ಸಿಂಧಿಯಾಗೆ ಜೀವ ಬೆದರಿಕೆಯೊಡ್ಡಿದ ಬಿಜೆಪಿ ಶಾಸಕಿಯ ಮಗ: ಎಫ್​ಐಆರ್​ ದಾಖಲು


Updated:September 4, 2018, 9:58 AM IST
ಸಿಂಧಿಯಾಗೆ ಜೀವ ಬೆದರಿಕೆಯೊಡ್ಡಿದ ಬಿಜೆಪಿ ಶಾಸಕಿಯ ಮಗ: ಎಫ್​ಐಆರ್​ ದಾಖಲು
ಜ್ಯೋತಿರಾದಿತ್ಯ ಸಿಂಧಿಯಾ(ಎಡ), ಶಾಸಕಿ ಉಮಾದೇವಿ ಮಗ ಪ್ರಿನ್ಸ್​ದೀಪ್​ ಖಟೀಕ್​(ಬಲ)
  • Share this:
ನ್ಯೂಸ್​ 18 ಕನ್ನಡ

ಭೋಪಾಲ್​(ಸೆ.04): ಮಧ್ಯಪ್ರದೇಶದಲ್ಲಿ ಚುನಾವಣೆ ಸಮೀಪಿಸುತ್ತಿದ್ದು, ರಾಜಕೀಯ ನಾಯಕರ ವಾಗ್ದಾಳಿ ಮುಂದುವರೆದಿದೆ. ಈ ನಡುವೆ ಹಟಾ ಕ್ಷೇತ್ರದ ಶಾಸಕಿ ಉಮಾದೇವಿ ಮಗ ಪ್ರಿನ್ಸ್​ದೀಪ್​ ಖಟೀಕ್​ ಪೇಸ್​ಬುಕ್​ನಲ್ಲಿ ಪೋಸ್ಟ್​ ಒಂದನ್ನು ಮಾಡುತ್ತಾ ಕಾಂಗ್ರೆಸ್​ ನಾಯಕ ಜ್ಯೋತಿರಾದಿತ್ಯ ಸಿಂಧಿಯಾರನ್ನು ಗುಂಡಿಟ್ಟು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ.

ಜೀವ ಬೆದರಿಕೆ ಒಡ್ಡಿರುವ ಈ ಪೋಸ್ಟ್​ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, ಕಾಂಗ್ರೆಸ್​ ನಾಯಕರು ಆ ಕೂಡಲೇ ಪೊಲೀಸ್​ ಠಾಣೆಗೆ ತೆರಳಿ ಪ್ರಿನ್ಸ್​ದೀಪ್​ ವಿರುದ್ಧ ದೂರು ನೀಡಿದ್ದಾರೆ. ಈ ಸಂದರ್ಭದಲ್ಲಿ ಎಫ್​ಐಆರ್​ ದಾಖಲಿಸಿ, ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಸೆಕ್ಷನ್​ 294, 504, 506ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯ ಹುಡುಕಾಟ ಆರಂಭಿಸಿದ್ದಾರೆ.

ವಾಸ್ತವವಾಗಿ ಇದೇ ತಿಗಳ 5 ರಂದು ದಾಮೋಹ್​ ರಸ್ತೆಯಲ್ಲಿ ಜ್ಯೋತಿರಾದಿತ್ಯ ಸಿಂಧಿಯಾರ ರೋಡ್​ ಶೋ ಆಯೋಜಿಸಲಾಗಿದೆ. ಇದಾದ ಬಳಿಕ ಅವರು ಹಟಾದಲ್ಲಿ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಹೀಗಿರುವಾಗ ಸಮಾರಂಭದ ಎರಡು ದಿನಗಳ ಮೊದಲು ಹಟಾ ಕ್ಷೇತ್ರದ ಶಾಸಕಿಯ ಮಗನ ಈ ಪೋಸ್ಟ್​ ಭಾರೀ ಆತಂಕ ಸೃಷ್ಟಿ ಮಾಡಿದೆ.
ಈ ವಿಚಾರವಾಗಿ ಶಾಸಕಿ ಉಮಾದೇವಿ ಖಟೀಕ್​ ಮಾಧ್ಯಮಗಳಿಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ, ಆದರೆ ಅವರ ರೆಕಾರ್ಡಿಂಗ್​ ಒಂದು ವೈರಲ್​ ಆಗಿದ್ದು, ಅದರಲ್ಲಿ ಅವರು ತಮ್ಮ ಮಗನನ್ನು ಬಂಧಿಸಿ ಜೈಲಿಗೆ ಹಾಕುವಂತೆ ಹೇಳಿಕೆ ನೀಡಿದ್ದಾರೆ. ಹೀಗಿರುವಾಗ ಕಾಂಗ್ರೆಸ್​ ನಾಯಕರು ವಿರೋಧ ವ್ಯಕ್ತಪಡಿಸಿ ಪೊಲೀಸ್​ ಠಾಣೆಗೆ ತೆರಳಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
First published: September 4, 2018, 9:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading