ಇಂದಿನಿಂದ ಬಿಜೆಪಿ ರಾಷ್ಟ್ರೀಯ ಸಭೆ; ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಕಾರ್ಯತಂತ್ರದ ಬಗ್ಗೆ ಚರ್ಚೆ

ಮುಂಬರುವ ಲೋಕಸಭಾ ಚುನಾವಣೆ ಪಕ್ಷಕ್ಕೆ ಪ್ರತಿಷ್ಟೆಯ ವಿಷಯವಾಗಿದ್ದು, ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಒಗ್ಗಟ್ಟಾಗಿ ಕಾರ್ಯ ಮಾಡಬೇಕು

Seema.R | news18
Updated:January 11, 2019, 12:32 PM IST
ಇಂದಿನಿಂದ ಬಿಜೆಪಿ ರಾಷ್ಟ್ರೀಯ ಸಭೆ; ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಕಾರ್ಯತಂತ್ರದ ಬಗ್ಗೆ ಚರ್ಚೆ
ಮೋದಿ- ಅಮಿತ್​ ಷಾ
Seema.R | news18
Updated: January 11, 2019, 12:32 PM IST
ನವದೆಹಲಿ (ಜ.11): ಮತ್ತೊಮ್ಮೆ ತಮ್ಮದೇ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಿರುವ ನಾಯಕರು ಲೋಕಸಭಾ ಚುನಾವಣೆಗೆ ತಮ್ಮ ಕಾರ್ಯಕರ್ತನ್ನು ಹುರಿದುಂಬಿಸಲು ಇಂದಿನಿಂದ ಎರಡು ದಿನಗಳ ಕಾಲ ಕಾಲ ದೆಹಲಿಯಲ್ಲಿ ರಾಷ್ಟ್ರೀಯ ಮಂಡಳಿ ಸಭೆ ನಡೆಸಲು ಮುಂದಾಗಿದೆ.

ಮೊದಲ ದಿನದ ಸಭೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಉದ್ಘಾಟನೆ ಮೂಲಕ ಆರಂಭಿಸಿದರೆ, ಪ್ರಧಾನಿ ಮೋದಿ ಭಾಷಣದೊಂದಿಗೆ ಸಭೆ ಮುಕ್ತಾಯಗೊಳ್ಳಲಿದೆ. ಸಭೆಯಲ್ಲಿ ರಾಜಕೀಯ ಹಾಗೂ ಆರ್ಥಿಕ ವಿಶ್ಲೇಷಣೆಗಳು ನಡೆಯಲಿದ್ದು, ನಾಲ್ಕೂವರೆ ವರ್ಷಗಳ ಕಾಲ ಆಡಳಿತ ನಡೆಸಿದ ಮೋದಿ ಅವರ ಕಾರ್ಯವೈಖರಿ ಕುರಿತು ಚರ್ಚೆ ಹಾಗೂ ಶ್ಲಾಘನೆ ವ್ಯಕ್ತವಾಗಲಿದೆ.

ಇದೇ ವೇಳೆ ಸಾಮಾಜಿಕ ವಲಯದಲ್ಲಿ ಮೋದಿ ಸರ್ಕಾರದ ನಿರ್ಣಯ, ಶೇ. 10ರ ಮೀಸಲಾತಿ ಬಗ್ಗೆಯೂ ಚರ್ಚೆ ನಡೆಯಲಿದೆ. ಮುಂದುವರೆದ ಮೇಲ್ಜಾತಿಗಳ ಬಗ್ಗೆ ಸ್ವತಂತ್ರ ಭಾರತದಲ್ಲಿ ಯೋಚಿಸಿದ ಮೊದಲ ಸರ್ಕಾರ ಇದಾಗಿದ್ದು, ಈ ಮಸೂದೆ ಪಕ್ಷದ ಪ್ರಮುಖ ಸಾಧನೆಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಪ್ರಭಾತ್​ ಜಾ ತಿಳಿಸಿದರು.

ಮುಂಬರುವ ಲೋಕಸಭಾ ಚುನಾವಣೆ ಪಕ್ಷಕ್ಕೆ ಪ್ರತಿಷ್ಟೆಯ ವಿಷಯವಾಗಿದ್ದು, ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಒಗ್ಗಟ್ಟಾಗಿ ಕಾರ್ಯ ಮಾಡಬೇಕು ಹಾಗೂ ಮತದಾರರೊಂದಿಗೆ ನಿರಂತರ ಸಂಪರ್ಕದಲ್ಲಿರುವ ಕುರಿತು  ಕಾರ್ಯಕರ್ತರಿಗೆ ಹುರುದುಂಬಿಸಲಾಗುವುದು ಎಂದು ಬಿಜೆಪಿ ಮಾಧ್ಯಮ ಘಟಕ ನಾಯಕ ಅನಿಲ್​ ಬಲುನಿ ತಿಳಿಸಿದ್ದಾರೆ.

ಇದನ್ನು ಓದಿ: ಲೋಕಸಭಾ ಚುನಾವಣೆಗೆ 'ಮಹಾಮೈತ್ರಿ' ನಾಳೆ ಪತ್ರಿಕಾಗೋಷ್ಠಿಯಲ್ಲಿ ಅಧಿಕೃತಪಡಿಸಲಿರುವ ಅಖಿಲೇಶ್​ ಯಾದವ್​, ಮಾಯಾವತಿ

ಪಕ್ಷದ ಪ್ರಮುಖ ಸಾಧನೆಗಳನ್ನು ಬಿಂಬಿಸಿ ಚುನಾವಣೆಯಲ್ಲಿ ಪ್ರಚಾರ ನಡೆಸುವಂತೆ ಕಾರ್ಯಕರ್ತರಿಗೆ ಸೂಚಿಸಲಾಗಿದ್ದೆ. ವಿವಿಧ ರಾಜ್ಯಗಳ ಕಾರ್ಯಕರ್ತರಿಗೆ ಹೇಗೆ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಬೇಕು ಎಂಬ ಬಗ್ಗೆ ಹ್ಯಾಂಡ್​ ಬುಕ್​ ನೀಡಲಾಗಿದೆ. ಇದರಲ್ಲಿ ಸರ್ಕಾರದ ಸಾಧನೆ ಕುರಿತು ಸಂಪೂರ್ಣ ಮಾಹಿತಿ ಇದೆ.

ಬಿಜೆಪಿ ರಾಷ್ಟ್ರೀಯ ಕಾರ್ಯಕರ್ತಿ ಮಂಡಳಿ ಸದಸ್ಯರು, ರಾಷ್ಟ್ರೀಯ ಸಮಿತಿ ಸದಸ್ಯರು, ಪಕ್ಷದ ಎಲ್ಲ ಸಂಸದರು, ವಿಧಾನಪರಿಷತ್​ ಸದಸ್ಯರು ಎಲ್ಲಾ ಮೋರ್ಚಾಗಳ ರಾಷ್ಟ್ರೀಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ.
Loading...

First published:January 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ