Taj Mahal ನಮ್ಮದು ಎಂದ ಬಿಜೆಪಿ ಸಂಸದೆ! ಈ ಬಗ್ಗೆ ದಾಖಲೆ ಕೊಡುತ್ತಾರಂತೆ ದಿಯಾ ಕುಮಾರಿ
"ಆಗ್ರಾದಲ್ಲಿ ತಾಜ್ ಮಹಲ್ ನಿರ್ಮಿಸಲಾದ ಭೂಮಿ ತಮ್ಮದು" ಎಂದು ಬಿಜೆಪಿ ಸಂಸದೆ ಹೇಳಿಕೊಂಡಿದ್ದಾರೆ. "ನಮ್ಮಿಂದ ಯಾವುದೇ ಸರ್ಕಾರ ಭೂಮಿ ತೆಗೆದುಕೊಂಡರೆ ಪರಿಹಾರ ಕೊಡುತ್ತದೆ. ಆದರೆ ಈ ಪ್ರಕರಣದಲ್ಲಿ ಮೊಘಲರು ಪರಿಹಾರ ನೀಡಿಲ್ಲ" ಅಂತ ಅವರು ಆರೋಪಿಸಿದ್ದಾರೆ.
ವಿಶ್ವದ ಅದ್ಭುತಗಳಲ್ಲಿ (World Wonders) ಒಂದಾದ, ಭಾರತದ ಪ್ರಸಿದ್ಧ ಪ್ರವಾಸಿ ತಾಣ (Tourist Place) ತಾಜ್‌ಮಹಲ್ (Taj Mahal) ಬಗ್ಗೆ ಇದೀಗ ಭಾರೀ ಸುದ್ದಿಯಾಗುತ್ತಿದೆ. ಈ ಸ್ಮಾರಕವು (Monument) ಹಳೆಯ ಶಿವ ದೇವಾಲಯವಾಗಿದೆ (Shiva Temple) ಎಂದು ಕೆಲ ಇತಿಹಾಸಕಾರರು (Historians) ಮತ್ತು ಹಿಂದೂಪರ ಸಂಘಟನೆಯವರು ಹೇಳುತ್ತಿದ್ದಾರೆ. ಸಂತರು ಹಾಗೂ ಅನೇಕ ಇತಿಹಾಸಕಾರರು ಇದು ತಾಜ್‌ಮಹಲ್ ಅಲ್ಲ ತೇಜೋ ಮಹಾಲಯ (Tejo Mahalaya) ಅಂದರೆ ಶಿವ ದೇವಾಲಯ ಎಂದು ಹೇಳುತ್ತಿದ್ದಾರೆ. ಆದರೆ ಕೆಲ ಇತಿಹಾಸಕಾರರು ಇದನ್ನು ಮೊಘಲ್ ಚಕ್ರವರ್ತಿ (Mughal Emperor) ಷಹಜಹಾನ್ ನಿರ್ಮಿಸಿದ ಎಂದು ನಂಬುತ್ತಾರೆ. ಹಿಂದೂ ದೇವತೆಗಳ ವಿಗ್ರಹಗಳು (Hindu Gods Statue) ಇದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತಾಜ್ ಮಹಲ್‌ನಲ್ಲಿ ಮುಚ್ಚಿರುವ 22 ಬಾಗಿಲುಗಳನ್ನು (Door) ತೆರೆದು ತನಿಖೆ ಮಾಡಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನ ನೀಡುವಂತೆ ಕೋರಿ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠದಲ್ಲಿ ಮನವಿ ಸಲ್ಲಿಸಲಾಗಿತ್ತು. ಆದರೆ ಕೋರ್ಟ್ ಅದನ್ನು ವಜಾ ಮಾಡಿತ್ತು. ಇದೀಗ ಬಿಜೆಪಿ ಸಂಸದೆಯೊಬ್ಬರು ತಾಜ್‌ಮಹಲ್ ನಮಗೆ ಸೇರಿದ್ದು, ಈ ಬಗ್ಗೆ ನನ್ನ ಬಳಿ ಅಗತ್ಯ ದಾಖಲೆಗಳು ಇವೆ ಎಂದಿದ್ದಾರೆ.
“ತಾಜ್ ಮಹಲ್ ನಮ್ಮ ಪೂರ್ವಜರಿಗೆ ಸೇರಿದ್ದು” ಎಂದ ಬಿಜೆಪಿ ಸಂಸದೆ
ರಾಜಸ್ಥಾನದ ಬಿಜೆಪಿ ಸಂಸದೆ ದಿಯಾ ಕುಮಾರಿ ತಾಜ್ ಮಹಲ್ ಕುರಿತಾಗಿ ಹೊಸ ಹೇಳಿಕೆಯೊಂದನ್ನು ನೀಡಿದ್ದಾರೆ. ತಾಜ್ ಮಹಲ್ ಇರುವ ಭೂಮಿ ನಮ್ಮ ಪೂರ್ವಜರಿಗೆ ಸೇರಿದ್ದು, ಆದರೆ ಅದನ್ನು ಅಂದು ಮೊಘಲರು ಒತ್ತುವರಿ ಮಾಡಿಕೊಂಡಿದ್ದರು. ಈ ಭೂಮಿಯಲ್ಲಿ ಮೊದಲು ಅರಮನೆ ಇತ್ತು, ಷಹಜಹಾನ್ ಈ ಭೂಮಿಯನ್ನು ಇಷ್ಟಪಟ್ಟಾಗ, ಅದನ್ನು ಮಹಾರಾಜರಿಂದ ಪಡೆದುಕೊಂಡರು. ಜೈಪುರ ರಾಜಮನೆತನದ ಪುಸ್ತಕಗಳಲ್ಲಿ ಭೂಮಿಗೆ ಸಂಬಂಧಿಸಿದ ದಾಖಲೆಗಳಿವೆ. ಕೋರ್ಟ್ ಹೇಳಿದರೆ ಅವುಗಳನ್ನು ಹಾಜರುಪಡಿಸುತ್ತೇವೆ” ಅಂತ ಹೇಳಿದ್ದಾರೆ.
ಯಾರು ಈ ದಿಯಾ ಕುಮಾರಿ?
ದಿಯಾ ಕುಮಾರಿ ಮೂಲತಃ ರಾಜಸ್ತಾನದ ಜೈಪುರ ರಾಜಮನೆತನಕ್ಕೆ ಸೇರಿದವರು. ಅವರು ಜೈಪುರದದ ಕೊನೆಯ ಮಹಾರಾಜ 2ನೇ ಮಾನ್ಸಿಂಗ್ ಅವರ ಮೊಮ್ಮಗಳು. ಹಾಲಿ ರಾಜಸ್ಥಾನದ ರಾಜಸಮಂದ್ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಸಂಸದೆ. ಇದೀಗ ದಿಯಾ ಕುಮಾರಿ ಆಗ್ರಾದಲ್ಲಿ ತಾಜ್ ಮಹಲ್ ನಿರ್ಮಿಸಲಾದ ಭೂಮಿ ತಮ್ಮದು ಎಂದು ಹೇಳಿಕೊಂಡಿದ್ದಾರೆ. ನಮ್ಮಿಂದ ಯಾವುದೇ ಸರ್ಕಾರ ಭೂಮಿ ತೆಗೆದುಕೊಂಡರೆ ಪರಿಹಾರ ಕೊಡುತ್ತದೆ. ಆದರೆ ಈ ಪ್ರಕರಣದಲ್ಲಿ ಮೊಘಲರು ಪರಿಹಾರ ನೀಡಿಲ್ಲ ಎಂದು ಕೇಳಿದ್ದೇನೆ. ಆಗ ಮೇಲ್ಮನವಿ ಸಲ್ಲಿಸುವ ಕಾನೂನು ಇರಲಿಲ್ಲ ಅಂತ ದಿಯಾ ಕುಮಾರಿ ಹೇಳಿದ್ದಾರೆ.
ಇತಿಹಾಸಕಾರ ರಾಣಾ ಸಫಾವಿ ಅವರು ಟ್ವಿಟರ್‌ನಲ್ಲಿ ಈ ಕುರಿತು ಹೀಗೆ ಹೇಳಿದ್ದು, ಷಹಜಹಾನ್‌ನಿಂದ ರಾಜಾ ಜೈ ಸಿಂಗ್‌ವರೆಗೆ ಫರ್ಮಾನ್ (ರಾಜನ ಆದೇಶ) ಪ್ರತಿಗಳನ್ನು ಹಂಚಿಕೊಂಡಿದ್ದಾರೆ. ತಾಜ್ ಮಹಲ್ ಸಿಂಗ್‌ಗೆ ಭೂಮಿಗೆ ಪ್ರತಿಯಾಗಿ ಜೈ ಎಂದು ಬರೆದು ನಾಲ್ಕು ಹವೇಲಿಗಳನ್ನು ನೀಡಲಾಯಿತು. "ರಾಜಾ ಜೈ ಸಿಂಗ್ ಅವರು ಉಚಿತವಾಗಿ ಭೂಮಿಯನ್ನು ದಾನ ಮಾಡಲು ಸಿದ್ಧರಾಗಿದ್ದರು. ಅದೇ ಸಮಯದಲ್ಲಿ, ರಾಜಾ ಮಾನ್ ಸಿಂಗ್ ಅವರ ಭವನಕ್ಕೆ ಬದಲಾಗಿ ಷಹಜಹಾನ್ ನಾಲ್ಕು ಹವೇಲಿಗಳನ್ನು ನೀಡಿದರು. ಈ ಆದೇಶವನ್ನು ಸಿಟಿ ಪ್ಯಾಲೇಸ್ ಮ್ಯೂಸಿಯಂನಲ್ಲಿ ಮುಚ್ಚಲಾಗಿದೆ” ಅಂತ ಟ್ವೀಟ್ ಮಾಡಿದ್ದಾರೆ.
ತಾಜ್ ಮಹಲ್ ಕುರಿತಾದ ವಿವಾದವೇನೂ ಇದೇ ಮೊದಲಲ್ಲ,. 2017ರಲ್ಲಿ ತಾಜ್‌ಮಹಲ್‌ನ ಹೆಸರನ್ನು ಬದಲಾಯಿಸಬೇಕೆಂಬ ಬೇಡಿಕೆಯೂ ಇತ್ತು. ಆಗ ಬಿಜೆಪಿ ನಾಯಕ ವಿನಯ್ ಕಟಿಯಾರ್ ಅವರು ತಾಜ್ ಮಹಲ್ ಹೆಸರನ್ನು ಬದಲಾಯಿಸುವಂತೆ ಒತ್ತಾಯಿಸಿದ್ದರು. ಇದನ್ನು ಒಬ್ಬ ಹಿಂದೂ ದೊರೆ ನಿರ್ಮಿಸಿದ ಎಂದು ಹೇಳಿದ್ದರು. ಆ ವೇಳೆ ಈ ವಿವಾದ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಹಲವರು ಬೆಂಬಲಿಸಿದ್ದರು.
Published by:Annappa Achari
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ