ಉನ್ನಾವೋ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ತಮ್ಮ ವಿವಾದಾತ್ಮಕ ಹೇಳೀಕೆಗಳಿಂದಲೇ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ, ಈಗ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದು. ಸಮಾಜವಾದಿ ಪಕ್ಷದ ನಾಯಕ ಅಖೀಲೇಶ್ ಯಾದವ್ ವಿರುದ್ದ ಗುಡುಗಿದ್ದಾರೆ. ಸಿಎಂ ಯೋಗಿಗೆ ಕಂಪ್ಯೂಟರ್ನಲ್ಲಿ ಹೇಗೆ ಕಾರ್ಯನಿರ್ವಹಿಸಬೇಕು ಎಂದು ತಿಳಿದಿಲ್ಲ ಎಂಬ ಅಖಿಲೇಶ್ ಯಾದವ್ ಹೇಳಿಕೆಗೆ ಕೆಂಡಮಂಡಲವಾಗಿರುವ ಸಂಸದ ಸಾಕ್ಷಿ ಮಹಾರಾಜ್, ’’ನಮ್ಮ ಮುಖ್ಯಮಂತ್ರಿ ಯೋಗಿಜೀ ಅವರ ಬಗ್ಗೆ ಮಾತನಾಡುತ್ತೀಯಾ ಸ್ವಲ್ಪ ಎಚ್ಚರಿಕೆಯಿಂದ ವರ್ತಿಸು’’ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
"ಅಖಿಲೇಶ್ ಯಾದವ್ ಸೇ ಕೆಹದ ದೊ ಯೋಗಿ ಜಿ ಕೋ ಥೋಕ್ನಾ ಆತಾ ಹೈ, ಜರಾ ಬಚ್ ಕೆ ರಹೇ, ಕೆಹೆನಾ ಉನ್ಕಾ ನಂಬರ್ ನಾ ಆ ಜಯೆ (ಅಖಿಲೇಶ್ ಯಾದವ್ ಸಿಎಂ ಯೋಗಿಗೆ ಜನರನ್ನು ಹೇಗೆ ಹೊಡೆದುರುಳಿಸಬೇಕು ಎಂದು ಗೊತ್ತು. ಹುಷಾರಾಗಿರು ಮುಂದಿನ ನಂಬರ್ ನಿನ್ನದೇ ಆಗಿರಬಹುದು), " ಎಂದು ಮಹಾರಾಜ್ ಒಂದು ರೀತಿಯಲ್ಲಿ ಅಖಿಲೇಶ್ ಯಾದವ್ಗೆ ಬೆದರಿಕೆ ಹಾಕಿದ್ದಾರೆ.
ಉನ್ನಾವೋದಲ್ಲಿರುವ ನಿರಾಲಾ ಆಡಿಟೋರಿಯಂನಲ್ಲಿ ನಡೆದ ಹೊಸದಾಗಿ ಚುನಾಯಿತ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡಾಗ ಬಿಜೆಪಿ ಸಂಸದರು ಈ ರೀತಿ ಹೇಳಿಕೆ ನೀಡಿದ್ದಾರೆ. ಇದನ್ನು ಸದರ್ ಶಾಸಕ ಪಂಕಜ್ ಗುಪ್ತಾ ಆಯೋಜಿಸಿದ್ದರು, ಇದರಲ್ಲಿ ಪಂಚಾಯತ್ ರಾಜ್ ಮಂತ್ರಿ ಮೋತಿ ಸಿಂಗ್ ಕೂಡ ಇದ್ದರು.
ಸಾಕ್ಷಿ ಮಹಾರಾಜ್, ಪತ್ರಕರ್ತರೊಂದಿಗೆ ಮಾತನಾಡುತ್ತಾ, "ಭಾನುವಾರ, ಗೃಹ ಸಚಿವ ಅಮಿತ್ ಶಾ ಲಕ್ನೋಗೆ ಬಂದಿದ್ದರು. ಷಾ ಅವರು ಎರಡು ಗಂಟೆಗಳ ಕಾಲ ಯೋಗಿ ಅವರ ಬಗ್ಗೆ ಹೊಗಳಿದ್ದರು. ರಾಜ್ಯ ಮತ್ತು ದೇಶದ ಜನರು ಇಂತಹವರನ್ನು ಪಡೆಯಲು ಪುಣ್ಯ ಮಾಡಿರಬೇಕು ಮತ್ತು ಅಂತಹ ಅದ್ಭುತ ಪ್ರಧಾನಿ ಮತ್ತು ಮುಖ್ಯಮಂತ್ರಿಯನ್ನು ಮುಂದೆಂದೂ ನಾವು ಪಡೆಯುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಈ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಸಮಾಜವಾದಿ ಪಕ್ಷದ ವಕ್ತಾರ ಅನುರಾಗ್ ಭದೌರಿಯಾ, "ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಸಾಕ್ಷಿ ಮಹಾರಾಜ್ ಬಳಸಿದ ಅವಹೇಳನಕಾರಿ ಭಾಷೆ ಅತ್ಯಂತ ಖಂಡನೀಯ. ಯುಪಿ ಜನರು ಸಂಸ್ಕೃತಿ ಮತ್ತು ಮೌಲ್ಯಗಳನ್ನು ಗೌರವಿಸುತ್ತಾರೆ, 2022 ರಲ್ಲಿ ಯುಪಿಯ ಜನರು ಬಿಜೆಪಿಯನ್ನು ಧೂಳಿಪಟ ಮಾಡುತ್ತಾರೆ, ಮತಗಳಿಂದ ಜನರು ಬಿಜೆಪಿಗೆ ಹೊಡೆಯುವ ಶಬ್ದ, ಅನೇಕ ವರ್ಷಗಳವರೆಗೆ ಪ್ರತಿಧ್ವನಿಸುತ್ತಲೇ ಇರುತ್ತದೆ, ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಪ್ರತಿಪಕ್ಷಗಳ ನಾಯಕರ ಜೊತೆ ಉಪಹಾರ; ಸಂಸತ್ತಿಗೆ ಸೈಕಲ್ನಲ್ಲಿ ತೆರಳಿ ಪ್ರತಿಭಟಿಸಿದ ರಾಹುಲ್ ಗಾಂಧಿ
ಉತ್ತರ ಪ್ರದೇಶದ 2022 ರ ರಾಜ್ಯ ವಿಧಾನಸಭಾ ಚುನಾವಣೆಗೆ ಸುಮಾರು ಎಂಟು ತಿಂಗಳುಗಳು ಬಾಕಿ ಇರುವುದರಿಂದ ರಾಜ್ಯದಲ್ಲಿ ರಾಜಕೀಯ ಪಕ್ಷಗಳ ನಡುವೆ ಮಾತಿನ ಸಮರ ಆರಂಭವಾಗಿದೆ ಮತ್ತು ರಾಜಕೀಯ ಪಕ್ಷಗಳು ಯಾವುದೇ ವಿಚಾರವನ್ನು ಬಿಟ್ಟುಕೊಟ್ಟು ತಮ್ಮ ಪ್ರತಿಸ್ಪರ್ಧಿಗಳನ್ನು ಗುರಿಯಾಗಿಸುವ ಮನಸ್ಥಿತಿಯಲ್ಲಿಲ್ಲ. 2017 ರ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಡ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು, ಆಗ ಅಧಿಕಾರದಲ್ಲಿದ್ದ ಸಮಾಜವಾದಿ ಪಕ್ಷವು ಕೇವಲ 47 ಸ್ಥಾನಗಳಿಗೆ ಕುಸಿದಿತ್ತು. ಮತ್ತು ಬಿಎಸ್ಪಿ 19 ವಿಧಾನಸಭಾ ಸ್ಥಾನಗಳನ್ನು ಪಡೆದುಕೊಂಡಿತ್ತು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ