ಚುನಾವಣೆಗೆ ನಿಗದಿತ ಮೊತ್ತಕ್ಕಿಂತ ಹೆಚ್ಚು ಖರ್ಚು: ಸನ್ನಿ ಡಿಯೋಲ್​​ಗೆ ನೋಟಿಸ್ ನೀಡಿದ ಆಯೋಗ

ಇನ್ನು ಜಿಲ್ಲಾಧಿಕಾರಿಗೆ ಚುನಾವಣಾ ವೆಚ್ಚದ ವಿವರ ನೀಡಲು ಸನ್ನಿ ಡಿಯೋಲ್ ನಿರಾಕರಿಸಿದ್ದಾರೆ. ಸುಮಾರು 86 ಲಕ್ಷ ರುಪಾಯಿ ವೆಚ್ಚ ಮಾಡಿರುವುದಾಗಿ ನಮಗೆ ಲೆಕ್ಕ ಸಿಕ್ಕಿದೆ. 

Ganesh Nachikethu | news18
Updated:June 19, 2019, 9:22 PM IST
ಚುನಾವಣೆಗೆ ನಿಗದಿತ ಮೊತ್ತಕ್ಕಿಂತ ಹೆಚ್ಚು ಖರ್ಚು: ಸನ್ನಿ ಡಿಯೋಲ್​​ಗೆ ನೋಟಿಸ್ ನೀಡಿದ ಆಯೋಗ
ಸನ್ನಿ ಡಿಯೋಲ್
Ganesh Nachikethu | news18
Updated: June 19, 2019, 9:22 PM IST
ನವದೆಹಲಿ(ಜೂನ್​​.19): ಇತ್ತೀಚೆಗಿನ ಲೋಕಸಭಾ ಚುನಾವಣೆಯಲ್ಲಿ ನಿಗದಿತ ಮೊತ್ತಕ್ಕಿಂತ ಹೆಚ್ಚು ಹಣ ಖರ್ಚು ಮಾಡಿದ್ದ ಬಾಲಿವುಡ್ ನಟ ಹಾಗೂ ಗುರ್ದಾಸ್ಪುರ್ ಸಂಸದ ಸನ್ನಿ ಡಿಯೋಲ್​​ಗೆ ಕೇಂದ್ರ ಚುನಾವಣಾ ಆಯೋಗ ನೋಟಿಸ್​​ ನೀಡಿದೆ. ಆಯೋಗ ನಿಗದಿಪಡಿಸಿದ್ದ 70 ಲಕ್ಷ ರೂಪಾಯಿ ವೆಚ್ಚದ ಮಿತಿ ಮೀರಿದ್ದಕ್ಕೆ ಹಣದ ಲೆಕ್ಕಪತ್ರ ನೀಡುವಂತೆ ಆಯೋಗ ಸೂಚಿಸಿದೆ.

ಗುರ್ದಾಸ್ಪುರ್ ಸಂಸದ ಸನ್ನಿ ಡಿಯೋಲ್ ಅವರಿಗೆ ಬುಧವಾರ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ. ಚುನಾವಣಾ ಅಧಿಕಾರಿ ವಿಪೂಲ್ ಉಜ್ವಲ್ ಅವರೇ ನೋಟಿಸ್​ ಜಾರಿಗೊಳಿಸಿದ್ದು, ಚುನಾವಣೆಗೆ 70 ಲಕ್ಷಕ್ಕೂ ಮೀರಿ ಹೆಚ್ಚು ಖರ್ಚು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನು ಜಿಲ್ಲಾಧಿಕಾರಿಗೆ ಚುನಾವಣಾ ವೆಚ್ಚದ ವಿವರ ನೀಡಲು ಸನ್ನಿ ಡಿಯೋಲ್ ನಿರಾಕರಿಸಿದ್ದಾರೆ. ಸುಮಾರು 86 ಲಕ್ಷ ರುಪಾಯಿ ವೆಚ್ಚ ಮಾಡಿರುವುದಾಗಿ ನಮಗೆ ಲೆಕ್ಕ ಸಿಕ್ಕಿದೆ. ಆಯೋಗದ ಪ್ರಕಾರ ಚುನಾವಣಾ ಪ್ರಕ್ರಿಯೆ ಮುಗಿದ 90 ದಿನಗಳಲ್ಲಿ ಅಭ್ಯರ್ಥಿಗಳು ತಾವು ಖರ್ಚು ಮಾಡಿರುವ ಹಣದ ಲೆಕ್ಕಪತ್ರವನ್ನು ಆಯೋಗಕ್ಕೆ ಸಲ್ಲಿಸಬೇಕಿದೆ.

ಇದನ್ನೂ ಓದಿ: ಸಿಹಿಸುದ್ದಿ: ಪೊಲೀಸರ ಸಂಬಳ ಏರಿಕೆಗೆ ಮುಂದಾದ ರಾಜ್ಯ ಸರ್ಕಾರ

ಲೋಕಸಭಾ ಚುನಾವಣೆ 2019 ಮಾರ್ಚ್‌ 10 ಕ್ಕೆ ಘೋಷಣೆ ಆಗಿತ್ತು. ಅಂದಿನಿಂದಲೇ ದೇಶದಾದ್ಯಂತ ಚುನಾವಣಾ ನೀತಿ ಸಂಹಿತೆ ಜಾರಿಯಾಗಿತ್ತು. ಅಲ್ಲಿನಿಂದ ಮತದಾನದ ದಿನದವರೆಗೂ ಆಯೋಗವು 3449.12 ಕೋಟಿ ಮೌಲ್ಯದ ಹಣ, ಹೆಂಡ ಮತ್ತು ಇತರೆ ವಸ್ತುಗಳನ್ನು ದೇಶದಾದ್ಯಂತ ವಶಪಡಿಸಿಕೊಂಡಿತ್ತು.

ಇದನ್ನೂ ಓದಿ: ಕೊಲೆಯತ್ನ ಪ್ರಕರಣ​: ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ಪುತ್ರನ ಬಂಧನ

ಈ ಸಾರ್ವತ್ರಿಕ ಚುನಾವಣೆಯಲ್ಲಿ ವಶಪಡಿಸಿಕೊಂಡಿರುವ 3449 ಕೋಟಿ ಮೌಲ್ಯದ ಹಣ, ಹೆಂಡ ಮತ್ತು ಇತರೆ ವಸ್ತುಗಳು, ಕಳೆದ 2014ರಲ್ಲಿ ವಶಪಡಿಸಿಕೊಂಡಿದ್ದಕ್ಕಿಂತ ಮೂರು ಪಟ್ಟು ಹೆಚ್ಚು ಎಂದು ಆಯೋಗ ಹೇಳಿತ್ತು. 2014 ರಲ್ಲಿ ಆಯೋಗವು 1206 ಕೋಟಿ ಮೌಲ್ಯದ ಅಕ್ರಮ ವಸ್ತು, ಹಣ, ಹೆಂಡಗಳನ್ನು ಆಯೋಗ ವಶಪಡಿಸಿಕೊಂಡಿತ್ತು ಎಂದು ತಿಳಿದು ಬಂದಿದೆ.
Loading...

-----------
First published:June 19, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...