ಭೋಪಾಲ್; ಭಾರತೀಯ ಸಂಸ್ಕೃತಿ ರಕ್ಷಕರು ಎಂದು ಗುರುತಿಸಿಕೊಳ್ಳುವ ಆರ್‌ಎಸ್‌ಎಸ್ ಮುಖಂಡನೊಬ್ಬ ಅಪ್ರಾಪ್ರ ವಯಸ್ಸಿನ ತನ್ನ ಸ್ವಂತ ಮಗಳ ಮೇಲೆಯೇ ನಿರಂತರವಾಗಿ ಅತ್ಯಾಚಾರ ಎಸಗುವ ಮೂಲಕ ತಂದೆ-ಮಗಳ ಸಂಬಂಧಕ್ಕೆ ಮಸಿ ಬಳಿದಿರುವುದು ಅಮಾನವೀಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಈ ಅಸಹ್ಯದ ಕೃತ್ಯವನ್ನು ಕಾಂಗ್ರೆಸ್ ಖಂಡಿಸಿದೆ. ಮಧ್ಯಪ್ರದೇಶದ ಪೊವಾಯ್ ಪೊಲೀಸ್ ಠಾಣಾ ವ್ಯಾಪ್ತಿಯ ಮುದ್ವಾರಿ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಆರೋಪಿಯನ್ನು ಬಿಜೆಪಿ, ಆರ್‌ಎಸ್‌ಎಸ್ ಮುಖಂಡ ಸತೀಶ್ ಮಿಶ್ರಾ ಎಂದು ಗುರುತಿಸಲಾಗಿದೆ. ಘಟನೆ ಬಗ್ಗೆ ಮಗಳು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಆರೋಪಿ ಕೀಚಕ ತಂದೆಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
बीजेपी-आरएसएस का घिनौना चेहरा,
–बीजेपी नेता ने अपनी ही बेटी से दुष्कर्म किया;
प्रदेश के पन्ना में आरएसएस और बीजेपी का घिनौना रूप सामने आया है। आरएसएस कार्यकर्ता और बीजेपी नेता सतीश मिश्रा ने अपनी ही बेटी का दुष्कर्म किया।
शिवराज जी,
ये तो राक्षस से भी ज़्यादा हो गया। pic.twitter.com/FkN3tG5U0H
— MP Congress (@INCMP) June 25, 2021
ತಂದೆಯೇ ತನ್ನನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದನ್ನು ಪ್ರತಿಭಟಿಸಿದ 17 ವರ್ಷದ ಅಪ್ರಾಪ್ತ ಬಾಲಕಿ, ಕಷ್ಟಪಟ್ಟು ಪೊಲೀಸ್ ಠಾಣೆ ತಲುಪಿ ಅಲ್ಲಿ ತನ್ನ ತಂದೆಯ ದುಷ್ಕೃತ್ಯಗಳನ್ನು ವಿವರಿಸಿದ್ದಾಳೆ ಎಂದು ಹೇಳಲಾಗುತ್ತಿದೆ. ಬಾಲಕಿಯ ದೂರಿನ ಮೇರೆಗೆ ಪೊಲೀಸರು ಸಂಬಂಧಪಟ್ಟ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಎಫ್‌ಐಆರ್ ದಾಖಲಾದ ಬಳಿಕ, ಆರೋಪಿಯ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿವೆ. ಬಿಜೆಪಿ ರಾಜ್ಯ ಅಧ್ಯಕ್ಷ ವಿ.ಡಿ.ಶರ್ಮಾ ಸೇರಿದಂತೆ ಇತರ ಹಿರಿಯ ಬಿಜೆಪಿ ನಾಯಕರೊಂದಿಗಿನ ಆರೋಪಿಯ ಚಿತ್ರಗಳು ವೈರಲ್ ಆಗುತ್ತಿವೆ.
"ಮುದ್ವಾಯಿ ಗ್ರಾಮದ 17 ವರ್ಷದ ಬಾಲಕಿಯೊಬ್ಬಳು ತನ್ನ ತಂದೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊವಾಯ್ ಠಾಣೆಗೆ ದೂರು ನೀಡಿದ್ದಾರೆ. ಪೊವಾಯ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡು, ಅಪ್ರಾಪ್ತ ಬಾಲಕಿಗೆ ಭದ್ರತೆ ಒದಗಿಸಿದ್ದಾರೆ. ಜೊತೆಗೆ, ಶೀಘ್ರವೇ ಕ್ರಮ ಕೈಗೊಂಡು, ಪನ್ನಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮರಾಜ್ ಮೀನಾ ಅವರ ನೇತೃತ್ವದಲ್ಲಿ ತಂಡವನ್ನು ರಚಿಸುವ ಮೂಲಕ, ಅಮಾನವೀಯ ಕೃತ್ಯ ಎಸಗಿ ಪರಾರಿಯಾಗಿದ್ದ ಆರೋಪಿ ಸತೀಶ್ ಮಿಶ್ರಾ ಅವರನ್ನು ಮುದ್ವಾರಿ ಬಳಿ ಬಂಧಿಸಲಾಗಿದೆ" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ