ಕಾಶ್ಮೀರಿ ಪಂಡಿತರ ಕುರಿತು Kejriwal​​​ ಹೇಳಿಕೆ; ತೇಜಸ್ವಿ ಸೂರ್ಯ ನೇತೃತ್ವದಲ್ಲಿ Delhi CM ಮನೆ ಮುಂದೆ BJP ಪ್ರತಿಭಟನೆ

ದೆಹಲಿ ಸಿಎಂ ಈ ಹೇಳಿಕೆ ಖಂಡಿಸಿ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.

ಸಿಎಂ ಅರವಿಂದ್​ ಕೇಜ್ರಿವಾಲ್​

ಸಿಎಂ ಅರವಿಂದ್​ ಕೇಜ್ರಿವಾಲ್​

 • Share this:
  ಕಾಶ್ಮೀರಿ ಪಂಡಿತರ (Kashmiri Pandit) ಹತ್ಯಾಕಾಂಡ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Delhi Chief Minister Arvind Kejriwal )ಹೇಳಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು (BJP Activist) ಇಂದು ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ದೆಹಲಿ ಮುಖ್ಯಮಂತ್ರಿಗಳ ಮನೆಗೆ ನುಗ್ಗಿದ ಕಾರ್ಯಕರ್ತರು ಅವರ ಮನೆ ಬ್ಯಾರಿ ಕೇಡ್​ಗಳನ್ನು ದಾಟಿ ಅವರ ಮನೆಯ ಪ್ರವೇಶಕ್ಕೆ ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಅವರನ್ನು ತಡೆದಿದ್ದಾರೆ. ಈ ನಡುವೆಯೂ ಗೇಟ್​​, ಸಿಸಿಟಿವಿ ಸೇರಿದಂತೆ ಅನೇಕ ವಸ್ತುಗಳನ್ನು ಧ್ವಂಸ ಗೊಳಿಸಿದ್ದಾರೆ

  ದೆಹಲಿ ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಅರವಿಂದ್​ ಕೇಜ್ರಿವಾಲ್​. ಕಾಶ್ಮೀರ ಫೈಲ್ಸ್​ ಚಿತ್ರವನ್ನು ಬಿಜೆಪಿ ಪ್ರಚಾರ ನಡೆಸಿದೆ ಎಂದು ವಾಗ್ದಾಳಿ ನಡೆಸಿದ್ದರು.

  ತೇಜಸ್ವಿ ನೇತೃತ್ವದಲ್ಲಿ ಪ್ರತಿಭಟನೆ

  ದೆಹಲಿ ಸಿಎಂ ಈ ಹೇಳಿಕೆ ಹಿನ್ನಲೆ ಇಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಐಪಿ ಕಾಲೇಜಿನಿಂದ ಸಿಎಂ ನಿವಾಸದವರೆಗೂ ಪ್ರತಿಭಟನೆ ನಡೆಸಿದ ಅವರು, ಸಿಎಂ ನಿವಾಸದ ಗೇಟ್ ಸೇರಿದಂತೆ ಅನೇಕ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ.

  ಬಿಜೆಪಿ ಪ್ರತಿಭಟನೆಗೆ ಎಎಪಿ ನಾಯಕರ ಖಂಡನೆ

  ಸಿಎಂ ನಿವಾಸದ ಮೇಲಿನ ಈ ದಾಳಿ ಕುರಿತು ಟ್ವೀಟರ್​ನಲ್ಲಿ ಹರಿಹಾಯ್ದಿರುವ ಆಮ್​ ಆದ್ಮಿ ಪಕ್ಷ ಬಿಜೆಪಿ ನಾಯಕರ ಬೆಂಬಲದಿಂದ ಈ ವಿದ್ವಂಸಕ ದಾಳಿ ನಡೆದಿದೆ. ದೆಹಲಿ ಬಿಜೆಪಿ ಪೊಲೀಸರು ಈ ಹಿಂಸಾಚಾರವನ್ನು ಸುಗಮನವಾಗಿ ಮಾಡುವಂತೆ ನೋಡಿಕೊಂಡಿದ್ದಾರೆ. ಅಲ್ಲದೇ ಕಾಶ್ಮೀರಿ ಪಂಡಿತರ ಪುನರ್​ವಸತಿ ಇದೆನಾ ಎಂದು ಪ್ರಶ್ನಿಸಿದ್ದಾರೆ.

  ಇದನ್ನು ಓದಿ: ಬಹುಮತ ಕಳೆದುಕೊಂಡ Imran Khan ಪಾಕ್ ಪ್ರಧಾನಿ ಸ್ಥಾನದಿಂದಲೂ ಔಟ್ ಆಗ್ತಾರಾ?

  ಸಿಎಂ ಮನೆ ಮೇಲೆ ನಡೆದ ಈ ವಿದ್ವಂಸಕ ದಾಳಿ ಕುರಿತು ಉಪ ಮುಖ್ಯಮಂತ್ರಿ ಮನೀಷ್​ ಸಿಸೋಡಿಯಾ ಸೇರಿದಂತೆ ಅನೇಕ ನಾಯಕರು ಪ್ರಶ್ನಿಸಿದ್ದಾರೆ. ದೆಹಲಿ ಸಿಎಂ ಮನೆ ಸಿಸಿಟಿವಿ ಹಾನಿ ಮಾಡಿ ಬಿಜೆಪಿ ಕಾರ್ಯಕರ್ತರು ಧ್ವಂಸ ನಡೆಸುತ್ತಿದ್ದರು ದೆಹಲಿ ಪೊಲೀಸರು ಏನು ಮಾಡುತ್ತಿದ್ದರು. ಬಿಜೆಪಿ ಕಾರ್ಯಕರ್ತರ ವರ್ತನೆ ಬೆಂಬಲಿಸಲು ಅಮಿತ್​ ಶಾ ಕಚೇರಿಯಿಂದ ಅವರು ಆದೇಶ ಪಡೆದಿದ್ದಾರೆಯೇ ಎಂದು ಕೇಳಿದ್ದಾರೆ

  ಬ್ಯಾರಿಕೇಡ್​ ಮುರಿದು ಪ್ರತಿಭಟನೆ
  ಬಿಜೆಪಿ ಯುವ ಮೋರ್ಚಾದ ಸುಮಾರು 150-200 ಪ್ರತಿಭಟನಾಕಾರರು ಇಂದು ಸುಮಾರು 11.30ರ ಸುಮಾರಿಗೆ ಸಿಎಂ ನಿವಾಸದ ಎದುರು ಪ್ರತಿಭಟನೆ ನಡೆಸಲು ಸಜ್ಜಾದರು. ಈ ವೇಳೆ ಸಿಎಂ ಹೇಳಿಕೆ ಖಂಡಿಸಿ ಅನೇಕ ಫಲಕ ಹಿಡಿದು ಪ್ರತಿಭಟನೆ ನಡೆಸಿದರು. ಪೊಲೀಸರು ಅವರನ್ನು ತಡೆಯುವ ಯತ್ನ ನಡೆಸಿದರೂ ಅವರು ಬ್ಯಾರಿಕೇಡ್​​​ಗಳನ್ನು ದಾಟಿ ಬಂದು ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಪ್ರತಿಭಟನಾ ನಿರತ ಸುಮಾರು 70 ಕಾರ್ಯಕರ್ತರನ್ನು ವಶಕ್ಕೆ ಪಡೆದರು.

  ಇದನ್ನು ಓದಿ: Hijab ಧರಿಸಿ SSLC ಪರೀಕ್ಷೆ ಬರೆಯಲು ಅವಕಾಶ; ಏಳು ಶಿಕ್ಷಕರ ಅಮಾನತು

  ಸುಮಾರಿಗೆ ಕೆಲವು ಪ್ರತಿಭಟನಾಕಾರರು ಎರಡು ಬ್ಯಾರಿಕೇಡ್‌ಗಳನ್ನು ಮುರಿದು ಸಿಎಂ ಮನೆ ಮುಂದೆ ಗದ್ದಲ ಎಬ್ಬಿಸಿದರು, ಘೋಷಣೆಗಳನ್ನು ಕೂಗಿದರು. , ಬೂಮ್ ಬ್ಯಾರಿಯರ್ ಆರ್ಮ್ ಅನ್ನು ಸಹ ದ್ವಂಸ ಮಾಡಿದ್ದು, ಈ ದೃಸ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಕಾಣಬಹುದಾಗಿದೆ

  ಏನು ಅಂದಿದ್ರೂ ಕೇಜ್ರಿವಾಲ್​​
  ಅನೇಕ ರಾಜ್ಯಗಳಲ್ಲಿ ದಿ ಕಾಶ್ಮೀರಿ ಫೈಲ್ಸ್​ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ ಹಿನ್ನಲೆ ದೆಹಲಿಯಲ್ಲೂ ತೆರಿಗೆ ವಿನಾಯಿತಿ ಘೋಷಿಸುವಂತೆ ಸಿಎಂ ಅರವಿಂದ್​ ಕೇಜ್ರಿವಾಲ್​​ಗೆ ಬಿಜೆಪಿ ಶಾಸಕರು ಸದನದಲ್ಲಿ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೇಜ್ರಿವಾಲ್​, ಯಾಕೆ ತೆರಿಗೆ ವಿನಾಯಿತಿ ನೀಡಬೇಕು. ನಿಮಗೆ ಅಷ್ಟು ಕಾಳಜಿ ಇದ್ದರೆ, ಚಿತ್ರ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿಗೆ ಯೂಟ್ಯೂಬ್​ನಲ್ಲಿ ಅಪ್​ಲೋಡ್​ ಮಾಡಲು ಹೇಳಿ. ಯೂಟ್ಯೂಬ್​ನಲ್ಲಿ ವಿಡಿಯೋ ಹಾಕಿದರೆ ಪ್ರತಿಯೊಬ್ಬರು ಉಚಿತವಾಗಿ ನೋಡಬಹುದು ಎಂದು ವ್ಯಂಗ್ಯವಾಡಿದ್ದರು
  Published by:Seema R
  First published: