• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Tejaswi Surya: ವಂಶಾಡಳಿತ ರಾಜಕಾರಣವನ್ನು ಕೊನೆಗಾಣಿಸಲು ಯುವಕರು ಮುಂದಾಗಬೇಕು: ತೇಜಸ್ವಿ ಸೂರ್ಯ ಕರೆ

Tejaswi Surya: ವಂಶಾಡಳಿತ ರಾಜಕಾರಣವನ್ನು ಕೊನೆಗಾಣಿಸಲು ಯುವಕರು ಮುಂದಾಗಬೇಕು: ತೇಜಸ್ವಿ ಸೂರ್ಯ ಕರೆ

ತೇಜಸ್ವಿ ಸೂರ್ಯ

ತೇಜಸ್ವಿ ಸೂರ್ಯ

ವಂಶಾಧಾರಿತ ಪಕ್ಷಗಳನ್ನು ತೊಡೆದು ಹಾಕುವ ಗುರಿಯಲ್ಲಿ ಯುವಕರು ಕೈಜೋಡಿಸಬೇಕು. ರಾಜಕಾರಣ ಮತ್ತು ರಾಜಕೀಯ ಪಕ್ಷಗಳನ್ನು ಕುಟುಂಬದ ಪಿತಾಮಹಗಳಂತೆ ಪರಿಗಣಿಸುವ ಎಲ್ಲಾ ರಾಜಕೀಯ ಪಕ್ಷಗಳ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಬೇಕು ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕರೆ ನೀಡಿದರು.

  • Share this:

ನವದೆಹಲಿ: ದೇಶದಲ್ಲಿ ವಂಶಾಡಳಿತ ಆಧಾರದಲ್ಲಿರುವ (Dynastic Parties) ರಾಜಕೀಯ ಪಕ್ಷಗಳನ್ನು ನಾಶಪಡಿಸಲು ಯುವಕರು ಮುಂದಾಗಬೇಕು. ಆಗ ಅರ್ಹತೆಯ ಮೇಲೆ ರಾಜಕೀಯದಲ್ಲಿ ಜನರು ಮುಂದೆ ಬರಲು ಅವಕಾಶ ಸಿಕ್ಕಂತಾಗುತ್ತದೆ (Family Politics) ಎಂದು ಬಿಜೆಪಿ ಸಂಸದ, ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಘಟಕದ ಅಧ್ಯಕ್ಷ ತೇಜಸ್ವಿ ಸೂರ್ಯ (Tejaswi Surya) ಅಭಿಪ್ರಾಯಪಟ್ಟಿದ್ದಾರೆ.


ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಯೋಜಿಸಲಾದ ಕಲಾ ಸಾಂಸ್ಕೃತಿಕ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಚರ್ಚಾ ಕೂಟದಲ್ಲಿ ಭಾಗವಹಿಸಿ ಮಾತನಾಡಿದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ವಂಶಾಡಳಿತ ರಾಜಕೀಯ ಕೊನೆಗೊಂಡರೆ ಭಾರತೀಯ ಪ್ರಜಾಪ್ರಭುತ್ವಕ್ಕೆ ಪ್ರಯೋಜನವಾಗುತ್ತದೆ ಎಂದರು.


ಇದನ್ನೂ ಓದಿ: Siddaramaiah: ತೇಜಸ್ವಿ ಸೂರ್ಯನನ್ನು ಅಮವಾಸ್ಯೆ ಸೂರ್ಯ ಎನ್ನದೆ ಬೇರೆ ಏನು ಹೇಳಬೇಕು? ಸಿದ್ದರಾಮಯ್ಯ ವ್ಯಂಗ್ಯ


ಯುವಕರು ವಂಶಾಡಳಿತ ಕೊನೆಗೊಳಿಸಬೇಕು


ಅಲ್ಲದೇ, ಶಿವಸೇನೆ ಮತ್ತು ಕಾಂಗ್ರೆಸ್‌ನಂತಹ ಪಕ್ಷಗಳನ್ನು ಉಲ್ಲೇಖಿಸಿ ಮಾತನಾಡಿದ ಅವರು, ವಂಶಾಡಳಿತ ಆಧಾರಿತ ಪಕ್ಷಗಳನ್ನು ತೊಡೆದು ಹಾಕುವ ಗುರಿಯಲ್ಲಿ ಯುವಕರು ಕೈಜೋಡಿಸಬೇಕು. ರಾಜಕಾರಣ ಮತ್ತು ರಾಜಕೀಯ ಪಕ್ಷಗಳನ್ನು ಕುಟುಂಬದ ಪಿತಾಮಹಗಳಂತೆ ಪರಿಗಣಿಸುವ ಎಲ್ಲಾ ರಾಜಕೀಯ ಪಕ್ಷಗಳ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಬೇಕು ಎಂದು ಕರೆ ನೀಡಿದರು.


ಶಿವ ಸೇನೆ ಪಕ್ಷ ಪ್ರಜಾಪ್ರಭುತ್ವ ಆದಾಗ ಹೆಚ್ಚು ಹೆಚ್ಚು ಜನರು ಪಕ್ಷಕ್ಕೆ ಸೇರಲು ಮುಂದಾಗುತ್ತಾರೆ ಎಂದ ಸಂಸದ ತೇಜಸ್ವಿ ಸೂರ್ಯ, ಜನರು ಪಕ್ಷಗಳಿಗೆ ಹೆಚ್ಚು ಸೇರ್ಪಡೆಯಾದಾಗ ಅವರು ನಾಯಕರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಯಾಕೆಂದರೆ ಆ ನಾಯಕರು ಆದಿತ್ಯ ಠಾಕ್ರೆಗಿಂತ ಹೆಚ್ಚು ಸಾಮರ್ಥ್ಯ ಮತ್ತು ಶ್ರಮವನ್ನು ಪಟ್ಟು ಮೇಲೆ ಬಂದಿರುತ್ತಾರೆ. ತಳಮಟ್ಟದಿಂದ ಬಂದಾಗಲೇ ನಾಯಕರಾಗಲು ಸಾಧ್ಯ ಎಂದು ಹೇಳುವ ಮೂಲಕ ಉದ್ಧವ್ ಠಾಕ್ರೆ ಮತ್ತು ಫ್ಯಾಮಿಲಿಗೆ ಟಾಂಗ್ ನೀಡಿದರು.


ಇನ್ನು ಕಾಂಗ್ರೆಸ್ ಬಗ್ಗೆಯೂ ಮಾತನಾಡಿದ ತೇಜಸ್ವಿ ಸೂರ್ಯ, ನಾಳೆ ಕಾಂಗ್ರೆಸ್ ಪಕ್ಷ ಸಮರ್ಥ ಮತ್ತು ಪಕ್ಷ ನಿಷ್ಠೆ ಹೊಂದಿರುವ ಯಾವುದೇ ಯುವ ನಾಯಕನಿಗೆ ಅವಕಾಶ ನೀಡಬೇಕು ಎಂದು ನಿರ್ಧರಿಸಿದರೆ, ಆಗ ಪಕ್ಷವು ರಾಹುಲ್ ಗಾಂಧಿಯ ವಿಚಾರಗಳನ್ನು ಪ್ರತಿಯೊಬ್ಬರ ಕೊರಲಿಗೆ ಕಟ್ಟಲು ಹೋಗುವುದಿಲ್ಲ. ಹೀಗಾಗದೇ ಇದ್ದಾಗ ನಮ್ಮ ಪ್ರಜಾಪ್ರಭುತ್ವವು ಹೆಚ್ಚು ಪ್ರಯೋಜನ ಪಡೆಯುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.


ಇದನ್ನೂ ಓದಿ: Tejasvi Surya: ತೇಜಸ್ವಿ ಸೂರ್ಯ ಆಕಸ್ಮಿಕವಾಗಿ ವಿಮಾನ ತುರ್ತು ಬಾಗಿಲು ತೆರೆದಿದ್ದರು, ಸಂಸತ್​ನಲ್ಲಿ ಕೇಂದ್ರ ಸ್ಪಷ್ಟನೆ


ಇತ್ತೀಚೆಗೆ ಟ್ರೋಲ್‌ಗೆ ಗುರಿಯಾಗಿದ್ದ ತೇಜಸ್ವಿ ಸೂರ್ಯ!


ಇತ್ತೀಚಿಗೆ ಸಂಸದ ತೇಜಸ್ವಿ ಸೂರ್ಯ ಅವರು ವಿಮಾನದಲ್ಲಿ ಎಮರ್ಜೆನ್ಸಿ ಡೋರ್ ತೆಗೆದು ರಾಷ್ಟ್ರಮಟ್ಟದಲ್ಲಿ ಭಾರೀ ಟ್ರೋಲ್‌ಗೆ ಗುರಿಯಾಗಿದ್ದರು. ಕಳೆದ ವರ್ಷ ಡಿಸೆಂಬರ್ 10ರಂದು ಚೆನ್ನೆ ವಿಮಾನ ನಿಲ್ದಾಣದಲ್ಲಿ ತಿರುಚಿರಾಪಳ್ಳಿಗೆ ತೆರಳುವ 6E-7339 ಸಂಖ್ಯೆಯ ವಿಮಾನವನ್ನು ಏರಿದ್ದರು. ಈ ವೇಳೆ ಅವರು ಆಕಸ್ಮಿಕವಾಗಿ ವಿಮಾನದ ತುರ್ತು ಬಾಗಿಲು ತೆರೆದಿದ್ದರು. ಇದರಿಂದ ವಿಮಾನ ಸಂಚರಿಸೋದು ಗಂಟೆಗಳ ಕಾಲ ತಡವಾಗಿತ್ತು. ಈ ಪ್ರಕರಣ ತಿಂಗಳ ನಂತರ ಬೆಳಕಿಗೆ ಬಂದ ಪರಿಣಾಮ ಸಂಸದ ತೇಜಸ್ವಿ ಸೂರ್ಯ ಅವರು ವ್ಯಾಪಕ ಟ್ರೋಲ್‌ಗೆ ಗುರಿಯಾಗಿದ್ದರು. ಕೇಂದ್ರ ಸರ್ಕಾರ ಕೂಡ ತೇಜಸ್ವಿ ಸೂರ್ಯ ವಿಮಾನದ ತುರ್ತು ಬಾಗಿಲನ್ನು ತೆರೆದಿರುವುದು ನಿಜ ಎಂದು ಒಪ್ಪಿಕೊಂಡಿತ್ತು.
ತೇಜಸ್ವಿ ಸೂರ್ಯ ವಿಮಾನದ ಎಮರ್ಜೆನ್ಸಿ ಎಕ್ಸಿಟ್‌ ಡೋರ್ ಓಪನ್ ಮಾಡುವ ವೇಳೆ ಅವರ ಜೊತೆ ಮಾಜಿ ಐಪಿಎಸ್, ಬಿಜೆಪಿ ನಾಯಕ ಅಣ್ಣಾಮಲೈ ಕೂಡ ಜೊತೆಗೆ ಇದ್ದರು ಎಂದು ತಿಳಿದುಬಂದಿದೆ.

Published by:Avinash K
First published: