• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Varun Gandhi vs BJP| ರೈತರನ್ನು ಬೆಂಬಲಿಸಿದ್ದ ವಾಜಪೇಯಿ ಭಾಷಣ ಹಂಚಿಕೊಂಡ ವರುಣ್ ಗಾಂಧಿ; ಬಿಜೆಪಿ ಮತ್ತೆ ಟಾಂಗ್!

Varun Gandhi vs BJP| ರೈತರನ್ನು ಬೆಂಬಲಿಸಿದ್ದ ವಾಜಪೇಯಿ ಭಾಷಣ ಹಂಚಿಕೊಂಡ ವರುಣ್ ಗಾಂಧಿ; ಬಿಜೆಪಿ ಮತ್ತೆ ಟಾಂಗ್!

ರಾಹುಲ್ ಗಾಂಧಿ-ಮನೇಕಾ ಗಾಂಧಿ.

ರಾಹುಲ್ ಗಾಂಧಿ-ಮನೇಕಾ ಗಾಂಧಿ.

Lakhimpur Kheri Violence: 1980ರಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಅವರು ರೈತರ ಹೋರಾಟವನ್ನು ಬೆಂಬಲಿಸಿ ಮಾಡಿದ್ದ ಭಾಷಣದ ಚಿಕ್ಕ ತುಣುಕನ್ನು ಬಿಜೆಪಿ ಸಂಸದ ವರುಣ್ ಗಾಂಧಿ ಗುರುವಾರ ತಮ್ಮ ಖಾಸಗಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ರೈತ ಹೋರಾಟಕ್ಕೆ ಬಹಿರಂಗ ಬೆಂಬಲ ವ್ಯಕ್ತಪಡಿಸಿದ್ದಾರೆ.

ಮುಂದೆ ಓದಿ ...
 • Share this:

  ನವ ದೆಹಲಿ (ಅಕ್ಟೋಬರ್​14); ಲಖೀಂಪುರ್​ ಖೇರಿ ರೈತ ಹತ್ಯಾಕಾಂಡ (Lakhimpur Kheri Massacre) ಬಿಜೆಪಿ (BJP) ನಾಯಕರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಈ ವಿಚಾರಕ್ಕೆ ಸಂಬಂಧಂತೆ ಬಿಜೆಪಿಗರು ಮಾಧ್ಯಮಗಳ ಎದುರು ಹೇಗೆ ಪ್ರತಿಕ್ರಿಯಿಸಬೇಕು? ಎಂಬ ಗೊಂದಲದಲ್ಲಿದ್ದಾರೆ. ಆದರೆ, ಬಿಜೆಪಿ ಸಂಸದ ವರುಣ್ ಗಾಂಧಿ (Varun Gandhi) ಮಾತ್ರ ಈ ಹತ್ಯಾಕಾಂಡವನ್ನು ದಿಟ್ಟವಾಗಿ ಎದುರಿಸಿದ್ದರು. ತಾವು ಬಿಜೆಪಿಗರೇ ಆಗಿದ್ದರೂ ಸಹ ಉತ್ತರ ಪ್ರದೇಶ (Uttara Pradesh) ಸರ್ಕಾರ ರೈತರ ವಿಚಾರವಾಗಿ ಇಷ್ಟು ಕ್ರೌರ್ಯತೆಯಿಂದ ನಡೆದುಕೊಳ್ಳಬಾರದು ಎಂದು ಕಿಡಿಕಾರಿದ್ದರು. ಆದರೆ, ಅವರ ಈ ಮಾತು ಸಾಮಾನ್ಯವಾಗಿ ಬಿಜೆಪಿ ನಾಯಕರ ಕಣ್ಣು ಕೆಂಪಗಾಗಿಸಿತ್ತು. ಪರಿಣಾಮ ಅವರನ್ನು ಬಿಜೆಪಿ ಕಾರ್ಯಕಾರಿಣಿ ಸಮಿತಿಯಿಂದ ಹೊರಗಿಡಲಾಗಿತ್ತು. ಪರಿಣಾಮ ಇದೀಗ ಬಿಜೆಪಿಗೆ ಮತ್ತೆ ಟಾಂಗ್ ನೀಡಲು ಮುಂದಾಗಿರುವ ವರುಣ್ ಗಾಂಧಿ, ರೈತರನ್ನು ಬೆಂಬಲಿಸಿದ್ದ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಭಾಷಣ ಹಂಚಿಕೊಂಡು ಮತ್ತೆ ರೈತ ಹೋರಾಟಕ್ಕೆ ತನ್ನ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.  ಬಿಜೆಪಿಗೆ ವರುಣ್ ಗಾಂಧಿ ತಿರುಗೇಟು:


  1980ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ರೈತರ ಹೋರಾಟವನ್ನು ಬೆಂಬಲಿಸಿ ಮಾಡಿದ್ದ ಭಾಷಣದ ಚಿಕ್ಕ ತುಣುಕನ್ನು ಬಿಜೆಪಿ ಸಂಸದ ವರುಣ್ ಗಾಂಧಿ ಗುರುವಾರ ತಮ್ಮ ಖಾಸಗಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ರೈತ ಹೋರಾಟಕ್ಕೆ ಬಹಿರಂಗ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಲಖೀಂಪುರ್​ ರೈತ ಹತ್ಯಾಕಾಂಡವನ್ನು ಕಟುವಾಗಿ ವಿಮರ್ಶಿಸಿದ್ದಾರೆ.


  ತಮ್ಮ ಟ್ವೀಟ್​ನಲ್ಲಿ ಕೆಲವು ಸಾಲುಗಳನ್ನು ಬರೆದುಕೊಂಡಿರುವ ವರುಣ್ ಗಾಂಧಿ, "ವಿಶಾಲ ಹೃದಯದ ಬುದ್ಧಿವಂತ ನಾಯಕನ ಮಾತುಗಳು …" ಎಂದು ವರುಣ್ ಗಾಂಧಿ ಟ್ವೀಟ್ ಮಾಡಿದ್ದಾರೆ. 42 ಸೆಕೆಂಡ್‌ಗಳ ವಿಡಿಯೊದಲ್ಲಿ ರೈತರ ಮೇಲೆ ದಬ್ಬಾಳಿಕೆ ನಡೆಸದಂತೆ ಅಂದಿನ ಇಂದಿರಾಗಾಂಧಿ ಸರ್ಕಾರಕ್ಕೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಎಚ್ಚರಿಕೆ ನೀಡಿರುವುದು ಮತ್ತು ರೈತರಿಗೆ ತಮ್ಮ ಬೆಂಬಲವನ್ನು ನೀಡುವುದಾಗಿ ಹೇಳಿದ್ದಾರೆ.  ರೈತ ಹೋರಾಟಕ್ಕೆ ಬೆಂಬಲ:


  ದೇಶದ ರೈತರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಿತ ಮೂರು ಕೃಷಿ ಕಾನೂನುಗಳ ವಿರುದ್ಧ ಕಳೆದ 1 ವರ್ಷದಿಂದ ಹೋರಾಟ ನಡೆಸುತ್ತಿದ್ದಾರೆ. ಆದರೆ, ಈವರೆಗೆ ಕೇಂದ್ರ ಸರ್ಕಾರ ಈ ಹೋರಾಟಕ್ಕೆ ಕ್ಯಾರೆ ಎಂದಿಲ್ಲ. ಆದರೆ, ವರುಣ್ ಗಾಂಧಿ ಮಾತ್ರ ಕಳೆದ ಹಲವು ದಿನಗಳಿಂದ ಈ ಕಾಯ್ದೆಯ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಅಲ್ಲದೆ, ಇದೀಗ ವಾಜಪೇಯಿ ಅವರ ಭಾಷಣದ ವಿಡಿಯೋ ಹಂಚಿಕೊಳ್ಳುವ ಮೂಲಕ ಕೇಂದ್ರ ಸರ್ಕಾರಕ್ಕೆ ಸಂದೇಶ ನೀಡಿದ್ದಾರೆ ಎನ್ನಲಾಗಿದೆ.


  ಇದನ್ನೂ ಓದಿ: Lakhimpur Kheri Massacre| ಲಖೀಂಪುರ್​ ಹತ್ಯಾಕಾಂಡ; 10 ದಿನಗಳ ಬಳಿಕ ಘಟನಾ ಸ್ಥಳಕ್ಕೆ ಬಿಜೆಪಿ ಸಚಿವ, ಮೃತ ರೈತ ಕುಟುಂಬಗಳ ಭೇಟಿಗೆ ನಿರಾಕರಣೆ!


  ಉತ್ತರ ಪ್ರದೇಶದ ಲಖಿಂಪುರ್ ಖೇರಿ ಹತ್ಯಾಕಾಂಡ ಘಟನೆಗಳನ್ನು ಖಂಡಿಸಿ ಬಿಜೆಪಿ ಸಂಸದ ಪದೇ ಪದೇ ಟ್ವೀಟ್ ಮಾಡುತ್ತಿದ್ದರು. ಈ ಕಾರಣದಿಂದ ಅವರನ್ನು 80 ಸದಸ್ಯರೊಂದಿಗೆ ಹೊಸ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಿಂದ ಕೈಬಿಡಲಾಗಿದೆ ಎನ್ನುವ ವದಂತಿಗಳು ಹರಡಿದ್ದು, ಬಿಜೆಪಿಯು ಆರೋಪವನ್ನು ತಳ್ಳಿ ಹಾಕಿದೆ.


  ಈ ಹಿಂದೆ ಘಟನೆಯ ಸ್ಪಷ್ಟ ಮತ್ತು ದೀರ್ಘ ವಿಡಿಯೊವನ್ನು ಟ್ವೀಟ್ ಮಾಡಿದ್ದ ವರುಣ್‌ ಗಾಂಧಿ, "ವೀಡಿಯೊ ಅತ್ಯಂತ ಸ್ಪಷ್ಟವಾಗಿದೆ. ಪ್ರತಿಭಟನಾಕಾರರನ್ನು ಕೊಲೆ ಮಾಡುವ ಮೂಲಕ ಮೌನಗೊಳಿಸಲು ಸಾಧ್ಯವಿಲ್ಲ. ಅಂದು ಚೆಲ್ಲಿದ ರೈತರ ಮುಗ್ಧ ರಕ್ತಕ್ಕೆ ಹೊಣೆಗಾರಿಕೆ ವಹಿಸಬೇಕು. ಪ್ರತಿಯೊಬ್ಬ ರೈತನ ಮನಸ್ಸಿನಲ್ಲಿ ಹಠ ಮತ್ತು ಕ್ರೌರ್ಯದ ಸಂದೇಶ ಪ್ರವೇಶಿಸುವ ಮೊದಲು ನ್ಯಾಯ ಒದಗಿಸಬೇಕು" ಎಂದು ಹೇಳಿದ್ದರು.


  ಇದನ್ನೂ ಓದಿ: Ashish Mishra Denied Bail| ಲಖೀಂಪುರ್​ ರೈತ ಹತ್ಯಾಕಾಂಡ; ಆಶೀಶ್ ಮಿಶ್ರಾಗೆ ಜಾಮೀನು ನಿರಾಕರಣೆ, ಮತ್ತಿಬ್ಬರ ಬಂಧನ


  ಲಖೀಂಪುರ ಬೆಳವಣಿಗೆ:


  ಲಖೀಂಪುರ್​ ಹತ್ಯಾಕಾಂಡಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಆಶೀಶ್ ಮಿಶ್ರಾಗೆ ಜಾಮೀನು ನಿರಾಕರಣೆ ಮಾಡಲಾಗಿದೆ. ಅಲ್ಲದೆ, ಉತ್ತರ ಪ್ರದೇಶದ ಕಾನೂನು ಸಚಿವ ಬ್ರಿಜೇಶ್ ಪಾಠಕ್ ಘಟನೆಯ 10 ದಿನಗಳ ನಂತರ ಬುಧವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆದರೆ, ಈ ವೇಳೆ ಅವರು ಮೃತ ರೈತ ಕುಟುಂಬಗಳಿಗೆ ಭೇಟಿ ನೀಡದೆ ಇರುವುದು ವಿರೋಧ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.

  Published by:MAshok Kumar
  First published: