‘ಬಿಜೆಪಿ, ಆರ್​ಎಸ್​ಎಸ್​ ನನ್ನ ಕೊಲೆಗೆ ಸಂಚು ರೂಪಿಸಿದೆ’: ತೇಜು ಪ್ರಸಾದ್​ ಯಾದವ್​


Updated:August 23, 2018, 9:49 AM IST
‘ಬಿಜೆಪಿ, ಆರ್​ಎಸ್​ಎಸ್​ ನನ್ನ ಕೊಲೆಗೆ ಸಂಚು ರೂಪಿಸಿದೆ’: ತೇಜು ಪ್ರಸಾದ್​ ಯಾದವ್​

Updated: August 23, 2018, 9:49 AM IST
ನ್ಯೂಸ್​-18 ಕನ್ನಡ

ನವದೆಹಲಿ(ಆಗಸ್ಟ್​.23): ಬಿಜೆಪಿ ಮತ್ತು ಆರ್​ಎಸ್​ಎಸ್​ ಸಂಘಪರಿವಾರ ನನ್ನ ಹತ್ಯೆಗೆ ಸಂಚು ರೂಪಿಸಿದೆ ಎಂದು ಆರ್​ಜೆಡಿ ಪಕ್ಷದ ನಾಯಕ, ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್​ ಯಾದವ್​ ಮಗ ತೇಜ್​ ಪ್ರತಾಪ್​ ಯಾದವ್​ ಗಂಭೀರ ಆರೋಪ ಎಸಗಿದ್ಧಾರೆ.

ಬಕ್ರೀದ್​ ನಿಮಿತ್ತ ತೇಜ್​ ಪ್ರತಾಪ್​ ಯಾದವ್​ ಕಾರ್ಯಕ್ರಮವೊಂದಕ್ಕೆ ತೆರಳಿದ್ಧಾರೆ. ಈ ಸಂದರ್ಭದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಯೋರ್ವ ಆರ್ ಜೆಡಿ ನಾಯಕ ತೇಜ್ ಪ್ರತಾಪ್ ಯಾದವ್ ಕೈ ಹಿಡಿದು, ದಾಳಿಗೆ ಯತ್ನಿಸಿದ ಘಟನೆ ಬುಧವಾರ ಬಿಹಾರದ ಮಹುನಾದಲ್ಲಿ ನಡೆದಿದೆ ಎನ್ನಲಾಗಿದೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ತೇಜ್ ಪ್ರತಾಪ್, ನನ್ನ ಕೊಲ್ಲಲು ಯತ್ನಿಸಿದ ಘಟನೆ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಬಿಜೆಪಿಯ ಕೈವಾಡವಿದೆ. ಅವರು ನನ್ನನ್ನು ಕೊಲ್ಲು ಸಂಚು ರೂಪಿಸುತ್ತಿದ್ದಾರೆ' ಎಂದು ಗಂಭೀರವಾಗಿ ದೂರಿದ್ದಾರೆ.

ಬಿಜೆಪಿ ಗೂಂಡಾಗಳ ಪಕ್ಷ: 'ಬಕ್ರೀದ್ ಹಬ್ಬದ ಪ್ರಯುಕ್ತ ನಾನು ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಲು ಮಹುನಾಕ್ಕೆ ತೆರಳಿದ್ದೆ. ಈ ವೇಳೆ ಅಪರಿಚಿತ ವ್ಯಕ್ತಿಯೋರ್ವ ನನ್ನ ಕೈಹಿಡಿದು ಎಳೆದಾಡಿದ. ಆತನ ಬಳಿ ಶಸ್ತ್ರಾಸ್ತ್ರಗಳಿದ್ದವು. ಇದರ ಬಿಜೆಪಿ ಮತ್ತು ಆರೆಸ್ಸೆಸ್ ಕೈವಾಡವಿದೆ ಎಂದು ತೇಜ್ ಪ್ರತಾಪ್ ಆರೋಪಿಸಿದ್ಧಾರೆ.

ದೇಶದಲ್ಲಿ ನಮ್ಮಂತ ಶಾಸಕರು, ಸಚಿವರಿಗೇ ಭದ್ರತೆಯಿಲ್ಲ. ಇನ್ನು ಬಿಜೆಪಿ ಗೂಂಡಾಗಳಿಂದ ಜನಸಾಮಾನ್ಯರು ಹೇಗೆ ಸುರಕ್ಷಿತರಾಗಿರಲು ಸಾಧ್ಯ?" ಎಂದು ಪ್ರಶ್ನಿಸಿದ್ಧಾರೆ. ಅಲ್ಲದೇ ಬಿಜೆಪಿ ಗೂಂಡಾಗಳನ್ನು ಪೋಷಿಸುತ್ತಿದೆ. ಇದು ಗೂಂಡಾಗಳ ಪಕ್ಷ ಎಂದು ಆರ್​ಜೆಡಿ ನಾಯ ತೇಜು ಪ್ರತಾಪ್​ ಯಾದವ್​ ಕಿಡಿಕಾರಿದ್ಧಾರೆ.

ಈ ಹಿಂದೆಯೂ ಬಿಜೆಪಿ ವಿರುದ್ಧ ಹಲವು ಭಾರೀ ತೇಜು ಪ್ರತಾಪ್​ ಯಾದವ್​ ವಾಗ್ದಾಳಿ ನಡೆಸಿದ್ಧಾರೆ. ಅಲ್ಲದೇ ಸದಾ ಬಿಜೆಪಿ ವಿರುದ್ಧವೇ ಕಿಡಿಕಾರುವ ಆರ್​ಜೆಡಿ ನಾಯಕನ ಮೇಲೆ ಹತ್ಯೆ ನಡೆಸುವ ಯತ್ನ ನಡೆದಿದೆ ಎನ್ನಲಾಗಿದೆ. ತೇಜು ಪ್ರಸಾದ್​ ಎಸಗಿರುವ ಗಂಭೀರ ಆರೋಪಕ್ಕೆ ಬಿಜೆಪಿ ನಾಯಕರ ಹೇಗೆ ಪ್ರತಿಕ್ರಿಯಿಸಲಿದ್ಧಾರೆ ಎಂದು ನೋಡಬೇಕಿದೆ.
First published:August 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ