ಸೋಷಿಯಲ್ ಮೀಡಿಯಾದಲ್ಲಿ ರಾಹುಲ್ ಗಾಂಧಿ ಕಾಲೆಳೆದ ಬಿಜೆಪಿ


Updated:April 25, 2018, 9:10 AM IST
ಸೋಷಿಯಲ್ ಮೀಡಿಯಾದಲ್ಲಿ ರಾಹುಲ್ ಗಾಂಧಿ ಕಾಲೆಳೆದ ಬಿಜೆಪಿ

Updated: April 25, 2018, 9:10 AM IST
ನ್ಯೂಸ್ 18 ಕನ್ನಡ

ನವದೆಹಲಿ(ಏ.25): ಕರ್ನಾಟಕ ಚುನಾವಣೆ ಹೊತ್ತಲ್ಲೇ ಬಿಜೆಪಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಕಾಲೆಳೆದಿದೆ. ಸಂಸತ್​ನಲ್ಲಿ ರಾಹುಲ್ ಮಾತಾಡುವಾಗ ತೊದಲಿಸಿದ್ದು ಹಾಗೂ ವಿಶ್ವೇಶ್ವರಯ್ಯ ಅವರ ಹೆಸರನ್ನ ಹೇಳಲಾಗದೇ ಒದ್ದಾಡಿದ್ದನ್ನು ಸೋಷಿಯಲ್ ಮೀಡಿಯಾದಲ್ಲಿ ತೇಲಿಬಿಟ್ಟಿದೆ. ಲೇವಡಿ ಮಾಡಿ ಟ್ವೀಟ್ ಕೂಡಾ ಮಾಡಿದೆ.

ಪದೇ ಪದೇ ಮೋದಿ ಹಾಗೂ ರಾಹುಲ್ ಗಾಂಧಿ ನಡುವಿನ ತಿಕ್ಕಾಟ ಜೋರಾಗ್ತಿದೆ, ಈ ನಡುವೆ ಲೋಕಸಭೆಯಲ್ಲಿ ಮಾತಾಡುವಾಗ ರಾಹುಲ್ ಗಾಂಧಿ ತೊದಲಿಸಿದ್ದನ್ನು ಲೇವಡಿ ಮಾಡಿ ಬಿಜೆಪಿ ಕಾಲೆಳೆದಿದೆ. ಪುರುಷ ಸ್ಪೀಕರ್​ ಅವರನ್ನ ರಾಹುಲ್, ಮೇಡಂ ಸ್ಪೀಕರ್ ಎಂಬ ಬಾಯ್ತಪ್ಪಿ ಹೇಳಿದ್ದನ್ನು ಉಲ್ಲೇಖಿಸಿ ಲೇವಡಿ ಮಾಡಿದೆ.ಇನ್ನು ಕರ್ನಾಟಕದಲ್ಲೇ ಒಮ್ಮೆ ಮಾತನಾಡುವಾಗ ಸರ್. ಎಂ ವಿಶ್ವೇಶ್ವರಯ್ಯ ಅವರ ಹೆಸನ್ನು ಹೇಳಲಾಗದೇ ಒದ್ದಾಡಿದ್ದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ಮಾನ ಕಳೆದಿದೆ.

Loading...


ಇದರ ಜೊತೆ ಇನ್ನೊಂದಿಷ್ಟು ಲೇವಡಿ ಮಾಡಿ ಟ್ವೀಟ್ ಮಾಡಿದೆ ಬಿಜೆಪಿ. ಈ ಟ್ವೀಟ್ 1600 ಬಾರಿ ರಿ ಟ್ವೀಟ್ ಆಘಿದೆ. 3200 ಲೈಕ್ಸ್ ಬಂದಿ . ಇದನ್ನೆಲ್ಲಾ ಮತ್ತೆ ಟ್ವೀಟ್ ಮಾಡಿ ರಾಹುಲ್ ನೀವು ಮಾತಾಡಿ ಸಖತ್ ಜಮಾ ಇರುತ್ತೆ ಅಂತಾ ಕಾಲೆಳೆದಿದೆ. ಸಂಸದ ರಾಜೀವ್ ಚಂದ್ರಶೇಖರ್ ಕೂಡಾ ಕಾಮಿಡಿ ಮಾಡಿದ್ದಾರೆ.
First published:April 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ