• Home
  • »
  • News
  • »
  • national-international
  • »
  • BJP MP Janardan Mishra: ಮದ್ಯ ಕುಡಿಯಿರಿ, ಗಾಂಜಾ ಹೊಡೆಯಿರಿ, ಆದ್ರೆ ನೀರು ಸೇವ್ ಮಾಡಿ! ಬಿಜೆಪಿ ಸಂಸದನ ವಿಚಿತ್ರ ಹೇಳಿಕೆ

BJP MP Janardan Mishra: ಮದ್ಯ ಕುಡಿಯಿರಿ, ಗಾಂಜಾ ಹೊಡೆಯಿರಿ, ಆದ್ರೆ ನೀರು ಸೇವ್ ಮಾಡಿ! ಬಿಜೆಪಿ ಸಂಸದನ ವಿಚಿತ್ರ ಹೇಳಿಕೆ

ಬಿಜೆಪಿ ಸಂಸದ ಜನಾರ್ದನ ಮಿಶ್ರಾ

ಬಿಜೆಪಿ ಸಂಸದ ಜನಾರ್ದನ ಮಿಶ್ರಾ

"ಮದ್ಯವನ್ನಾದ್ರೂ ಸೇವಿಸಿ, ಗುಟ್ಕಾವನ್ನಾದರೂ ತಿನ್ನಿ, ಗಾಂಜಾ ಹೊಡೆಯಿರಿ, ಥಿನ್ನರ್ ಅಥವಾ ಸೊಲ್ಯೂಷನ್ ವಾಸನೆಯನ್ನಾದರೂ ಸೇವಿಸಿ, ಆದರೆ ನೀರಿನ ಮಹತ್ವವನ್ನು ಅರ್ಥಮಾಡಿಕೊಳ್ಳಿ"!. ಹೀಗಂತ ಬಿಜೆಪಿ ಸಂಸದ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

  • News18 Kannada
  • Last Updated :
  • Madhya Pradesh, India
  • Share this:

    ಮಧ್ಯಪ್ರದೇಶ: ರಾಜಕೀಯ ವ್ಯಕ್ತಿಗಳಿಗೆ ಮಾತೇ ಬಂಡವಾಳ. ತಮ್ಮ ಮಾತಿನ ಮೂಲಕವೇ ಕನರ ಮನಸ್ಸು ಗೆದ್ದು ಬಿಡುತ್ತಾರೆ. ವೋಟು ಗಿಟ್ಟಿಸಿಕೊಳ್ತಾರೆ. ಆದ್ರೆ ಮಾತನಾಡುವ ಭರದಲ್ಲಿ ಏನೇನೋ ಮಾತನಾಡಿ ಬಿಡುತ್ತಾರೆ. ಹೌದು ಮಧ್ಯಪ್ರದೇಶದ (Madya Pradesh) ರೇವಾ ಕ್ಷೇತ್ರದ ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ (BJP MP Janardan Mishra) ಮಾತನಾಡುವಾಗ ಎಡವಟ್ಟು ಮಾಡಿಕೊಂಡಿದ್ದಾರೆ. ಅದನ್ನು ಕೇಳಿ ಎಲ್ಲರೂ ಇದೇನಪ್ಪಾ ಎಂದು ಆಶ್ಚರ್ಯಗೊಂಡಿದ್ದಾರೆ. ನೀರನ್ನು ಸಂರಕ್ಷಣೆ  (Save Water) ಮಾಡಿ ಎಂದು ಹೇಳುವಾಗ, ಜನ ಮದ್ಯ (Alcohol) ಕುಡಿಯಿರಿ, ಗಾಂಜಾ ಹೊಡೆಯಿರಿ, ತಂಬಾಕು ತಿನ್ನಿ, ಆದ್ರೆ ನೀರನ್ನು ಸಂರಕ್ಷಣೆ ಮಾಡುವುದನ್ನು ಮಾತ್ರ ಮರೆಯಬೇಡಿ ಎಂದು ಹೇಳಿದ್ದಾರೆ. ಇದನ್ನು ಕೇಳಿ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.


    ರೇವಾದ ಕೃಷ್ಣರಾಜ್ ಕಪೂರ್ ಸಭಾಂಗಣದಲ್ಲಿ ನಡೆದ ಕಾರ್ಯಾಗಾರದಲ್ಲಿ ರೇವಾ ಕ್ಷೇತ್ರದ ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ಈ ರೀತಿ ವಿಚಿತ್ರವಾದ ಹೇಳಿಕೆ ನೀಡಿದ್ದಾರೆ. ಜನಾರ್ದನ ಮಿಶ್ರಾ ಅವರ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


    ಜನಾರ್ದನ ಮಿಶ್ರಾ ಅವರು ಹೇಳಿದ್ದೇನು?
    'ನೀರಿನ ಸಂರಕ್ಷಣೆ ವಿಚಾರದಲ್ಲಿ ಚೌಕಾಸಿ ಮಾಡಬಾರದು. ಭೂಮಿಯು ನೀರಿಲ್ಲದೆ ಒಣಗಿ ಹೋಗುತ್ತಿದೆ. ಅದನ್ನು ಉಳಿಸುವುದು ಅಗತ್ಯವಾಗಿದೆ. ಮದ್ಯವನ್ನಾದ್ರೂ ಸೇವಿಸಿ, ಗುಟ್ಕಾವನ್ನಾದರೂ ತಿನ್ನಿ, ಗಾಂಜಾ ಹೊಡೆಯಿರಿ, ಥಿನ್ನರ್ ಅಥವಾ ಸೊಲ್ಯೂಷನ್ ವಾಸನೆಯನ್ನಾದರೂ ಸೇವಿಸಿ, ಆದರೆ ನೀರಿನ ಮಹತ್ವವನ್ನು ಅರ್ಥಮಾಡಿಕೊಳ್ಳಿ.


    ಹೆಚ್ಚಿನ ಜಲಾಶಯಗಳು ಬರಿದಾಗುತ್ತಿವೆ. ಬೋರ್‍ವೆಲ್‍ಗಳು ಮತ್ತು ಟ್ಯೂಬ್‍ವೆಲ್‍ಗಳನ್ನು ತೋಡುವ ಮೂಲಕ ಜನರು ಅಂತರ್ಜಲವನ್ನು ಖಾಲಿ ಮಾಡುತ್ತಿದ್ದಾರೆ' ಎಂದು ರೇವಾ ಕ್ಷೇತ್ರದ ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ಹೇಳಿದ್ದಾರೆ.


    ಇದನ್ನೂ ಓದಿ: LK Advani: 'ಬಿಜೆಪಿ ಭೀಷ್ಮ' ಅಡ್ವಾಣಿಗೆ 95ನೇ ಹುಟ್ಟುಹಬ್ಬದ ಸಂಭ್ರಮ, ಶುಭ ಹಾರೈಸಿದ ಪಿಎಂ ಮೋದಿ! 


    ಮುಂದಿನ ಪೀಳಿಗೆಗೆ ನೀರು ಇರಲ್ಲ
    ರೇವಾ ಕ್ಷೇತ್ರದ ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ಜಲ ಸಂರಕ್ಷಣೆ ಬಗ್ಗೆ ಒತ್ತಿ ಒತ್ತಿ ಹೇಳಿದ್ದಾರೆ. ನೀವು ಇಂದು ನೀರು ಉಳಿಸದಿದ್ದರೆ, ಮುಂದಿನ ಪೀಳಿಗೆ ನೀರು ಇರಲ್ಲ ಎಂದು ಹೇಳಿದ್ದಾರೆ.ನೀರಿನಲ್ಲಿ ಹೂಡಿಕೆ ಮಾಡಬೇಕು. ನೀವು ಎಲ್ಲಿ ಬೇಕಾದರೂ ಹಣವನ್ನು ವ್ಯರ್ಥ ಮಾಡಿ. ಆದರೆ ಜಲ ಸಂರಕ್ಷಣೆಯಲ್ಲಿ ಹೂಡಿಕೆ ಮಾಡಿ. ಇಲ್ಲ ಅಂದ್ರೆ ತುಂಬಾ ಕಷ್ಟ ಆಗುತ್ತೆ ಎಂದು ಹೇಳಿದ್ದಾರೆ.


    madya pradesh bjp mp janardan mishra, water conservation, janardan mishra says drink alcohol, save water, ಮದ್ಯ ಕುಡಿಯಿರಿ, ಗಾಂಜಾ ಹೊಡೆಯಿರಿ, ಆದ್ರೆ ನೀರು ಸೇವ್ ಮಾಡಿ, ಬಿಜೆಪಿ ಸಂಸದನ ವಿಚಿತ್ರ ಮಾತು, kannada news, karnataka news,
    ಬಿಜೆಪಿ ಸಂಸದ ಜನಾರ್ದನ ಮಿಶ್ರಾ


    ಪರಿಸರಕ್ಕಾಗಿ ಹಣ ವ್ಯಯಿಸಿ
    ಅಮಲು ಹೆಚ್ಚಿಸಿಕೊಳ್ಳಲು ಪದಾರ್ಥಗಳ ಮೇಲೆ ಹಣ ಹೂಡುತ್ತೀರಿ. ವೆಚ್ಚ ಮಾಡುತ್ತೀರಿ. ಅದನ್ನು ಬಿಟ್ಟು ಬಿಡಿ ಎಂದು ಸಲಹೆ ನೀಡಿದ್ರು. ಆದ್ರೆ ಜನ ನಮ್ಮ ಮಾತು ಕೇಳಿಲ್ಲ ಅಂತ ಅದನ್ನು ಅವರು ಹೇಳಿದ್ರು. ನೀವು ಯಾವುದಕ್ಕಾದ್ರೂ ಹಣ ವ್ಯಯಿಸಿ. ಆದ್ರೆ ಒಂದು ಭಾಗವನ್ನು ಪರಿಸರಕ್ಕಾಗಿ ಎತ್ತಿ ಇಡಿ ಎಂದು ಹೇಳಿದ್ರು.


    ಯಾವುದೇ ಸರ್ಕಾರವು ನೀರಿನ ತೆರಿಗೆಯನ್ನು ಮನ್ನಾ ಮಾಡಲು ಘೋಷಿಸಿದರೆ ನಾವು ನೀರಿನ ತೆರಿಗೆಯನ್ನು ಪಾವತಿಸುತ್ತೇವೆ. ಆದರೆ ನೀವು ವಿದ್ಯುತ್ ಬಿಲ್ ಸೇರಿದಂತೆ ಉಳಿದ ತೆರಿಗೆಗಳನ್ನು ಮನ್ನಾ ಮಾಡಬಹುದು ಎಂದು  ತಿಳಿಸಿ ಹೇಳಿದರು.


    ಇದನ್ನೂ ಓದಿ: Himachal Pradesh: ಚುನಾವಣೆಗೂ ಮುನ್ನ ಕಾಂಗ್ರೆಸ್​ಗೆ ಬಿಗ್ ಶಾಕ್, 26 ಕೈ ನಾಯಕರು ಬಿಜೆಪಿಗೆ ಸೇರ್ಪಡೆ! 


    ನೀರು ಸಂರಕ್ಷಣೆಯ ಬಗ್ಗೆ ರೇವಾ ಕ್ಷೇತ್ರದ ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದಾರೆ ಅದು ಸರಿ. ಆದ್ರೆ ಅದರ ಜೊತೆ ನೀಡಿರುವ ವಿಚಿತ್ರ ಹೇಳಿಕೆಗಳು, ವಿರೋಧ ಮಾಡುವಂತೆ ಆಗಿವೆ.

    Published by:Savitha Savitha
    First published: