷ್ಟು ಉಗ್ರರನ್ನು ಸಂಹರಿಸಲಾಗಿದೆ. ಇದರಿಂದ ಹತಾಶೆಗೊಂಡು ಸುಲಭ ಗುರಿಗಳ ಮೇಲೆ ದಾಳಿ ಮಾಡಲಾಗುತ್ತಿದೆ. ಅಗತ್ಯ ಇರುವ ಕಡೆ ಭದ್ರತೆ ಒದಗಿಸುತ್ತಿದ್ದೇವೆ. ಅಪಾಯವನ್ನು ಅಂದಾಜು ಮಾಡುವುದು ನಿರಂತರ ಪ್ರಕ್ರಿಯೆಯಾಗಿದೆ” ಎಂದು ಮುರ್ಮು ಹೇಳಿದ್ಧಾರೆ. ಮುರ್ಮು ಅವರು ನೂತನ ಸಿಎಜಿಯಾಗಿ ನೇಮಕವಾಗುತ್ತಿದ್ದು, ಜಮ್ಮು-ಕಾಶ್ಮೀರದ ಉಪರಾಜ್ಯಪಾಲರಾಗಿ ಅವರ ಸ್ಥಾನವನ್ನು ಮನೋಜ್ ಸಿನ್ಹ ತುಂಬಲಿದ್ದಾರೆ.
Published by: Vijayasarthy SN
First published: August 6, 2020, 11:39 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading