News18 India World Cup 2019

ಪ್ರೀತಿ ನಿರಾಕರಿಸಿದ ಹುಡುಗಿಯನ್ನೇ ಅಪಹರಿಸೋಣ ಎಂದ ಬಿಜೆಪಿ ಶಾಸಕ


Updated:September 4, 2018, 7:10 PM IST
ಪ್ರೀತಿ ನಿರಾಕರಿಸಿದ ಹುಡುಗಿಯನ್ನೇ ಅಪಹರಿಸೋಣ ಎಂದ ಬಿಜೆಪಿ ಶಾಸಕ

Updated: September 4, 2018, 7:10 PM IST
ನ್ಯೂಸ್​ 18 ಕನ್ನಡ

ಮುಂಬೈ (ಸೆ. 04): ಮದುವೆ ಪ್ರಸ್ತಾಪವನ್ನು ನಿರಾಕರಿಸಿದ ಹುಡುಗಿಯನ್ನು ಅಪಹರಿಸಿ ನಿಮಗಾಗಿ ಕರೆ ತರುತ್ತೇನೆ ಎಂದು ಬಿಜೆಪಿ ಶಾಸಕ ಯುವಕರಿಗೆ ಸಾರ್ವಜನಿಕವಾಗಿ ವಾಗ್ದಾನಾ ನೀಡಿದ್ದಾರೆ.

ಘಾಟ್​ಕೊಪರ್​ನಲ್ಲಿ ಗೋಕುಲಾಷ್ಠಮಿ ಪ್ರಯುಕ್ತ ಮೊಸರು ಹೊಡೆಯುವ ಸಂಭ್ರಮಾಚಾರಣೆಯಲ್ಲಿ ಭಾಗಿಯಾಗಿದ್ದ ​ ಬಿಜೆಪಿ ಶಾಸಕ ರಾಮ್​ ಕದಮ್​ ಈ ರೀತಿಯ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಅಲ್ಲದೇ ತಮ್ಮ ಮೊಬೈಲ್​ ನಂಬರ್​ ಅನ್ನು ಕೂಡ ಜನರಿಗೆ ನೀಡಿದ್ದಾರೆ.

"ನಿಮಗೆ ಏನಾದರೂ ಸಹಾಯ ಬೇಕಾದರೆ ನನಗೆ ಕರೆ ಮಾಡಿ. ನೀವು ಯಾವುದಾದರೂ ಹುಡುಗಿ ಇಷ್ಟಪಟ್ಟು, ಆಕೆ ನಿಮ್ಮ ಪ್ರೀತಿ ನಿರಾಕರಿಸಿದಾಗ ಸಹಾಯ ಬೇಕು ಎಂದರೆ ಕರೆ ಮಾಡಿ. ನಿಮ್ಮ ಪೋಷಕರು ಆ ಹುಡುಗಿ ನಿಮ್ಮ ಪೋಷಕರಿಗೂ ಇಷ್ಟವಾದರೆ ನಾನು ಆ ಯುವತಿಯನ್ನು ಅಪಹರಿಸಿ ನಿಮಗಾಗಿ ಕರೆ ತರುತ್ತೇನೆ. ನನ್ನ ನಂಬರ್​ನನ್ನು ತೆಗೆದುಕೊಳ್ಳಿ ಎಂದು ಸಾರ್ವಜನಿಕವಾಗಿ ತಿಳಿಸಿದ್ದಾರೆ".

ಈ ರೀತಿಯ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕನ ಈ ಹೇಳಿಕೆಯ ವಿಡಿಯೋವನ್ನು ಎನ್​ಸಿಪಿ ಶಾಸಕ ಜೀತೆಂದ್ರ ಆವ್ಹದ್​ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ಈ ವಿಡಿಯೋ ವೈರಲ್​ ಆಗಿದೆ,

"ಕಾನೂನು ರೂಪಿಸಬೇಕಾದವರೇ ಈ ರೀತಿ ಬಹಿರಂಗವಾಗಿ ಹೇಳಿಕೆ ನೀಡಿದರೆ ಮಹಿಳೆಯರಿಗೆ ಎಲ್ಲಿದೆ ಸುರಕ್ಷೆ?" ಎಂದು ಅವ್ಹದ್​ ಪ್ರಶ್ನಿಸಿದ್ದಾರೆ.
Loading...

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕದಮ್​ "ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ.  ಮಕ್ಕಳು ಮದುವೆ. ಪ್ರೀತಿ ವಿಷಯದಲ್ಲಿ ಅವರ ಪೋಷಕರ ಸಲಹೆ ಕೇಳಬೇಕು ಎಂದು ನಾವು ಹೇಳಿಕೆ ನೀಡಿದ್ದೆ. ಆದರೆ ನನ್ನ ಹೇಳಿಕೆಯನ್ನು ವಿಪಕ್ಷಗಳು ತಿರುಚಿ ನನ್ನನ್ನು ಗುರಿಯಾಗಿಸುತ್ತೀವೆ" ಎಂದಿದ್ದಾರೆ.

ಕದಮ್​ ಘಾಟ್ಕೋಪರ್​ನಲ್ಲಿ ದಹಿ ಹಂಡಿ (ಮೊಸರು ಮಡಕೆ ಹೊಡೆಯುವ)  ಕಾರ್ಯಕ್ರಮ ಏರ್ಪಡಿಸುವಲ್ಲಿ ಖ್ಯಾತಿ ಹೊಂದಿದ್ದಾರೆ. ಇವರ ಈ ಕಾರ್ಯಕ್ರಮದಲ್ಲಿ ಅನೇಕ ತಾರೆಯರು, ರಾಜಕೀಯ ನಾಯಕರುಗಳು ಕೂಡ ಭಾಗಿಯಾಗುತ್ತಾರೆ, ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್​ ಕೂಡ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು.
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...