ಮಮತಾ ಬ್ಯಾನರ್ಜಿ ಸೋಲಿಸುವುದೆ ಬಿಜೆಪಿ ಗುರಿ, ವೋಟ್ ಬ್ಯಾಂಕ್​​​ಗಿಂತ ನಮಗೆ ದೇಶ ಮುಖ್ಯ: ಅಮಿತ್​ ಶಾ


Updated:August 11, 2018, 9:25 PM IST
ಮಮತಾ ಬ್ಯಾನರ್ಜಿ ಸೋಲಿಸುವುದೆ ಬಿಜೆಪಿ ಗುರಿ, ವೋಟ್ ಬ್ಯಾಂಕ್​​​ಗಿಂತ ನಮಗೆ ದೇಶ ಮುಖ್ಯ: ಅಮಿತ್​ ಶಾ
ಅಮಿತ್ ಶಾ

Updated: August 11, 2018, 9:25 PM IST
ನ್ಯೂಸ್​-18 ಕನ್ನಡ 

ನವದೆಹಲಿ(ಆಗಸ್ಟ್​.11): ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಎಲ್ಲಾ ಕ್ಷೇತ್ರಗಳಿಂದಲೂ ಬಿಜೆಪಿ ಸ್ಪರ್ಧಿಸಲಿದ್ದು,  ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್​ ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆಯಲಿದ್ದೇವೆ ಎಂದು ಬಿಜೆಪಿ ರಾಷ್ರೀಯ ಅಧ್ಯಕ್ಷ ಅಮಿತ್​ ಶಾ ಕಿಡಿಕಾರಿದ್ಧಾರೆ.

ಕೋಲ್ಕತಾದಲ್ಲಿ ನಡೆದ ಬಿಜೆಪಿ ರ್ಯಾಲಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತಾಡಿದ ಅಮಿತ್​ ಶಾ ಅವರು, ನಾವು ಮಮತಾ ಬ್ಯಾನರ್ಜಿ ಅವರನ್ನು ಅಧಿಕಾರದಿಂದ ಕಿತ್ತೊಗೆಯಲು ಬಂದಿದ್ದೇವೆ. ನಾವು ಎಲ್ಲಾ ಕ್ಷೇತ್ರಗಳಿಂದ ಸ್ಪರ್ಧೆ ಮಾಡುತ್ತಿದ್ದು, ಮುಂದೆ ಅಧಿಕಾರದ ಗದ್ದುಗೆ ಹಿಡಿಯಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೆ ವೇಳೆ ಅಸ್ಸಾಂ ಎನ್​ಆರ್​ಸಿ ಬಗ್ಗೆ ಪ್ರತಿಕ್ರಿಯಿಸಿದ ಅಮಿತ್​ ಶಾ ಅವರು, ಬಾಂಗ್ಲಾದೇಶಿಗರು ಭಾರತಕ್ಕೆ ವಲಸೆ ಬಂದಿದ್ದು, ಅಕ್ರಮವಾಗಿ ಜೀವನ ನಡೆಸುತ್ತಿದ್ಧಾರೆ. ಹೀಗಾಗಿ, ಎನ್​ಆರ್​ಸಿ ಜಾರಿಗೆ ತಂದಿದ್ದೇವೆ. ಆದರೆ, ಮಮತಾ ಬ್ಯಾನರ್ಜಿ ಅವರು ವೋಟ್​ ಬ್ಯಾಂಕ್​ಗಾಗಿ ಕಾಯ್ದೆ ವಿರೋಧಿಸುತ್ತಿದ್ಧಾರೆ ಎಂದು ವಾಗ್ಧಾಳಿ ನಡೆಸಿದರು.

ಮಮತಾ ಬ್ಯಾನರ್ಜಿ ಅವರಿಗೆ ದೇಶಕ್ಕಿಂತ ಮತ ರಾಜಕಾರಣ ಮುಖ್ಯವಾಗಿದೆ. ಶೀಘ್ರದಲ್ಲಿಯೇ ಬಂಗಾಳದಲ್ಲಿ ಅಧಿಕಾರ ಬದಲಾಗಲಿದೆ. ನಮಗೆ ವೋಟ್​ ಬ್ಯಾಂಕ್​ ರಾಜಕಾರಣಕ್ಕಿಂತ ದೇಶ ಮುಖ್ಯ. ಹೀಗಾಗಿ, ಎನ್​ಆರ್​ಸಿ ಮೂಲಕ ಅಕ್ರಮವಾಗಿ ನೆಲೆಸಿರುವ ವಲಸಿಗರನ್ನು ದೇಶದಿಂದ ಹೊರಹಾಕುತ್ತೇವೆ ಎಂದರು.

ಪಶ್ಚಿಮ ಬಂಗಾಳದ ಜನತೆ ವಿರುದ್ಧ ನಾನಲ್ಲ. ನಮಗೆ ಸಿಎಂ ಮಮತಾ ಬ್ಯಾನರ್ಜಿ ಅವರ ನಡೆಯ ಬಗ್ಗೆ ವಿರೋಧವಿದೆ. ಅವರು ಎನ್​ಆರ್​ಸಿ ಸುತ್ತ ದೊಡ್ಡ ರಾಜಕೀಯ ಮಾಡುತ್ತಿದ್ಧಾರೆ. ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ನಾವು ನಿಲ್ಲಿಸುವುದಿಲ್ಲ ಎಂದು ಅಮಿತ್ ಶಾ ಗುಟುರಿದರು.
First published:August 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ