Viral Video: ಬರಿಗೈಲಿ ಟಾಯ್ಲೆಟ್ ಕ್ಲೀನ್ ಮಾಡಿದ ಬಿಜೆಪಿ ಸಂಸದ! ವಿಡಿಯೋ ಫುಲ್ ವೈರಲ್

ಬಿಜೆಪಿ ಸಂಸದರ ಓರ್ವರು ಬರಿಗೈಲಿ ಶೌಚಾಲಯ ಸ್ವಚ್ಛಗೊಳಿಸಿದ ವೈರಲ್ ಆಗಿರುವ ವಿಡಿಯೋ ಇಲ್ಲಿದೆ.

ವಿಡಿಯೋ ದೃಶ್ಯ

ವಿಡಿಯೋ ದೃಶ್ಯ

  • Share this:
ಬಿಜೆಪಿ ಸಂಸದರೊಬ್ಬರು ಬರಿಗೈಲಿ ಶೌಚಾಲಯವನ್ನು ಸ್ವಚ್ಛಗೊಳಿಸಿದ್ದಾರೆ. ಸದ್ಯ ಈ ವಿಡಿಯೋ ಭಾರೀ ವೈರಲ್ (Viral Video) ಆಗಿದೆ. ಬಾಲಕಿಯರ ಹಾಸ್ಟೇಲ್​ನ ಶೌಚಾಲಯವನ್ನು ಮಧ್ಯ ಪ್ರದೇಶ ಬಿಜೆಪಿ ಸಂಸದ (Madhya Pradesh BJP MP Viral Video) ಜನಾರ್ಧನ್ ಮಿಶ್ರಾ ಬರಿ ಕೈಯಲ್ಲಿ ಸ್ವಚ್ಛಗೊಳಿಸಿದ್ದಾರೆ.  ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿರುವ ಸ್ವಚ್ಛತೆ ಮತ್ತು ಸೇವೆಗೆ ಸಂಬಂಧಿಸಿದ ಯೋಜನೆಗಾಗಿ ಬರಿಗೈಲಿ ಬಾಲಕಿಯರ ಶೌಚಾಲಯವನ್ನು ಸ್ವಚ್ಛಗೊಳಿಸಿದ್ದಾಗಿ ಮಧ್ಯ ಪ್ರದೇಶ ಬಿಜೆಪಿ ಸಂಸದ ಜನಾರ್ಧನ್ ಮಿಶ್ರಾ (BJP MP Janardan Mishra) ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವಾದ ಸೆಪ್ಟೆಂಬರ್ 17 ರಿಂದ ಬಿಜೆಪಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿದೆ. ಈ ಅಭಿಯಾನದ ಅಂಗವಾಗಿ ಬಿಜೆಪಿ ಸಂಸದ ಜನಾರ್ಧನ್ ಮಿಶ್ರಾ ಹೀಗೆ ಶೌಚಾಲಯವನ್ನು ಬರಿಗೈಲಿ ಸ್ವಚ್ಛಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Congress President Election: ಗಾಂಧಿ ಕುಟುಂಬದ ಯಾರೂ ಕಾಂಗ್ರೆಸ್ ಅಧ್ಯಕ್ಷರಾಗಲ್ಲ; ಅಶೋಕ್ ಗೆಹ್ಲೋಟ್

ನಿರಂತರ ಸ್ವಚ್ಛತಾ ಅಭಿಯಾನ
ವರದಿಗಳ ಪ್ರಕಾರ ಬಿಜೆಪಿಯ ಯುವ ಘಟಕವು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾದ ಸೆಪ್ಟೆಂಬರ್ 17 ರಿಂದ ಮಹಾತ್ಮ ಗಾಂಧಿಯವರ ಜನ್ಮದಿನವಾದ ಅಕ್ಟೋಬರ್ 2 ರವರೆಗೆ ಸ್ವಚ್ಛತಾ ಅಭಿಯಾನವನ್ನು ನಡೆಸುತ್ತಿದೆ. ಈ ಉಪಕ್ರಮದ ಭಾಗವಾಗಿ ಸಂಸದ ಜನಾರ್ಧನ್ ಮಿಶ್ರಾ ಅವರು ಮರ ನೆಡುವ ಅಭಿಯಾನದಲ್ಲಿ ಭಾಗವಹಿಸಲು ಶಾಲೆಗೆ ಭೇಟಿ ನೀಡಿದ್ದರು.

ರೇವಾ ಕ್ಷೇತ್ರದ ಸಂಸದರಾದ ಜನಾರ್ಧನ್ ಮಿಶ್ರಾ ತಮ್ಮ ಭೇಟಿಯ ವೇಳೆ ಬಾಲಕಿಯರ ಶಾಲೆಯಲ್ಲಿ ಶೌಚಾಲಯದ ಅನೈರ್ಮಲ್ಯವನ್ನು ಗಮನಿಸಿ ಅದನ್ನು ಬರಿಗೈಯಲ್ಲಿ ಸ್ವಚ್ಛಗೊಳಿಸಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: Russia: ಯುದ್ಧ ಸೇರಲು ಪುಟಿನ್ ಕರೆ; ದೇಶ ಬಿಡಲು ಐಡಿಯಾಕ್ಕಾಗಿ ರಷ್ಯನ್ನರಿಂದ ಗೂಗಲ್ ಮೊರೆ!

ನಂತರ ಮಾತನಾಡಿದ ಮಿಶ್ರಾ, ಸ್ವಚ್ಛತೆ ಮತ್ತು ಶುಚಿತ್ವವನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು. ಇದು ಮಹಾತ್ಮ ಗಾಂಧಿ ಮತ್ತು ಪ್ರಧಾನಿ ಮೋದಿಯವರು ನೀಡಿದ ಸಂದೇಶ. ಇಂತಹ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದು ಇದೇ ಮೊದಲಲ್ಲ ಎಂದು ಅವರು ತಿಳಿಸಿದರು.
Published by:ಗುರುಗಣೇಶ ಡಬ್ಗುಳಿ
First published: