ಮೋದಿಗೆ 2019 ರಲ್ಲೂ ಅಮಿತ್ ಶಾ ಸಾರಥಿ, ಪಕ್ಷದ ಸಂಘಟನಾ ಚುನಾವಣೆ ಮುಂದೂಡಿದ ಬಿಜೆಪಿ

news18
Updated:September 8, 2018, 4:15 PM IST
ಮೋದಿಗೆ 2019 ರಲ್ಲೂ ಅಮಿತ್ ಶಾ ಸಾರಥಿ, ಪಕ್ಷದ ಸಂಘಟನಾ ಚುನಾವಣೆ ಮುಂದೂಡಿದ ಬಿಜೆಪಿ
news18
Updated: September 8, 2018, 4:15 PM IST
ಮರ್ಯಾ ಶಕೀಲ್​,  ನ್ಯೂಸ್​ 18 ಕನ್ನಡ

ನವದೆಹಲಿ (ಸೆ.8): ಮೋದಿ, ಅಮಿತ್​ ಶಾ ಸಾರಥ್ಯದಲ್ಲಿ 2014ರ ಲೋಕಸಭಾ ಚುನಾವಣೆ ಎದುರಿಸಿದ್ದ ಬಿಜೆಪಿ ಹೊಸ ಅಲೆಯನ್ನೇ ಸೃಷ್ಠಿಸಿತು. ಈ ಇಬ್ಬರ ಸಾರಥ್ಯದಲ್ಲಿ ನಡೆದ ಅನೇಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿಯೂ ಬಿಜೆಪಿ ಅಖಂಡ ಜಯಭೇರಿ ಸಾಧಿಸಿತು. ಈ ಹಿನ್ನಲೆ ಮೋದಿ 2019ರ ಲೋಕಸಭಾ ಚುನಾವಣೆಯಲ್ಲಿಯೂ ಅಮಿತ್​ ಶಾ ಸಾರಥ್ಯವಹಿಸ ಬೇಕೆಂದು ಪಕ್ಷ ನಿರ್ಧರಿಸಿದೆ.

ಕೇಂದ್ರ ಅಧಿಕಾರದ ಬಳಿಕ ಉತ್ತರ ಪ್ರದೇಶ, ಮಧ್ಯಪ್ರದೇಶ, ಗೋವಾ, ಬಿಹಾರ ಸೇರಿದಂತೆ ದೇಶದ ಇತರೆ ರಾಜ್ಯಗಳ ಚುನಾವಣೆಯಲ್ಲಿಯೂ ಬಿಜೆಪಿ ಗೆಲುವು ಸಾಧಿಸಲು ಕಾರಣ ಅಮಿತ್​ ಶಾ ರಾಜಕೀಯ ತಂತ್ರ. ಈ ಹಿನ್ನಲೆಯಲ್ಲಿ ಮುಂದಿನ ಲೋಕಸಭಾ ಚುನಾವಣೆಯನ್ನು ಅಮಿತ್​ ಶಾ ಸಾರಥ್ಯದಲ್ಲಿ ನಡೆಯ ಬೇಕು ಎಂದು ಪಕ್ಷ ಅಭಿಪ್ರಾಯ ವ್ಯಕ್ತಪಡಿಸಿದೆ.  ಈ ಹಿನ್ನಲೆಯಲ್ಲಿ ಅಮಿತ್​ ಶಾ ಅಧಿಕಾರ ಅವಧಿ ಮುಗಿದರೂ ಅವರೇ ರಾಷ್ಟ್ರೀಯ ಅಧ್ಯಕ್ಷರಾಗಿ ಮುಂದುವರೆಯುವಂತೆ ಪಕ್ಷ ತೀರ್ಮಾನ ನಡೆಸಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಅಮಿತ್​ ಶಾ ನಾಯಕತ್ವ 2019ರ ಜನವರಿಯಲ್ಲಿ ಕೊನೆಗೊಳ್ಳಲಿದೆ. ಲೋಕಸಭೆ ಚುನಾವಣೆ ಎದುರಾಗುತ್ತಿರುವ ಹಿನ್ನಲೆಯಲ್ಲಿ ಪಕ್ಷ ಸಂಘಟನಾ ಚುನಾವಣೆ ನಡೆಸುವುದು ಸೂಕ್ತವಲ್ಲ ಎಂದು ಪಕ್ಷ ನಿರ್ಧಾರಕ್ಕೆ ಬಂದಿದೆ ಎಂದು ಮೂಲಗಳು ನ್ಯೂಸ್​ 18ಗೆ ತಿಳಿಸಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ರಾಜನಾಥ್​ ಸಿಂಗ್​ 2016ರಲ್ಲಿ ಗೃಹ ಸಚಿವರಾದ ಬಳಿಕ ಅಮಿತ್​ ಶಾಗೆ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಒಲಿದುಬಂದಿತ್ತು. 2016ರಿಂದ ಪಕ್ಷದ ಉಸ್ತುವಾರಿ ವಹಿಸಿಕೊಂಡ ಶಾ ಮೂರು ವರ್ಷದ ಅಧಿಕಾರ ಈಗ ಕೊನೆಗೊಳ್ಳುತ್ತಾ ಬಂದಿದೆ. ಇದರಿಂದಾಗಿ ಪಕ್ಷ ಈ ನಿರ್ಧಾರಕ್ಕೆ ಬಂದಿದೆ.

ಇಂದು ದೆಹಲಿಯಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷವನ್ನು ಮತ್ತೊಮ್ಮೆ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರುವಂತೆ ಕಾರ್ಯ ನಿರ್ವಹಿಸುವಂತೆ  ಪಕ್ಷ  ಕಾರ್ಯಕರ್ತರಿಗೆ ತಿಳಿಸಿದೆ.  ಅಲ್ಲದೇ ಈ ಬಾರಿಯ ಚುನಾವಣೆಯಲ್ಲಿ ‘ಅಜೇಯ ಬಿಜೆ’ಪಿ ಎಂಬ ಘೋಷ ವಾಕ್ಯದಲ್ಲಿ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರುವುದಾಗಿ ಪಕ್ಷದ ಕಾರ್ಯಕರ್ತರು ನಿರ್ಧರಿಸಿದರು. ಲೋಕಸಭೆಗೂ ಮುನ್ನ ರಾಜಸ್ಥಾನ, ಮಧ್ಯಪ್ರದೇಶ, ಚತ್ತೀಸ್​ ಗಢ ಸೇರಿದಂತೆ ತೆಲಂಗಾಣದಲ್ಲಿ ನಡೆಯಲಿರುವ ವಿಧಾನಸಭಾ ಜಯ ಸಾಧಿಸುವಂತೆ ಕಾರ್ಯಕರ್ತರಿಗೆ ಹರಿದುಂಬಿಸಲಾಯಿತು.
Loading...

ವಿಧಾನಸಭಾ ಚುನಾವಣೆಯಲ್ಲಿ ಜಾತಿ ಲೆಕ್ಕಾಚಾರದಲ್ಲಿ ಚುನಾವಣೆಎದುರಿಸುವ ಬಗ್ಗೆಯೂ ಕೂಡ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆ ನಡೆಸಲಾಗುವುದು

ದೇಶದ ಪ್ರಸ್ತುತ ರಾಜಕೀಯ ಸ್ಥಿತಿಗೆ ಪ್ರಾಮುಖ್ಯತೆ ನೀಡುವುದು , ಮೋದಿ ಸರ್ಕಾರದ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಜನರ ಬಳಿಗೆ ಪರಿಣಾಮಕಾರಿಯಾಗಿ ತಲುಪಿಸುವುದು ಈ ಮೂರು ಪ್ರಮುಖ ನಿರ್ಣಯಗಳನ್ನು ಇಂದಿನ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಧರಿಸಲಾಯಿತು.

ಇಂದು ಮತ್ತು ನಾಳೆ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದು, ನಾಳೆ ಮಧ್ಯಾಹ್ನ ಮೋದಿ ಸಭೆಯಲ್ಲಿ ಮಾತನಾಡಲಿದ್ದಾರೆ.
First published:September 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626