HOME » NEWS » National-international » BJP MP RAM SWAROOP SHARMA FOUND DEAD IN HIS RESIDENCE AT NEW DELHI SNVS

Ram Swaroop Sharma - ಬಿಜೆಪಿ ಸಂಸದ ರಾಮ್ ಸ್ವರೂಪ್ ಶರ್ಮಾ ಸಾವು; ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಸಂಸದ 62 ವರ್ಷದ ರಾಮ್ ಸ್ವರೂಪ್ ಶರ್ಮಾ ಅವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಶವದ ಬಳಿ ಯಾವುದೇ ಸೂಸೈಡ್ ನೋಟ್ ಸಿಕ್ಕಿಲ್ಲ. ಅವರು ಪತ್ನಿ ಹಾಗೂ ಮೂವರು ಮಕ್ಕಳನ್ನ ಅಗಲಿದ್ದಾರೆ.

news18
Updated:March 17, 2021, 10:58 AM IST
Ram Swaroop Sharma - ಬಿಜೆಪಿ ಸಂಸದ ರಾಮ್ ಸ್ವರೂಪ್ ಶರ್ಮಾ ಸಾವು; ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ
ರಾಮ್ ಸ್ವರೂಪ್ ಶರ್ಮಾ
  • News18
  • Last Updated: March 17, 2021, 10:58 AM IST
  • Share this:
ನವದೆಹಲಿ(ಮಾ. 17): ಹಿಮಾಚಲ ಪ್ರದೇಶದ ಬಿಜೆಪಿ ಸಂಸದ ರಾಮ್ ಸ್ವರೂಪ್ ಶರ್ಮಾ ಸಾವನ್ನಪ್ಪಿದ್ದಾರೆ. ದೆಹಲಿಯ ತಮ್ಮ ನಿವಾಸದಲ್ಲಿ ಅವರ ಮೃತ ದೇಹ ಇಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಂಡಿ ಕ್ಷೇತ್ರದ ಸಂಸದರಾಗಿದ್ದ 62 ವರ್ಷದ ರಾಮ್ ಸ್ವರೂಪ್ ಶರ್ಮಾ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಮನೆಯೊಳಗೆ ಕೊಠಡಿಯ ಬಾಗಿಲಿಗೆ ಚಿಲಕ ಹಾಕಿಕೊಂಡು ಅವರು ನೇಣು ಬಿಗಿದುಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದೇ ವೇಳೆ, ಶರ್ಮಾ ಸಾವನ್ನಪ್ಪಿದ ಬೆನ್ನಲ್ಲೇ ಬಿಜೆಪಿಯ ಸಂಸದೀಯ ಸಭೆಯನ್ನು ರದ್ದುಪಡಿಸಲಾಗಿದೆ.

ರಾಮ್ ಸ್ವರೂಪ್ ಶರ್ಮಾ ಅವರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ಧಾರೆ. ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯವರಾದ ಶರ್ಮಾ ಅವರು ಮಂಡಿ ಲೋಕಸಭಾ ಕ್ಷೇತ್ರದಿಂದ 2014 ಮತ್ತು 2019ರಲ್ಲಿ ಎರಡು ಬಾರಿ ಬಿಜೆಪಿ ಟಿಕೆಟ್​ನಿಂದ ಸ್ಪರ್ಧಿಸಿ ಗೆದ್ದಿದ್ದರು. ವಿದೇಶಾಂಗ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ಸದಸ್ಯರಾಗಿಯೂ ಅವರು ಜವಾಬ್ದಾರಿ ನಿಭಾಯಿಸಿದ್ದಾರೆ.

ಇದನ್ನೂ ಓದಿ: Deadly Shootout - ಅಮೆರಿಕದ ಮಸಾಜ್ ಪಾರ್ಲರ್​ಗಳಲ್ಲಿ ಗುಂಡಿನ ದಾಳಿ; ಎಂಟು ಮಂದಿ ಬಲಿ

ಕಳೆದ ತಿಂಗಳಷ್ಟೇ ಮುಂಬೈನ ಹೋಟೆಲ್​ವೊಂದರಲ್ಲಿ ದಾದ್ರಾ ನಾಗರ್ ಹವೇಲಿ ಕೇಂದ್ರಾಡಳಿತ ಪ್ರದೇಶದ ಸಂಸದ 58 ವರ್ಷದ ಮೋಹನ್ ದೇಳ್ಕರ್ ಆತ್ಮಹತ್ಯೆ ಮಾಡಿಕೊಂಡಿದ್ದರು. ನಾಲ್ಕು ಪುಟಗಳ ಪತ್ರ ಬರೆದಿಟ್ಟಿದ್ದ ಅವರು ಒಬ್ಬ ಹಿರಿಯ ರಾಜಕಾರಣಿ ಸೇರಿದಂತೆ ಹಲವು ಮಂದಿಯನ್ನು ತಮ್ಮ ಸಾವಿಗೆ ಕಾರಣವೆಂದು ದೂಷಿಸಿದ್ದರು.
Published by: Vijayasarthy SN
First published: March 17, 2021, 10:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories