ಕರ್ನಾಟಕದಂತೆ ಮಧ್ಯಪ್ರದೇಶ ಸರ್ಕಾರ ಕೆಡವಲು ಬಿಜೆಪಿ ಯತ್ನ; ಶಾಸಕರಿಗೆ ತಲಾ 25-35 ಕೋಟಿ ಆಫರ್; ದಿಗ್ವಿಜಯ್ ಸಿಂಗ್ ಆರೋಪ

ಕರ್ನಾಟಕದ ಶಾಸಕರು ಮಾರಾಟವಾದಂತೆ ಮಧ್ಯಪ್ರದೇಶ ಶಾಸಕರು ಮಾರಾಟವಾಗುವುದಿಲ್ಲ. ಯಾವುದೇ ಸಾಕ್ಷ್ಯ ಇಲ್ಲದೆ ನಾನು ಯಾವುದೇ ಆರೋಪಗಳನ್ನು ಮಾಡುವುದಿಲ್ಲ ಎಂದು ಸಿಂಗ್ ಹೇಳಿದರು.

ದಿಗ್ವಿಜಯ ಸಿಂಗ್

ದಿಗ್ವಿಜಯ ಸಿಂಗ್

  • Share this:
    ನವದೆಹಲಿ/ಭೋಪಾಲ್: ಮಧ್ಯಪ್ರದೇಶದ ಕಾಂಗ್ರೆಸ್​ ಸರ್ಕಾರವನ್ನು ಕೆಡವಲು ಬಿಜೆಪಿ, ಪ್ರತಿಯೊಬ್ಬ ಶಾಸಕರನ್ನು 25ರಿಂದ 35 ಕೋಟಿ ನೀಡಿ ಖರೀದಿಸಲು ಪ್ರಯತ್ನಿಸುತ್ತಿದೆ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ.

    ಶಿವರಾಜ್ (ಸಿಂಗ್ ಚೌಹ್ವಾನ್) ಮುಖ್ಯಮಂತ್ರಿಯಾಗುವ ಮತ್ತು ನರೊತ್ತಮ್ ಮಿಶ್ರಾ ಉಪಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ಇವರು 15 ವರ್ಷಗಳ ಕಾಲ ರಾಜ್ಯವನ್ನು ಲೂಟಿ ಹೊಡೆದಿದ್ದಾರೆ. ಈಗ 25ರಿಂದ 35 ಕೋಟಿ ಹಣ ನೀಡಿ ಶಾಸಕರ ಖರೀದಿಗೆ ಮುಂದಾಗಿದ್ದಾರೆ. ಮೊದಲ ಹಂತವಾಗಿ 5 ಕೋಟಿ ನೀಡುವುದು ಮತ್ತು ಎರಡನೇ ಕಂತನ್ನು ರಾಜ್ಯಸಭಾ ನಾಮನಿರ್ದೇಶನದ ಬಳಿಕ ನೀಡುವುದು, ಅಂತಿಮವಾಗಿ ಸರ್ಕಾರ ಕೆಡವಿದ ಬಳಿಕ ಉಳಿದ ಹಣ ನೀಡುವುದು ಎಂಬ ಮಾತುಕತೆಯಾಗಿದೆ ಎಂದು ದಿಗ್ವಿಜಯ್ ಸಿಂಗ್ ಆರೋಪಿಸಿದರು.

    ಆದಾಗ್ಯೂ, ಕರ್ನಾಟಕದ ಶಾಸಕರು ಮಾರಾಟವಾದಂತೆ ಮಧ್ಯಪ್ರದೇಶ ಶಾಸಕರು ಮಾರಾಟವಾಗುವುದಿಲ್ಲ. ಯಾವುದೇ ಸಾಕ್ಷ್ಯ ಇಲ್ಲದೆ ನಾನು ಯಾವುದೇ ಆರೋಪಗಳನ್ನು ಮಾಡುವುದಿಲ್ಲ ಎಂದು ಸಿಂಗ್ ಹೇಳಿದರು.

    ದಿಗ್ವಿಜಯ್ ಸಿಂಗ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ವಿರೋಧ ಪಕ್ಷದ ನಾಯಕ ಗೋಪಾಲ್ ಭಾರ್ಗವ್, ಯಾರೊಬ್ಬರೂ ನನ್ನನ್ನು ಸಂಪರ್ಕಿಸಿಲ್ಲ. ಅವರ ಇಚ್ಛೆಯ ಅನುಸಾರ ಪಕ್ಷಕ್ಕೆ ಬರುವುದಾದರೆ ಅವರಿಗೆ ಸ್ವಾಗತ. ಅವರ ಬಳಿ (ದಿಗ್ವಿಜಯ್ ಸಿಂಗ್) ಸಾಕ್ಷ್ಯ ಇದ್ದರೆ, ಅದನ್ನು ಸಾರ್ವಜನಿಕದ ಮುಂದೆ ಇಡಲಿ ಎಂದು ಸವಾಲು ಹಾಕಿದರು.

    ಇದನ್ನು ಓದಿ: ದೆಹಲಿ ಹಿಂಸಾಚಾರ: ಅಂಕಿತ್​ ಶರ್ಮಾ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಘೋಷಿಸಿದ ಸಿಎಂ ಕೇಜ್ರಿವಾಲ್​

    ಶಿವರಾಜ್ ಸಿಂಗ್ ಚೌಹ್ವಾನ್ ಕೂಡ ದಿಗ್ವಿಜಯ್ ಸಿಂಗ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಸದಾ ವಿಲಕ್ಷಣ ವಿಷಯಗಳಿಂದಲೇ ತುಂಬಿರುವ ಸಿಂಗ್ ಅವರ ಮನಸ್ಸನ್ನು ಓದಲು ಯಾರೊಬ್ಬರಿಗೂ ಸಾಧ್ಯವಿಲ್ಲ ಎಂದು ಕುಹಕವಾಡಿದ್ದಾರೆ.
    First published: