ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC – United Nations security council) ಸಭೆಯಲ್ಲಿ ಕಾಶ್ಮೀರ (Jammu and Kashmir) ವಿಚಾರವನ್ನು ಪ್ರಸ್ತಾಪ ಮಾಡಿದ್ದ ಪಾಕಿಸ್ತಾನಕ್ಕೆ (Pakistan) ಭಾರತ (India) ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದೆ. ಭಾರತದ ಹೊಡೆತಕ್ಕೆ ಕುತಂತ್ರಿ ಪಾಕಿಸ್ತಾನ ಕಂಗಾಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ಪ್ರಧಾನಿ ವಿರುದ್ಧ ಪಾಕ್ ವಿದೇಶಾಂಗ (Minister of Foreign Affairs) ಸಚಿವ ಬಿಲಾವಲ್ ಭುಟ್ಟೋ (Bilawal Bhutto Zardari), ಅತ್ಯಂತ ಕೀಳು ಮಟ್ಟದ ಹೇಳಿಕೆಯನ್ನು ನೀಡಿದ್ದು, ಇದು ಭಾರತದಲ್ಲಿ ಪಾಕಿಸ್ತಾನದ ವಿರುದ್ಧ ಆಕ್ರೋಶ ಭುಗಿಲೇಳುವಂತೆ ಮಾಡಿದೆ. ಪಾಕ್ ಸಚಿವನ ಅಸಭ್ಯ ಹೇಳಿಕೆ ಖಂಡಿಸಿ ದೇಶದಾದ್ಯಂತ ಇಂದು ಬಿಜೆಪಿ ಪ್ರತಿಭಟನೆಗೆ ಇಳಿದಿದೆ.
ಪಾಕಿಸ್ತಾನ ವಿದೇಶಾಂಗ ಸಚಿವ ಹೇಳಿದ್ದೇನು..?
ಗುರುವಾರ ನ್ಯೂಯಾರ್ಕ್‌ನಲ್ಲಿ ಪತ್ರಿಕಾಗೋಷ್ಠಿಯೊಂದನ್ನು ಉದ್ದೇಶಿಸಿ ಮಾತನಾಡಿದ ಬಿಲಾವಲ್ ತನ್ನೆಲ್ಲಾ ಮಿತಿಗಳನ್ನು ದಾಟಿದ್ದರು. 9/11 ಮಾಸ್ಟರ್‌ಮೈಂಡ್ ಒಸಾಮಾ ಬಿನ್ ಲಾಡೆನ್‌ಗೆ ಆಶ್ರಯ ನೀಡಿದ್ದ ಭಾರತದ ವಿದೇಶಾಂಗ ಸಚಿವರ ಹೇಳಿಕೆ ಬಗ್ಗೆ ಮಾತನಾಡಿದ ಬುಟ್ಟೋ, ಒಸಾಮಾ ಬಿನ್ ಲಾಡೆನ್ ಸತ್ತಿದ್ದಾನೆ. ಆದರೆ ಗುಜರಾತ್ನ ಕಟುಕ ಇನ್ನೂ ಜೀವಂತವಾಗಿದ್ದಾನೆ ಎಂದು ಭಾರತದ ಪ್ರಧಾನಿಗೆ ಹೇಳಲಿಚ್ಛಿಸುತ್ತೇನೆ ಎಂದು ಮೋದಿ ವಿರುದ್ಧ ವೈಯುಕ್ತಿಕ ದಾಳಿ ನಡೆಸಿದ್ದರು.
BJP to protest Bilawal Bhutto Zardari’s outrageous comment… pic.twitter.com/eNGzEPoZSq
— Amit Malviya (@amitmalviya) December 16, 2022
ಅಲ್ಲದೇ, ಭಾರತ ಸರ್ಕಾರವು ಗಾಂಧಿಯವರ ಸಿದ್ಧಾಂತವನ್ನು ನಂಬುವ ಬದಲು ತನ್ನ ಕೊಲೆಗಾರನ ತತ್ವಗಳನ್ನು ನಂಬುತ್ತದೆ. ಭಾರತ ಸರ್ಕಾರ ಹಿಟ್ಲರ್‌ನಿಂದ ಪ್ರಭಾವಿತವಾಗಿದೆ ಎಂದು ಬಿಲಾವಲ್ ನಾಲಿಗೆ ಹರಿಬಿಟ್ಟಿದ್ದರು. ಇದೇ ವೇಳೆ ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕ ದಾಳಿಗೆ ಭಾರತವನ್ನು ಹೊಣೆಗಾರರನ್ನಾಗಿ ಮಾಡಿ, ಪಾಕಿಸ್ತಾನದಲ್ಲಿ ಭಯೋತ್ಪಾದನೆಗೆ ನೆರೆಯ ದೇಶದಿಂದ ಬೆಂಬಲ ಸಿಗುತ್ತಿದೆ. ಬಲೂಚಿಸ್ತಾನದಲ್ಲಿ ಅಸ್ಥಿರತೆಯನ್ನು ಸೃಷ್ಟಿಸಲು ಬಾಹ್ಯ ಶಕ್ತಿಗಳು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ: Bilawal Bhutto: ಗುಜರಾತ್ನ ಕಟುಕ ಇನ್ನೂ ಜೀವಂತವಾಗಿದ್ದಾನೆ: ಮೋದಿ ವಿರುದ್ಧ ಪಾಕ್ ಸಚಿವನ ಅಸಭ್ಯ ಹೇಳಿಕೆ!
ತಾನೇ ಸಾಕಿದ ಹಾವು ತನ್ನನ್ನು ಕಚ್ಚೀತು ಅಂತ ಜೈಶಂಕರ್ ತಿರುಗೇಟು
ಇನ್ನು, ಭುಟ್ಟೋ ಹೇಳಿಕೆಗೆ ತಿರುಗೇಟು ನೀಡಿದ್ದ ಭಾರತ ವಿದೇಶಾಂಗ ಸಚಿವ ಎಸ್.ಜೈಶಂಕರ್, ಇಡೀ ಜಗತ್ತೇ ಪಾಕಿಸ್ತಾನವನ್ನು ಭಯೋತ್ಪಾದನೆಯ ಕೇಂದ್ರವಾಗಿ ನೋಡುತ್ತಿದೆ. ನಾವು ನಮ್ಮ ಮನೆಯಂಗಳದಲ್ಲಿ ಸಾಕಿದ್ದ ಹಾವು ನೆರೆಹೊರೆಯರನ್ನು ಮಾತ್ರ ಕಚ್ಚುತ್ತದೆ ಎಂದು ನಿರೀಕ್ಷಿಸಬಾರದು, ಅದು ಸಾಕಿದವರನ್ನೂ ಕಚ್ಚೀತು ಎಂಬ ಅಮೆರಿಕದ ಮಾಜಿ ಉಪಾಧ್ಯಕ್ಷೆ ಹಿಲರಿ ಕ್ಲಿಂಟನ್ ಅವರ ಮಾತುಗಳನ್ನು ಪಾಕ್ ಮರೆಯಬಾರದು ಎಂದು ಟಾಂಗ್ ನೀಡಿದ್ದರು.
ಹತಾಶೆಯಿಂದ ಪಾಕ್ ಸಚಿವನ ಕೀಳು ಹೇಳಿಕೆ
ಪಾಕ್ ಸಚಿವರ ಹೇಳಿಕೆಗೆ ಆಕ್ರೋಶ ಹೊರಹಾಕಿರುವ ಬಿಜೆಪಿ, 1971ರ ಯುದ್ಧದಲ್ಲಿ ಡಿಸೆಂಬರ್ 16ರಂದೇ ಪಾಕಿಸ್ತಾನ ಸೋಲುಂಡಿತ್ತು. ಈ ನೋವಿನಿಂದ ಸಚಿವರು ಹೇಳಿಕೆ ನೀಡಿದ್ದಂತಿದೆ. ಭುಟ್ಟೋ ಹೇಳಿಕೆ ಅತ್ಯಂತ ಅವಹೇಳನಕಾರಿ ಮತ್ತು ಹೇಡಿತನದಿಂದ ಕೂಡಿದೆ. ಕುಸಿಯುತ್ತಿರುವ ಪಾಕಿಸ್ತಾನದ ಆರ್ಥಿಕತೆ, ಅಲ್ಲಿ ನಡೆಯುತ್ತಿರುವ ಅರಾಜಕತೆ ಹಾಗೂ ದುರಾಡಳಿತದಿಂದ ಜಾಗತಿಕ ಗಮನವನ್ನು ಬೇರೆಡೆಗೆ ಸೆಳೆಯಲು ಈ ರೀತಿ ಹೇಳಿಕೆಯನ್ನು ನೀಡಲಾಗಿದೆ ಎಂದು ಹೇಳಿದೆ.
ದೇಶದಾದ್ಯಂತ ಬೀದಿಗಿಳಿದು ಬಿಜೆಪಿ ಪ್ರತಿಭಟನೆ
ಅಲ್ಲದೇ ಪಾಕ್ ಹೇಳಿಕೆಯನ್ನು ಖಂಡಿಸಿ, ನವದೆಹಲಿ ಪಾಕಿಸ್ತಾನ ವಿದೇಶಾಂಗ ಇಲಾಖೆಯ ಹೊರಭಾಗದಲ್ಲಿ ಪ್ರತಿಭಟನೆಯನ್ನು ನಡೆಸಿದೆ. ಇದೇ ವೇಳೆ ಭಾರತದಾದ್ಯಂತ ಪ್ರತಿಭಟನೆಗೆ ಕರೆ ಕೊಟ್ಟಿದ್ದು, ಪಾಕಿಸ್ತಾನದ ವಿರುದ್ಧ ವಿವಿಧ ರಾಜ್ಯಗಳಲ್ಲಿ ಬಿಜೆಪಿ ಕಾರ್ಯಕರ್ತರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ: UN Security Council: ಕಾಶ್ಮೀರ ವಿಚಾರ ಪ್ರಸ್ತಾಪಿಸಿದ ಪಾಕ್ಗೆ ಜೈಶಂಕರ್ ತಿರುಗೇಟು!
ಪಾಕಿಸ್ತಾನ ಸಚಿವರು ಭಾರತ ಪ್ರಧಾನಿ ವಿರುದ್ಧ ನೀಡಿದ್ದ ಹೇಳಿಕೆಗೆ ಕಾಂಗ್ರೆಸ್ ಪಕ್ಷದ ನಾಯಕರು ಮೌನವಹಿಸಿದ್ದಾರೆ. ಆದರೆ ಈ ಹಿಂದೆ ಪಾಕಿಸ್ತಾನ ಪ್ರಧಾನಿಯಾಗಿದ್ದ ಮುಷರಫ್, ಆಗಿನ ಭಾರತದ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ವಿರುದ್ಧ ಮಾತನಾಡಿ "ದೇಹತಿ ಔರತ್" ಎಂದು ಕರೆದಿದ್ದಾಗ ಮೋದಿ, ಪಾಕ್ ಪ್ರಧಾನಿ ಹೇಳಿಕೆಯನ್ನು ಖಂಡಿಸಿದ್ದರು. ಆದರೆ ಇಂದು ಕಾಂಗ್ರೆಸ್ ಮಾತ್ರ ಮೌನವಹಿಸಿದೆ ಎಂದು ಆರೋಪಿಸಿ, ಮೋದಿ ಮಾತನಾಡಿದ್ದ ವಿಡಿಯೋವನ್ನು ಶೇರ್ ಮಾಡ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ