UP Election 2022: ಬಿಜೆಪಿಗೆ ಆಘಾತ.. ರೀಟಾ ಬಹುಗುಣ ಪುತ್ರ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ!

ರೀಟಾ ಬಹುಗುಣ ಜೋಶಿ ಅವರು ಬಹಿರಂಗವಾಗಿ ತಮ್ಮ ಮಗ ಪಕ್ಷಕ್ಕಾಗಿ ಹಲವಾರು ವರ್ಷಗಳಿಂದ ಶ್ರಮಿಸುತ್ತಿರುವುದರಿಂದ ಟಿಕೆಟ್‌ಗೆ ಅರ್ಹರು ಎಂದು ಹೇಳಿದಾಗ ಲಕ್ನೋ ಕಂಟೋನ್ಮೆಂಟ್ ಸೀಟಿನ ವಿಷಯ ಬಹಳ ಚರ್ಚೆ ನಡೆಯಿತು. ಮಗನಿಗಾಗಿ ಅವರು ರಾಜೀನಾಮೆಯನ್ನೂ ನೀಡಬಹುದು ಎಂದು ಹೇಳಲಾಗುತ್ತಿತ್ತು.

ಎಸ್ ಪಿ ಸೇರಿದ ಮಯಾಂಕ್ ಜೋಶಿ

ಎಸ್ ಪಿ ಸೇರಿದ ಮಯಾಂಕ್ ಜೋಶಿ

  • Share this:
ನವದೆಹಲಿ, ಮಾ. 6: ದೇಶಾದ್ಯಂತ ಭಾರೀ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ (Uttar Pradesh Assembly Elections) ಏಳನೇ ಮತ್ತು ಕೊನೆಯ ಹಂತದ ಮತದಾನಕ್ಕೆ ಬಹಿರಂಗ ಪ್ರಚಾರ ಕೊನೆಗೊಂಡಿದೆ. 2024ರ ಲೋಕಸಭಾ ಚುನಾವಣೆ (Lokasabha Elections 2024) ದೃಷ್ಟಿಯಲ್ಲಿ ಉತ್ತರ ಪ್ರದೇಶ ಚುನಾವಣೆ ಅತ್ಯಂತ ಕುತೂಹಲ ಮೂಡಿಸಿದ್ದು ಇದೇ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendara Modi) ಮತ್ತು ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ (Uttar Pradesh Congress Incharge and AICC General Secretary Priyanka Gandhi) ಅವರು ಸೇರಿದಂತೆ ಇಂದು ಘಟಾನುಘಟಿ ನಾಯಕರು ಪ್ರಚಾರ ನಡೆಸಿದ್ದಾರೆ. ಈ ಎಲ್ಲದರ ನಡುವೆ ಬಹಿರಂಗ ಪ್ರಚಾರಕ್ಕೆ ಕಡೆಯ ದಿನವಾದ ಇಂದು ಬಿಜೆಪಿಗೆ ಶಾಕ್ ಆಗಿದೆ.

ಎಸ್ ಪಿ ಸೇರಿದ ಮಾಯಾಂಕ್
ಅಜಂಗಢದಲ್ಲಿ ಶನಿವಾರ ಸಾರ್ವಜನಿಕ ಸಮಾರಂಭ ಉದ್ದೇಶಿಸಿ ಮಾತನಾಡಿದ ಸಮಾಜವಾದಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಬಿಜೆಪಿ ಸಂಸದ ರೀಟಾ ಬಹುಗುಣ ಜೋಶಿ ಅವರ ಪುತ್ರ ಮಯಾಂಕ್ ಜೋಶಿ ಸಮಾಜವಾದಿ ಪಕ್ಷಕ್ಕೆ ಸೇರಿದ್ದಾರೆ ಎಂದು ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ಮಯಾಂಕ್ ಉಪಸ್ಥಿತರಿದ್ದರು. ಕಳೆದ ತಿಂಗಳು ಅಖಿಲೇಶ್ ಯಾದವ್ ಮತ್ತು ಮಯಾಂಕ್ ಅವರನ್ನು ಭೇಟಿ ಮಾಡಿದ್ದರು. ಲಕ್ನೋ (ಕೇಂದ್ರ) ಶಾಸಕ ಮತ್ತು ಸಚಿವ ಬ್ರಿಜೇಶ್ ಪಾಠಕ್ ಅವರನ್ನು ಲಕ್ನೋ ಕಂಟೋನ್ಮೆಂಟ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯನ್ನಾಗಿಸಿದಾಗಿನಿಂದ ಮಯಾಂಕ್ ಎಸ್‌ಪಿಗೆ ಸೇರುತ್ತಾರೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಮಾಯಾಂಕ್ ಬಹಿರಂಗ ಪ್ರಚಾರಕ್ಕೆ ಕಡೆಯ ದಿನ ಎಸ್‌ಪಿ ಪಕ್ಷಕ್ಕೆ ಸೇರಿರುವುದರಿಂದ ಉತ್ತರ ಪ್ರದೇಶದ ರಾಜಕೀಯದ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ‌.

ಇದನ್ನೂ ಓದಿ: Assembly Election: ಮತದಾನದ ವೇಳೆ ಗಲಾಟೆ, ಹಿಂಸೆ, ಇಬ್ಬರು ಸಾವು

ಮಯಾಂಕ್ ಅವರ ತಾಯಿ ರೀಟಾ ಬಹುಗುಣ ಜೋಶಿ ಅವರು ಅಲಹಾಬಾದ್‌ನಿಂದ ಹಾಲಿ ಬಿಜೆಪಿ ಸಂಸದರಾಗಿದ್ದಾರೆ. ಅವರು 2017ರ ವಿಧಾನಸಭಾ ಚುನಾವಣೆಯಲ್ಲಿ ಲಕ್ನೋ ಕ್ಯಾಂಟ್‌ನಿಂದ ಗೆದ್ದಿದ್ದರು. ಆಗ ತೆರವಾಗಿದ್ದ ವಿಧಾನಸಭಾ ಕ್ಷೇತ್ರದಿಂದ ಸುರೇಶ್ ತಿವಾರಿಗೆ ಬಿಜೆಪಿ ಟಿಕೆಟ್ ಸಿಕ್ಕಿತ್ತು. ಅವರು ಗೆದ್ದು ಶಾಸಕರಾಗಿದ್ದರು. ರೀಟಾ ಬಹುಗುಣ ಜೋಶಿ ಅವರು ಬಹಿರಂಗವಾಗಿ ತಮ್ಮ ಮಗ ಪಕ್ಷಕ್ಕಾಗಿ ಹಲವಾರು ವರ್ಷಗಳಿಂದ ಶ್ರಮಿಸುತ್ತಿರುವುದರಿಂದ ಟಿಕೆಟ್‌ಗೆ ಅರ್ಹರು ಎಂದು ಹೇಳಿದಾಗ ಲಕ್ನೋ ಕಂಟೋನ್ಮೆಂಟ್ ಸೀಟಿನ ವಿಷಯ ಬಹಳ ಚರ್ಚೆ ನಡೆಯಿತು ಮಗನಿಗಾಗಿ ಅವರು ರಾಜೀನಾಮೆಯನ್ನೂ ನೀಡಬಹುದು ಎಂದು ಹೇಳಲಾಗುತ್ತಿತ್ತು.

ನಿನ್ನೆಯಿಂದಲೂ ಮೋದಿ ವಾರಣಾಸಿಯಲ್ಲೇ‌ ಠಿಕಾಣಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ತಾವು ಲೋಕಸಭೆಗೆ ಪ್ರತಿನಿಧಿಸುವ ವಾರಣಾಸಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳಲ್ಲಿ ನಿನ್ನೆಯಿಂದಲೂ (ಮಾರ್ಚ್ 4) ಚುನಾವಣಾ ಪ್ರಚಾರ ನಡೆಸಿದ್ದಾರೆ. ನಿನ್ನೆ ವಾರಣಾಸಿ ನಗರದ ಮೂರು ವಿಧಾನಸಭಾ ಕ್ಷೇತ್ರಗಳಾದ ವಾರಣಾಸಿ ಕ್ಯಾಂಟ್, ವಾರಣಾಸಿ ಉತ್ತರ ಮತ್ತು ವಾರಣಾಸಿ ದಕ್ಷಿಣ ಕ್ಷೇತ್ರಗಳಲ್ಲಿ ರೋಡ್ ಶೋ ನಡೆಸಿದ್ದರು. ನಂತರ ಕಾಶಿ ವಿಶ್ವನಾಥನ ದರ್ಶನಕ್ಕೆ ಪಡೆದಿದ್ದರು. ಇಂದು ರಾಜತಾಲಬ್‌ನ ಖಜೂರಿ ಗ್ರಾಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ ಮಾಡಿದ್ದರು.

ರಾಹುಲ್ ಗಾಂಧಿಯಿಂದಲೂ ವಿಶ್ವನಾಥನ‌ ದರ್ಶನ
ಮೋದಿ ಅಲ್ಲದೆ ಎಐಸಿಸಿ ಮಾಜಿ ಅಧ್ಯಕ್ಷರೂ ಆದ ಸಂಸದ ರಾಹುಲ್ ಗಾಂಧಿ ಅವರು ಕೂಡ ವಾರಣಾಸಿ ಪ್ರವಾಸ ಹಮ್ಮಿಕೊಂಡಿದ್ದು ನಿನ್ನೆ ಕಾಶಿ ವಿಶ್ವನಾಥನ ದರ್ಶನ ಪಡೆದಿದ್ದಾರೆ. ಬಳಿಕ‌ ಅವರು ವಾರಣಾಸಿಯ ಪಿಂದ್ರಾದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ್ದಾರೆ.

ಇದನ್ನೂ ಓದಿ: Manipur ಮತದಾನದ ವೇಳೆ ಹಿಂಸಾಚಾರ! ಕಚ್ಚಾ ಬಾಂಬ್ ಸ್ಫೋಟ, ಗುಂಡಿನ ದಾಳಿಗೆ ಇಬ್ಬರು ಬಲಿ

ಪ್ರಿಯಾಂಕಾ ಗಾಂಧಿ ಪ್ರಚಾರ
ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಇಂದು ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾರೆ. ಮಧ್ಯಾಹ್ನ 12.30ಕ್ಕೆ ಶಾದಿಯಾಬಾದ್, ಜಖಾನಿಯಾ ಗಾಜಿಪುರದ ರಾಮ್ಲೀಲಾ ಮೈದಾನದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ ಮಾಡಿದರು. ಬಳಿಕ ಮಧ್ಯಾಹ್ನ 2 ಗಂಟೆಗೆ ಇಲ್ಲಿನ ಜಂಗೀಪರದ ಭಂಡಾರಿ ನಿಲ್ದಾಣದಿಂದ ಜೌನ್‌ಪುರದ ಗಾಂಧಿ ಪ್ರತಿಮೆವರೆಗೆ ಮನೆ ಮನೆಗೆ ತೆರಳಿ ‌ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು.

ಮಾರ್ಚ್ 10ಕ್ಕೆ ಫಲಿತಾಂಶ
403 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಉತ್ತರ ಪ್ರದೇಶದಲ್ಲಿ ಮಾರ್ಚ್ 7ರಂದು 54 ಕ್ಷೇತ್ರಗಳಿಗೆ ಕಡೆಯ ಮತ್ತು 7ನೇ ಹಂತದ ಮತದಾನ ಆಗಲಿದೆ. ಕಡೆಯ ಹಂತದ ಚುನಾವಣೆ ಅತ್ಯಂತ ನಿರ್ಣಾಯಕ ಎಂದು ಹೇಳಲಾಗುತ್ತಿದೆ. ಮಾರ್ಚ್ 10ರಂದು ಉತ್ತರ ಪ್ರದೇಶವೂ ಸೇರಿದಂತೆ ಗೋವಾ, ಪಂಜಾಬ್, ಉತ್ತರಖಂಡಾ ಮತ್ತು ಮಣಿಪುರ ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ.
Published by:Kavya V
First published: