UP Election: ಯುಪಿಯಲ್ಲಿ ಬಿಜೆಪಿ ಗೆದ್ದರೆ ಲವ್ ಜಿಹಾದ್‌ಗೆ 10 ವರ್ಷ ಜೈಲು

BJP Manifesto: ಲತಾ ಮಂಗೇಶ್ಕರ್ ಇನ್‌ಸ್ಟಿಟ್ಯೂಟ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಅನ್ನು ಸ್ಥಾಪಿಸುವುದಾಗಿ ಪಕ್ಷ ಹೇಳಿದೆ. ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ನಿಧನದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ ಪ್ರಣಾಳಿಕೆ ಬಿಡುಗಡೆಯನ್ನು ಭಾನುವಾರ ಮುಂದೂಡಿದೆ ಎಂದು ಪಕ್ಷದ ರಾಜ್ಯ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಹೇಳಿದ್ದರು.

ಅಮಿತ್ ಶಾ

ಅಮಿತ್ ಶಾ

 • Share this:
  ದೆಹಲಿ(ಫೆ.08): ಮುಂಬರುವ ಉತ್ತರ ಪ್ರದೇಶ ಚುನಾವಣೆಗೆ(UP Election) ಬಿಜೆಪಿ ತನ್ನ ಚುನಾವನೆ ಪ್ರಣಾಳಿಕೆಯನ್ನು(Manifesto) ಬಿಡುಗಡೆ ಮಾಡಿದೆ. ಮುಂಬರುವ ಚುನಾವಣೆಯಲ್ಲಿ ಗೆದ್ದು ಬಿಜೆಪಿ ಅಧಿಕಾರಕ್ಕೆ ಬಂದರೆ ಲವ್‌ ಜಿಹಾದ್‌ನಲ್ಲಿ ತಪ್ಪಿತಸ್ಥರಿಗೆ ೧೦ ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂಪಾಯಿಗಳ ದಂಡ ಹೇರಲಾಗುತ್ತದೆ ಎಂದು ತಿಳಿಸಲಾಗಿದೆ. ಲವ್ ಜಿಹಾದ್ ವಿಚಾರದಲ್ಲಿ ತಪ್ಪು ಸಾಬೀತಾರೆ ಕನಿಷ್ಠ 10 ವರ್ಷ ಜೈಲು(Prison) ಹಾಗೂ 1 ಲಕ್ಷ ಫೈನ್ ಇರುತ್ತದೆ. ಹಿಂದೂ ಯುವತಿ ಹಾಗೂ ಮುಸ್ಲಿಂ ಯುವಕನ ನಡುವಿನ ಅಂತರ್ ಧರ್ಮೀಯ ವಿವಾಹಕ್ಕೆ ಲವ್ ಜಿಹಾದ್(Love Jihad) ಎನ್ನಲಾಗುತ್ತದೆ. ಪ್ರೀತಿಯ ಹೆಸರಿನಲ್ಲಿ ಮತಾಂತರ(Conversion) ಮಾಡುವ ಕುರಿತು ಈಗಾಗಲೇ ದೇಶದ ಹಲವು ಭಾಗಗಳಲ್ಲಿ ಈ ಬಗ್ಗೆ ವಿರೋಧವಿದೆ. ಕಳೆದ ವರ್ಷ ಬಿಜೆಪಿ(BJP) ಯುಪಿ ಅಕ್ರಮ ಮತಾಂತರ ವಿರುದ್ಧ ಸುಗ್ರೀವಾಜ್ಞೆ 2020 ಪಾಸ್ ಮಾಡಿತ್ತು.

  ನವೆಂಬರ್ ೨೮ಕ್ಕೆ ಜಾರಿಯಾದ ಈ ನಿಯಮದ ಅಡಿಯಲ್ಲಿ ಬವಂತವಾಗಿ ಮತಾಂತರ ಮಾಡಿದ ಪ್ರಕರಣದಲ್ಲಿ ತಪ್ಪು ಸಾಬೀತಾದರೆ ಅವರನ್ನು ಕನಿಷ್ಠ ೧ರಿಂದ ೫ ವರ್ಷದ ತನಕ ಜೈಲು ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಕನಿಷ್ಠ ೧೫ ಸಾವಿರ ದಂಡವನ್ನು ವಿಧಿಸಬಹುದು. ಯಾರಾದರೂ ಅಪ್ರಾಪ್ತರನ್ನು ಮತಾಂತರ ಮಾಡಿದರೆ ಆ ಸಂದರ್ಭದಲ್ಲಿ ಜೈಲು ಶಿಕ್ಷೆ ೧೦ ವರ್ಷದ ತನಕ ನೀಡಬಹುದು ಹಾಗೆಯೇ ದಂಡ 25 ಸಾವಿರ ತನಕ ವಿಧಿಸಲು ಅವಕಾಶವಿದೆ.

  ಚುನಾವಣಾ ಪ್ರಣಾಳಿಕೆ
  ಗೃಹ ಸಚಿವ ಅಮಿತ್ ಶಾ(Amit Shah) ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಉಜ್ವಲ ಯೋಜನೆ ಅಡಿಯಲ್ಲಿ ಎರಡು ಉಚಿತ ಎಲ್‌ಪಿಜಿ(LPG) ಸಿಲಿಂಡರ್ (ಹೋಳಿ ಮತ್ತು ದೀಪಾವಳಿಯಲ್ಲಿ ತಲಾ ಒಂದೊಂದರಂತೆ), 60 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಉಚಿತ ಸಾರ್ವಜನಿಕ ಸಾರಿಗೆ ಪ್ರಯಾಣ ಮತ್ತು ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ದ್ವಿಚಕ್ರ ವಾಹನಗಳನ್ನು ನೀಡಲಾಗುತ್ತದೆ ಎನ್ನಲಾಗಿದೆ. ಗುರುವಾರ ಮೊದಲ ಹಂತದ ಚುನಾವನೆ ನಡೆಯಲಿದ್ದು ಅದಕ್ಕಿಂತ ಕೆಲವೇ ದಿನ ಮೊದಲು ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ.

  ಇದನ್ನೂ ಓದಿ: ರಾಜ್ಯಸಭೆಯಲ್ಲೂ ಮುಂದುವರೆದ PM Modi ವಾಗ್ದಾಳಿ; ಕಾಂಗ್ರೆಸ್​​ಗೆ ಕುಟುಂಬದ ಹೊರತು ಚಿಂತಿಸಲು ಸಾಧ್ಯವಿಲ್ಲ

  ಪ್ರಣಾಳಿಕೆ ಬಿಡುಗಡೆ ಸಂದರ್ಭ ಮಾತನಾಡಿದ ಅಮಿತ್ ಶಾ ಅವರು, ಬಿಜೆಪಿಯು ತನ್ನ 2017 (ಚುನಾವಣೆ) ಪ್ರಣಾಳಿಕೆಯಲ್ಲಿ ನೀಡಿದ 212 ಭರವಸೆಗಳಲ್ಲಿ ಶೇಕಡಾ 92 ಕ್ಕಿಂತ ಹೆಚ್ಚು ಈಡೇರಿಸಿದೆ ಎಂದು ಹೇಳಿದ್ದಾರೆ. ಲೋಕ ಕಲ್ಯಾಣ ಸಂಕಲ್ಪ ಪತ್ರ 2022 ರಲ್ಲಿ ಬಿಜೆಪಿಯು ಮುಂದಿನ ಐದು ವರ್ಷಗಳಲ್ಲಿ ರೈತರಿಗೆ ನೀರಾವರಿಗಾಗಿ ಉಚಿತ ವಿದ್ಯುತ್ ಅನ್ನು ಭರವಸೆ ನೀಡಿದೆ.

  ಪ್ರತಿ ಕುಟುಂಬಕ್ಕೆ ಒಂದು ಉದ್ಯೋಗ ಸೇರಿದಂತೆ ಮುಂದಿನ ಐದು ವರ್ಷಗಳಲ್ಲಿ ಮೂರು ಕೋಟಿ ಹೊಸ ಉದ್ಯೋಗ ಸೃಷ್ಟಿಸುವುದು, ತಲಾ ಆದಾಯವನ್ನು ದ್ವಿಗುಣಗೊಳಿಸುವ ಮೂಲಕ ಉತ್ತರ ಪ್ರದೇಶವನ್ನು ರಾಜ್ಯದ ನಂಬರ್ ಒನ್ ಆರ್ಥಿಕ ಕೇಂದ್ರವಾಗಿ ಮಾಡುವ ಭರವಸೆಯನ್ನು ಬಿಜೆಪಿ ನೀಡಿದೆ.

  ಇದನ್ನೂ ಓದಿ: ಮುಂದಿನ 100 ವರ್ಷದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಲೋಕಸಭೆಯಲ್ಲಿ PM Modi ಮಾತಿನೇಟು!

  ಲತಾ ಮಂಗೇಶ್ಕರ್ ಇನ್‌ಸ್ಟಿಟ್ಯೂಟ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಅನ್ನು ಸ್ಥಾಪಿಸುವುದಾಗಿ ಪಕ್ಷ ಹೇಳಿದೆ. ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ನಿಧನದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ ಪ್ರಣಾಳಿಕೆ ಬಿಡುಗಡೆಯನ್ನು ಭಾನುವಾರ ಮುಂದೂಡಿದೆ ಎಂದು ಪಕ್ಷದ ರಾಜ್ಯ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಹೇಳಿದ್ದರು.
  Published by:Sandhya M
  First published: