• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Mehbooba Mufti: 'ಬಿಜೆಪಿ ರಾಷ್ಟ್ರ'ವೇ ಬಿಜೆಪಿ ಉದ್ದೇಶ, ಇವರ ಆಡಳಿತದಲ್ಲಿ ಹಿಂದೂಗಳು ಬಡವರಾಗ್ತಿದ್ದಾರೆ! ಮುಫ್ತಿ ಆರೋಪ

Mehbooba Mufti: 'ಬಿಜೆಪಿ ರಾಷ್ಟ್ರ'ವೇ ಬಿಜೆಪಿ ಉದ್ದೇಶ, ಇವರ ಆಡಳಿತದಲ್ಲಿ ಹಿಂದೂಗಳು ಬಡವರಾಗ್ತಿದ್ದಾರೆ! ಮುಫ್ತಿ ಆರೋಪ

ಮೆಹಬೂಬ ಮಫ್ತಿ

ಮೆಹಬೂಬ ಮಫ್ತಿ

ಬಿಜೆಪಿ ರೈಲ್ವೆ ಇಲಾಖೆ, ವಿಮಾನ ನಿಲ್ದಾಣ, ಬ್ಯಾಂಕ್​ಗಳು ಸೇರಿದಂತೆ ಇಡೀ ದೇಶವನ್ನು ಮಾರಾಟ ಮಾಡಿದೆ. ಅವರು(ಬಿಜೆಪಿ) ಯಾವಾಗಲೂ ಹಿಂದೂ- ಮುಸ್ಲೀಮರ ಬಗ್ಗೆ ಮಾತನಾಡುತ್ತಾರೆ. ಯುಪಿಎ ಆಡಳಿತಾವಧಿಯಲ್ಲಿ 26 ಕೋಟಿ ಜನರನ್ನು ಬಡತನ ರೇಖೆಗಿಂತ ಮೇಲೆತ್ತಲಾಗಿತ್ತು. ಆದರೆ ಬಿಜೆಪಿ ಮತ್ತೆ ಅವರನ್ನು ಮತ್ತೆ ಬಿಪಿಎಲ್ ಹಂತಕ್ಕೆ ತಳ್ಳಿದೆ ಎಂದು ಬಿಜೆಪಿ ವಿರುದ್ಧ ಮುಫ್ತಿ ವಾಗ್ದಾಳಿ ನಡೆಸಿದ್ದಾರೆ.

ಮುಂದೆ ಓದಿ ...
  • Share this:

ಜಮ್ಮು: ಬಿಜೆಪಿಗೆ (BJP) ದೇಶ ಅಭಿವೃದ್ಧಿ ಪಡಿಸುವ ಯಾವುದೇ ಉದ್ಧೇಶವಿಲ್ಲ. ಭಾರತದ ಬದಲಾಗಿ ಬಿಜೆಪಿ ರಾಷ್ಟ್ರ(BJP Rashtra) ಎಂದು ಪರಿವರ್ತಿಸುವುದು ಅದರ ಉದ್ದೇಶವಾಗಿದೆ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (People Democratic party) ಮುಖ್ಯಸ್ಥೆ ಮೆಹಬೂಬಾ ಮುಫ್ತಿ(Mehbooba Mufti) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುಪಿಎ ಸರ್ಕಾರದ (UPA Government) ಅವಧಿಯಲ್ಲಿ ಬಡತನ ರೇಖೆಯಿಂದ (BPL) ಮೇಲಕ್ಕೆತ್ತಿದ್ದ ಸುಮಾರು 26 ಕೋಟಿ ಜನರನ್ನು ಬಿಜೆಪಿ ಮತ್ತೆ ಬಡತನ ರೇಖೆಗಿಂತ ಕೆಳಗಿನ ವರ್ಗಕ್ಕೆ(ಬಿಪಿಎಲ್​) ತಳ್ಳಿದೆ ಎಂದು ಮುಫ್ತಿ ಆರೋಪಿಸಿದ್ದಾರೆ.


ಬಿಜೆಪಿ ಜಮ್ಮು ಮತ್ತು ಕಾಶ್ಮೀರವನ್ನು ತನ್ನ ಪ್ರಯೋಗಾಲಯವಾಗಿ ಪರಿವರ್ತಿಸಿ ಕೊಂಡು ಅಲ್ಲಿ ಪ್ರಯೋಗಗಳನ್ನು ಮಾಡುತ್ತಿದೆ ಎಂದು ಜಮ್ಮು ಕಾಶ್ಮೀರದ ಮಾಜಿ ಸಿಎಂ ಆರೋಪಿಸಿದ್ದಾರೆ. ಇಂತಹ ಬಿಜೆಪಿ ಆಡಳಿತದಲ್ಲಿ ಹಿಂದೂಗಳು ಬಡವರಾಗಿದ್ದಾರೆ ಪಿಡಿಪಿ ಮುಖ್ಯಸ್ಥೆ ಆರೋಪಿಸಿದ್ದಾರೆ.


ಬಿಜೆಪಿ ದೇಶವನ್ನು ಮಾರುತ್ತಿದೆ


ಬಿಜೆಪಿ ರೈಲ್ವೆ ಇಲಾಖೆ, ವಿಮಾನ ನಿಲ್ದಾಣ, ಬ್ಯಾಂಕ್​ಗಳು ಸೇರಿದಂತೆ ಇಡೀ ದೇಶವನ್ನು ಮಾರಾಟ ಮಾಡಿದೆ.  ಅವರು(ಬಿಜೆಪಿ) ಯಾವಾಗಲೂ ಹಿಂದೂ- ಮುಸ್ಲೀಮರ ಬಗ್ಗೆ ಮಾತನಾಡುತ್ತಾರೆ.  ಯುಪಿಎ ಆಡಳಿತಾವಧಿಯಲ್ಲಿ 26 ಕೋಟಿ ಜನರನ್ನು ಬಡತನ ರೇಖೆಗಿಂತ ಮೇಲೆತ್ತಲಾಗಿತ್ತು. ಆದರೆ ಬಿಜೆಪಿ ಮತ್ತೆ ಅವರನ್ನು ಮತ್ತೆ ಬಿಪಿಎಲ್ ಹಂತಕ್ಕೆ ತಳ್ಳಿದೆ. ಅವರ ಪ್ರಕಾರ ಇವರೆಲ್ಲಾ ಮುಸ್ಲಿಮರೇ? ಜಮ್ಮು -ಕಾಶ್ಮೀರದಲ್ಲಿ ಮುಸ್ಲೀಮರು ಮಾತ್ರ ಮಾದಕ ವಸ್ತುಗಳ ದಂಧೆಯ ಸಂತ್ರಸ್ತರಾಗಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.


ಜಮ್ಮು ಕಾಶ್ಮೀರ ಬಿಜೆಪಿ ಪ್ರಯೋಗಾಲಯವಾಗಿದೆ


ಜಮ್ಮು-ಕಾಶ್ಮೀರ ಬಿಜೆಪಿಯವರ ಪ್ರಯೋಗಾಲಯವಾಗಿದ್ದು, ಇಲ್ಲಿ ಪ್ರಯೋಗಗಳು ನಡೆಸಲಾಗುತ್ತಿದೆ. ಇಲ್ಲಿ ನಡೆದ ಪ್ರಯೋಗವನ್ನು ಇಡೀ ದೇಶದಲ್ಲಿ ಕಾರ್ಯಗತಗೊಳಿಸುತ್ತಿದ್ದಾರೆ. ಜಮ್ಮು ಜನತೆಗೆ ನಾನು ಹೇಳಬಯಸುವುದೇನೆಂದರೆ, ಬಿಜೆಪಿಯವರು ಮುಸ್ಲಿಮರ ಹಿಂದೆ ಇದ್ದಾರೆ ಎಂದು ಬಿಂಬಿಸಲು ಪ್ರಯತ್ನಿಸಿದರೆ, ನೀವು ಈ ಕನಸುಗಳಿಂದ ಹೊರಬರಬೇಕು. ನಾವು ದೇಶ ಕಟ್ಟಲು ಹೊರಟಿದ್ದೇವೆ ಎಂದು ಅವರು ಹೇಳುತ್ತಾರೆ. ಆದರೆ ಅವರು ಯಾವ ದೇಶವನ್ನು ಕಟ್ಟಲು ಬಯಸಲ್ಲ, ಬಿಜೆಪಿ ರಾಷ್ಟ್ರ ಮಾಡುವುದನ್ನು ಬಯಸುತ್ತಾರೆ ಎಂದು ಮುಪ್ತಿ ಟೀಕಿಸಿದ್ದಾರೆ.


ಇದನ್ನೂ ಓದಿ: Shiv Sena: ಶಿಂಧೆ ಕೈ ಸೇರಿದ ಧನುಸ್ಸು! ಠಾಕ್ರೆ ಮಾತ್ರವಲ್ಲ ಚಿಹ್ನೆ ಹೋರಾಟದಲ್ಲಿ ಇಂದಿರಾ, ಮುಲಾಯಂಗೂ ಸಿಕ್ಕಿದೆ ಏಟು!


ಮುಸ್ಲೀಮರು ಮಾತ್ರ ತೊಂದರೆಗೆ ಒಳಗಾಗಿದ್ದಾರೆಯೇ?


ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಒತ್ತುವರಿ ಕಾರ್ಯಾಚರಣೆಯಿಂದ ಮುಸ್ಲಿಮರಿಗೆ ಮಾತ್ರ ತೊಂದರೆಯಾಗಿದೆಯೇ? ಬಿಜೆಪಿಯವರು 80 ಕೋಟಿ ಜನರನ್ನು ಬಡವರನ್ನಾಗಿ ಮಾಡಿದ್ದಾರೆ ಅದಕ್ಕಾಗಿ ಅವರಿಗೆ 5 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಬೇಕು. ಅವರೆಲ್ಲಾ ಮುಸ್ಲೀಮರೇ? ಅವರೆಲ್ಲಾ ಬಿಜೆಪಿ ಆಡಳಿತದಲ್ಲಿ ಬಡವರಾದ ಹಿಂದೂಗಳು. ಅವರು ತಮ್ಮ ಪಡಿತರವನ್ನು ಖರೀದಿಸಲು ಅಸಮರ್ಥರಾಗಿದ್ದಾರೆ ಎಂದು ಮುಫ್ತಿ ಹೇಳಿದ್ದಾರೆ.


ಬಿಜೆಪಿಗೆ ಎದುರಾದವರಿಗೆ ಕೆಟ್ಟ ಪರಿಸ್ಥಿತಿ


ಬಿಜೆಪಿಗೆ ಯಾರು ಎದುರಾಗಿ ಹೋಗುತ್ತಾರೋ ಅವರು ಯಾರಾದರೂ ಸಹಾ ಅವರ ಸ್ಥಿತಿ ಮುಸ್ಲಿಮರಿಗಿಂತ ಕೆಟ್ಟದಾಗಿರುತ್ತದೆ. ಹಾಗಾಗಿ ನಾನು ಜಮ್ಮು ಜನರಿಗೆ ಎಚ್ಚರಗೊಳ್ಳಲು ಮತ್ತು ಜಾಗರೂಕರಾಗಿರಿ ಎಂಬ ಸಂದೇಶವನ್ನು ನೀಡಲು ಬಯಸುತ್ತೇನೆ ಎಂದು ಕಣಿವೆ ರಾಜ್ಯದ ಮಾಜಿ ಸಿಎಂ ಹೇಳಿದ್ದಾರೆ.




ಡೋಗ್ರಾಗಳಿಗೆ ಉನ್ನತ ಹುದ್ದೆ ಯಾಕಿಲ್ಲ?


ಬಿಜೆಪಿ ಸರ್ಕಾರ ಜಮ್ಮುವಿನ ಜನಸಂಖ್ಯಾಶಾಸ್ತ್ರವನ್ನು ಬದಲಾಯಿಸಿದೆ. ಈ ಪ್ರದೇಶದಲ್ಲಿನ ಉನ್ನತ ಹುದ್ದೆಗಳಿಗೆ ಡೋಗ್ರಾಗಳನ್ನು ಏಕೆ ಆಯ್ಕೆ ಮಾಡುತ್ತಿಲ್ಲ. ಇವರ ಆಡಳಿತದಲ್ಲಿ ಜಮ್ಮುವಿನ ಜನಸಂಖ್ಯಾಶಾಸ್ತ್ರ ಬದಲಾಗಿದೆ. ಡೋಗ್ರಾಗಳು ಎಲ್ಲಿದ್ದಾರೆ? ನಮ್ಮ ರಾಜ್ಯಪಾಲರು (ಎಲ್‌ಜಿ) ಏಕೆ ಡೋಗ್ರಾ ಸಮುದಾಯದಿಂದ ಬಂದಿಲ್ಲ? ಡಿಜಿ ಮತ್ತು ಎಸ್‌ಪಿಯಂತಹ ಪ್ರಮುಖ ಹುದ್ದೆಯಲ್ಲಿರುವವರು ಏಕೆ ಜಮ್ಮುವವರಾಗಿಲ್ಲ? ಎಂದು ಪ್ರಶ್ನೆಗಳ ಸುರಿಮಳೆ ಸುರಿದಿದ್ದಾರೆ.


ಅಬ್ದುಲ್ ನಜೀರ್​ರ ರಾಜ್ಯಪಾಲ ಹುದ್ದೆ ಟೀಕಿಸಿದ ಮುಫ್ತಿ


ಮಾಜಿ ಸುಪ್ರೀಂ ಕೋರ್ಟ್​ನ ನ್ಯಾಯಮೂರ್ತಿ ಜಸ್ಟಿಸ್ ಅಬ್ದುಲ್ ನಜೀರ್ ಅವರನ್ನು ಆಂಧ್ರಪ್ರದೇಶದ ರಾಜ್ಯಪಾಲರಾಗಿ ನೇಮಕ ಮಾಡಿರುವುದನ್ನು ಮುಫ್ತಿ ಟೀಕಿಸಿದ್ದಾರೆ.
" ಸುಪ್ರೀಂ ಕೋರ್ಟ್‌ನ ಷರತ್ತುಗಳೇನು? ಅಯೋಧ್ಯೆ, ತ್ರಿವಳಿ ತಲಾಖ್ ಅಥವಾ ನೋಟು ಅಮಾನ್ಯೀಕರಣದ ಬಗ್ಗೆ ತೀರ್ಪು ನೀಡಿದ ನ್ಯಾಯಾಧೀಶರು ನಿವೃತ್ತರಾದ ತಕ್ಷಣ ಅವರನ್ನು ರಾಜ್ಯಪಾಲರು, ರಾಜ್ಯಸಭಾ ಸದಸ್ಯರನ್ನಾಗಿ ಮಾಡಲಾಗುತ್ತದೆ ಅಥವಾ ಇತರ ಕೆಲವು ಹುದ್ದೆಗಳನ್ನು ನೀಡಲಾಗುತ್ತದೆ. ನ್ಯಾಯಾಂಗ ಎಲ್ಲಿದೆ?" ಎಂದು ಅವರು ಪ್ರಶ್ನೆ ಮಾಡಿದ್ದಾರೆ.

Published by:Rajesha M B
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು