• Home
  • »
  • News
  • »
  • national-international
  • »
  • Assembly Elections: ವಿಧಾನಸಭಾ ಚುನಾವಣೆಗಳನ್ನು ಗೆಲ್ಲಲು ರೆಡಿಯಾಗಿದೆ ಬಿಜೆಪಿ ಮಾಸ್ಟರ್​ ಪ್ಲಾನ್!

Assembly Elections: ವಿಧಾನಸಭಾ ಚುನಾವಣೆಗಳನ್ನು ಗೆಲ್ಲಲು ರೆಡಿಯಾಗಿದೆ ಬಿಜೆಪಿ ಮಾಸ್ಟರ್​ ಪ್ಲಾನ್!

ವಿಧಾನಸಭಾ ಚುನಾವಣೆಗೆ ಬಿಜೆಪಿ ರೆಡಿ

ವಿಧಾನಸಭಾ ಚುನಾವಣೆಗೆ ಬಿಜೆಪಿ ರೆಡಿ

ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಉತ್ಸಾಹ ಇಮ್ಮಡಿಗೊಂಡಿದೆ. ಪ್ರತಿಯೊಂದು ಪಕ್ಷವೂ ತನ್ನದೇ ಮಟ್ಟದಲ್ಲಿ ಕಾರ್ಯತಂತ್ರ ರೂಪಿಸುವಲ್ಲಿ ನಿರತವಾಗಿದೆ. ಈ ಸಂಬಂಧ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಬಿಜೆಪಿ ಹೆಣೆದ ರಣತಂತ್ರದ ಬಗ್ಗೆ ಮಹತ್ವದ ಮಾಹಿತಿ ಬಿಚ್ಚಿಟ್ಟಿದೆ.

ಮುಂದೆ ಓದಿ ...
  • Share this:

ಅಹಮದಾಬಾದ್(ನ.07): ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ (Gujarat And Himachal Pradesh Asdsembly Elections) ಚುನಾವಣೆಗೆ ರಣಕಹಳೆ ಮೊಳಗಿದೆ. ಸದ್ಯ ಎರಡೂ ಕಡೆ ಬಿಜೆಪಿ ಸರ್ಕಾರವಿದೆ. ಹೀಗಿರುವಾಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (BJP President JP Nadda) ವರು ನ್ಯೂಸ್ 18 ಜೊತೆ ಮಾತನಾಡುತ್ತಾ, ಎರಡೂ ರಾಜ್ಯಗಳಲ್ಲಿ ತಮ್ಮ ಸರ್ಕಾರ ಅತ್ಯಂತ ಆರಾಮದಾಯಕವಾಗಿ ರಚನೆಯಾಗುತ್ತದೆ ಎಂದಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪ್ರಮುಖ ಸ್ಪರ್ಧೆಯಿದ್ದು, ಗುಜರಾತ್‌ನಲ್ಲಿ ಈ ಬಾರಿ ತ್ರಿಕೋನ ಚುನಾವಣೆ ನಡೆಯುವ ಸಾಧ್ಯತೆ ಇದೆ. ಆಮ್ ಆದ್ಮಿ (Aam Aadmi Party) ಪಕ್ಷ ಚುನಾವಣಾ ಕಣಕ್ಕೆ ಧುಮುಕಿದ ಬಳಿಕ ಗುಜರಾತ್‌ನ ಸಮೀಕರಣ ಕುತೂಹಲ ಮೂಡಿಸಿದೆ.


ಜೆಪಿ ನಡ್ಡಾ ಖುದ್ದು ಹಿಮಾಚಲ ಪ್ರದೇಶದವರೆಂಬುವುದು ಉಲ್ಲೇಖನೀಯ. ಅದೇ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಗುಜರಾತ್​ನವರಾಗಿದ್ದಾರೆ. ಇದೆಲ್ಲದರ ನಡುವೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಎರಡೂ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಪಕ್ಷದ ರಣತಂತ್ರದ ಬಗ್ಗೆ ಮಹತ್ವದ ವಿಚಾರ ಬಯಲು ಮಾಡಿದ್ದಾರೆ.


ಇದನ್ನೂ ಓದಿ: Gujarat Elections: ಗುಜರಾತ್ ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ಭಾರೀ ಹಿನ್ನಡೆ, ಮಾಜಿ ಆರೋಗ್ಯ ಸಚಿವ ರಾಜೀನಾಮೆ


*  ನಮ್ಮ ಪಕ್ಷದ ಸರ್ಕಾರ ಎಲ್ಲರಿಗೂ ನ್ಯಾಯ ಎಂಬ ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ ಮತ್ತು ಯಾರನ್ನೂ ತುಷ್ಟೀಕರಿಸುವ ನೀತಿಯಿಲ್ಲ ಎಂದು ಜೆಪಿ ನಡ್ಡಾ ಹೇಳಿದರು.


* ಹೊಸ ಮುಖಗಳಿಗೆ ಅವಕಾಶ: ಕಳೆದ ಕೆಲ ದಿನಗಳ ಹಿಂದೆ ಗುಜರಾತ್ ನಲ್ಲಿ ಶೇ.25ರಷ್ಟು ಹೊಸ ಮುಖಗಳಿಗೆ ಟಿಕೆಟ್ ನೀಡುವ ಕುರಿತು ಅಮಿತ್ ಶಾ ಮಾತನಾಡಿದ್ದರು. ಈ ಕುರಿತು ಜೆಪಿ ನಡ್ಡಾ ಅವರು, ತಮ್ಮ ಪಕ್ಷ ಜೀವಂತವಾಗಿದೆ, ಹಾಗಾಗಿ ಇಂತಹ ಪ್ರಯೋಗಗಳನ್ನು ಮಾಡುತ್ತಲೇ ಇದೆ ಎಂದು ಹೇಳಿದ್ದಾರೆ.


* ಮಹಿಳೆಯರಿಗೆ ಉತ್ತೇಜನ: ಮಹಿಳೆಯರ ಸಬಲೀಕರಣವನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಮಹಿಳೆಯರಿಗೆ ಗರಿಷ್ಠ ಅವಕಾಶಗಳನ್ನು ನೀಡುತ್ತದೆ ಎಂದು ಜೆಪಿ ನಡ್ಡಾ ಹೇಳಿದರು.


BJP Plans Mega Rallies in karnataka mrq


* ಸರ್ಕಾರದ ರಿಪೋರ್ಟ್ ಕಾರ್ಡ್: ಬಿಜೆಪಿ ಸರ್ಕಾರದ ಕೆಲಸವನ್ನು ಆಧಾರವಾಗಿಸುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ . ರಿಪೋರ್ಟ್ ಕಾರ್ಡ್‌ನೊಂದಿಗೆ ಸಾರ್ವಜನಿಕರ ಬಳಿಗೆ ತೆರಳಿ ಅವರಿಂದ ಬೆಂಬಲ ಕೋರಲಾಗುವುದು.


* ಪ್ರಧಾನಿ ಮೋದಿ: ಪ್ರಧಾನಿ ನರೇಂದ್ರ ಮೋದಿ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ ಎಂದು ಜೆಪಿ ನಡ್ಡಾ ಹೇಳಿದ್ದಾರೆ. ಪ್ರಧಾನಿ ಮೋದಿಯೇ ಮುಖ್ಯ ಮುಖ ಎನ್ನುವ ಸಂಕೇತಗಳಲ್ಲಿ ಅವರು ಹೇಳಿದ್ದಾರೆ.


* ಹೊಸ ಸಂಪ್ರದಾಯ: ಹಿಮಾಚಲ ಪ್ರದೇಶದಲ್ಲಿ ಹಿಮಾಚಲ ಪ್ರದೇಶದಲ್ಲಿ ಹೊಸ ಸಂಪ್ರದಾಯ ಆರಂಭಿಸುವ ಬಗ್ಗೆಯೂ ನಡ್ಡಾ ಮಾತನಾಡಿದ್ದಾರೆ.


* ಯುವಕರಿಗೆ ಉತ್ತೇಜನ: ಜೆಪಿ ನಡ್ಡಾ ಅವರು ಯುವಕರನ್ನು ಉತ್ತೇಜಿಸುವ ಬಗ್ಗೆಯೂ ಮಾತನಾಡಿದ್ದಾರೆ. ಚುನಾವಣೆಯಲ್ಲಿ ಹೊಸ ಮುಖಗಳ ಪಾತ್ರ ಪ್ರಮುಖವಾಗಿರಬಹುದು.


ಇದನ್ನೂ ಓದಿ: ಪಾಂಡಿಚೇರಿ ಸರ್ಕಾರ ಬೀಳಿಸಿದ ಬಿಜೆಪಿ ಕೆಲಸ ಮಹಾರಾಷ್ಟ್ರದಲ್ಲಿ ನಡೆಯುವುದಿಲ್ಲ; ಶಿವಸೇನೆ ಎಚ್ಚರಿಕೆ!


* ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸಬ್ಕಾ ಸಾಥ್, ಸಬ್ಕಾ ವಿಕಾಸ್ ಮತ್ತು ಸಬ್ಕಾ ವಿಶ್ವಾಸ್ ಸೂತ್ರದ ಮೇಲೆ ಮುಂದುವರಿಯುತ್ತದೆ.


* ಎಲ್ಲರ ಕಾಳಜಿ: ತಮ್ಮ ಪಕ್ಷವು ನಿರ್ದಿಷ್ಟ ಸಮುದಾಯವಲ್ಲದೆ ಎಲ್ಲರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತದೆ ಎಂದು ಜೆಪಿ ನಡ್ಡಾ ಹೇಳಿದರು.

Published by:Precilla Olivia Dias
First published: